ಬೆಂಗಳೂರು: ಬೆಂಗಳೂರಿನಲ್ಲಿ ಮದ್ಯ ಪ್ರಿಯರಿಗೆ ಬಿಗ್ ಶಾಕ್ ಎದುರಾಗಿದ್ದು, ನಾಳೆಯಿಂದ ಮೂರು ದಿನ ಎಣ್ಣೆ ಸಿಗೋದಿಲ್ಲ ಎಂದು ತಿಳಿದು ಬಂದಿದೆ. ಸರ್ಕಾರದ ಇ-ಇಂಡೆಂಟ್ ವಿರುದ್ಧ ಮದ್ಯದಂಗಡಿ ಮಾಲೀಕರು ಆಕ್ರೋಶ ಹೊರಹಾಕುತ್ತಿದ್ದಾರೆ. ಕರ್ನಾಟಕ ರಾಜ್ಯ ಪಾನೀಯ ನಿಗಮ ಇ-ಇಂಡೆಂಟ್ ತಂದಿದ್ದು, ಆನ್ ಲೈನ್ ಮೂಲಕ ಮದ್ಯದಂಗಡಿ ಮಾಲಿಕರು ಎಣ್ಣೆ ಖರೀದಿಸಬೇಕಾಗಿದೆ.
ಇದರ ವಿರುದ್ಧ ವೈನ್ ಮರ್ಚೆಂಟ್ಸ್ ಅಸೋಸಿಯೇನ್ಸ್ ಒಕ್ಕೂಟ ಅಸಮಧಾನ ವ್ಯಕ್ತಪಡಿಸಿದ್ದು, ಮೇ 6 ರಿಂದ ವಿವಿಧ ಜಿಲ್ಲೆಗಳಲ್ಲಿ ಒಂದೊಂದು ದಿನ ಖರೀದಿಗೆ ಬ್ರೇಕ್ ಹಾಕಲಾಗಿದೆ. ಮೇ 17 ಮತ್ತು ಮೇ 19ರಂದು ಮದ್ಯ ಸಿಗೋದಿಲ್ಲ, ಬೆಂಗಳೂರು ಗ್ರಾಮಾಂತರ, ನಗರ ಜಿಲ್ಲೆ ಮದ್ಯ ಖರೀದಿ ಮಾಡದಿರಲು ನಿರ್ಧಾರ ಮಾಡಲಾಗಿದ್ದು, ನಾಳೆಯಿಂದ ಈ ಎರಡು ಜಿಲ್ಲೆಗಳಲ್ಲಿ ಎಣ್ಣೆ ಸಿಗೋದು ಅನುಮಾನವಾಗಿದೆ.