ಬೆಂಗಳೂರಿನಲ್ಲಿ ಪ್ರತಿಭಟನೆ, ಮೆರವಣಿಗೆಗೆ ನಿರ್ಬಂಧ: ಹೈಕೋರ್ಟ್‌ ಆದೇಶ

ಬೆಂಗಳೂರು : ರಾಜ್ಯ ಹೈಕೋರ್ಟ್‌ ವಿಭಾಗೀಯ ಪೀಠ ಮಹತ್ವದ ಆದೇಶ ನೀಡಿದ್ದು, ಬೆಂಗಳೂರಲ್ಲಿ ಪ್ರತಿಭಟನೆ, ಮೆರವಣಿಗೆಗೆ ಹೈಕೋರ್ಟ್‌ ನಿರ್ಬಂಧ ವಿಧಿಸಿದೆ. ಇನ್ನು ಫ್ರೀಡಂಪಾರ್ಕ್‌ನ ನಿಗಧಿತ ಜಾಗದಲ್ಲಿ ಮಾತ್ರ ಪ್ರತಿಭಟನೆ, ಮೆರವಣಿಗೆಗೆ ಅವಕಾಶ ನೀಡುವಂತೆ ರಾಜ್ಯ ಸರ್ಕಾರಕ್ಕೆ ಸೂಚಿಸಿದೆ.

ಕಾಂಗ್ರೆಸ್‌ ಮೇಕೆದಾಟು ಪಾದಯಾತ್ರೆಯಿಂದಾಗಿ ಟ್ರಾಫಿಕ್‌ ಜಾಮ್‌ ಹಿನ್ನೆಲೆ ಐಪಿಎಲ್‌ ಸಲ್ಲಿಸಲಾಗಿತ್ತು. ಸಧ್ಯ ಅರ್ಜಿಯ ವಿಚಾರಣೆ ನಡೆಸಿದ ಹೈಕೋರ್ಟ್‌ ಈ ಮಹತ್ವದ ಆದೇಶ ಹೊರಡಿಸಿದೆ. ಇನ್ನೂ ನ್ಯಾಯಾಮೂರ್ತಿಗಳಿಗೂ ಟ್ರಾಫಿಕ್‌ ಜಾಮ್‌ ಬಿಸಿ ತಟ್ಟಿದ್ದು, ಈ ಐಪಿಎಲ್‌ ವಿಚಾರಣೆ ವೇಳೆ ನ್ಯಾಯಾಧೀಶರು ರಾಜ್ಯ ಸರ್ಕಾರವನ್ನ ತರಾಟೆಗೆ ತೆಗೆದುಕೊಂಡರು.

‘ಪ್ರತಿಭಟನೆ, ಮೆರವಣಿಗೆ ನಿಲ್ಲಿಸಲು ಸರ್ಕಾರಕ್ಕೆ ಸಾಧ್ಯವಿಲ್ಲವೇ? ಮೇಖ್ರಿ ಸರ್ಕಲ್‌, ಅರಮನೆ ಮೈದಾನದ ಬಳಿ ಜಾಮ್‌ ಆಗಿದೆ. ನ್ಯಾಯ ಗ್ರಾಮದಿಂದ ಹೈಕೋರ್ಟ್‌ಗೆ ಬರಲು ಒಂದು ಗಂಟೆಯಾಗಿದೆ. ಹೀಗಾದರೆ ಬೆಂಗಳೂರಿನ ಜನರು ಕೆಲಸ ಮಾಡುವುದು ಹೇಗೆ? ಇದೇ ಮೊದಲು ಪ್ರತಿಭಟನೆ ನಡೆಯುತ್ತಿಲ್ಲ. ಹಿಂದಿನಿಂದಲೂ ಪ್ರತಿಭಟನೆಗಳಿಂದ ಟ್ರಾಫಿಕ್‌ ಜಾಮ್‌ ಆಗ್ತಿದೆ. ಈಗ ಆಗದಿದ್ದರೆ ಇನ್ಯಾವಾಗ ಕ್ರಮ ಕೈಗೊಳ್ಳುತ್ತೀರಿ? ಎಂದು ರಾಜ್ಯ ಸರ್ಕಾರವನ್ನ ಸಿಜೆ ರಿತುರಾಜ್‌ ಅವಸ್ತಿ, ನ್ಯಾ. ಕೃಷ್ಣಕುಮಾರ್‌ ಅವರಿದ್ದ ಪೀಠ ತರಾಟೆಗೆ ತೆಗೆದುಕೊಂಡಿದೆ.

ಇನ್ನು ‘ನಿಗದಿತ ಸ್ಥಳ ಬಿಟ್ಟ ಬೇರೆಡೆ ಪ್ರತಿಭಟನೆಗೆ ಅವಕಾಶ ನೀಡಬಾರದು. ಯಾವುದೇ ಸಂಘಟನೆ, ಪಕ್ಷಗಳಿಗೆ ಅವಕಾಶ ನೀಡಬಾರದು. ಪ್ರತಿಭಟನೆಗಳಿಂದಾಗಿ ದೈನಂದಿನ ಜೀವನದ ಮೇಲೆ ಪರಿಣಾಮವಾಗ್ತಿದೆ. ಟ್ರಾಫಿಕ್‌ ಜಾಮ್‌ನಿಂದ ಬೆಂಗಳೂರಿನಲ್ಲಿ ಜನರಿಗೆ ಸಮಸ್ಯೆಯಾಗುತ್ತಿದೆ. ಇಂತಹ ಮೆರವಣಿಗೆಗಳ ಮೇಲೆ ಸರ್ಕಾರ ಕ್ರಮ ಕೈಗೊಳ್ಳಬೇಕು. ಇಂತಹ ಘಟನೆಗಳು ಪುನರಾವರ್ತನೆಯಾಗದಂತೆ ಕ್ರಮ ತೆಗೆದುಕೊಳ್ಳಿ’ ಎಂದು ಸರ್ಕಾರಕ್ಕೆ ಸೂಚಿಸಿದ್ರು.

Gayathri SG

Recent Posts

ಚುನಾವಣಾ ಕರ್ತವ್ಯದಲ್ಲಿದ್ದ ಬಿಎಸ್‌ಎಫ್ ಯೋಧನಿಂದ ಲೈಂಗಿಕ ಕಿರುಕುಳ

ಪಶ್ಚಿಮ ಬಂಗಾಳದ ಉಲುಬೇರಿಯಾ ಲೋಕಸಭಾ ಕ್ಷೇತ್ರದಲ್ಲಿ ಚುನಾವಣಾ ಕರ್ತವ್ಯಕ್ಕೆ ನಿಯೋಜನೆಗೊಂಡಿದ್ದ ಬಿಎಸ್‌ಎಫ್ ಯೋಧನನ್ನು ಲೈಂಗಿಕ ಕಿರುಕುಳ ಆರೋಪ ಬಂದ ಹಿನ್ನೆಲೆಯಲ್ಲಿ…

12 mins ago

ಮೇಯುತ್ತಿದ್ದ ಕುರಿಗಳ ಮೇಲೆ ನಾಯಿಗಳ ದಾಳಿ : ಹತ್ತು ಕುರಿಗಳು ಬಲಿ

ಜಮೀನಿನಲ್ಲಿ ಮೇಯುತ್ತಿದ್ದ ಕುರಿಗಳ ಮೇಲೆ ಏಕಾಏಕಿ ದಾಳಿ ನಡೆಸಿದ ನಾಯಿಗಳ ಹಿಂಡು ಹತ್ತು ಕುರಿಗಳನ್ನ ಕೊಂದುಹಾಕಿರುವ ಘಟನೆ ಗುಂಡ್ಲುಪೇಟೆ ತಾಲೂಕಿನ…

12 mins ago

ಹೆಲಿಕಾಪ್ಟರ್ ದುರಂತ : ಇರಾನ್ ಅಧ್ಯಕ್ಷ ಇಬ್ರಾಹಿಂ ರೈಸಿ ಸಾವು

 ಇರಾನ್ ಅಧ್ಯಕ್ಷ ಪ್ರಯಾಣಿಸುತ್ತಿದ್ದ ಹೆಲಿಕಾಪ್ಟರ್​ ಭಾನುವಾರ ಪತನಗೊಂಡಿದ್ದು, ಇಬ್ರಾಹಿಂ ರೈಸಿ ಸಜೀವದಹನವಾಗಿರುವ ಮಾಹಿತಿ ಲಭ್ಯವಾಗಿದೆ. ಭಾನುವಾರದಿಂದ ನಡೆಯುತ್ತಿದ್ದ ಗಂಟೆಗಳ ಕಾರ್ಯಾಚರಣೆ…

38 mins ago

ಭಾರತದಲ್ಲಿ ಮೊದಲ ಬಾರಿಗೆ ಮತದಾನ ಮಾಡಿದ ಅಕ್ಷಯ್‌ ಕುಮಾರ್‌

ಲೋಕಸಭೆ ಚುನಾವಣೆಯ ಐದನೇ ಹಂತದ ಮತದಾನ ಪ್ರಕ್ರಿಯೆ ಈಗಾಗಲೇ ಶುರುವಾಗಿದೆ. ಆರು ರಾಜ್ಯಗಳು ಹಾಗೂ ಎರಡು ಕೇಂದ್ರಾಡಳಿತ ಪ್ರದೇಶಗಳ 49…

54 mins ago

ಕಾಶ್ಮೀರ ವಾಪಸ್ ಪಡೆದೇ ಪಡೆಯುತ್ತೇವೆ: ಗೃಹ ಸಚಿವ ಅಮಿತ್ ಶಾ

ಪಾಕಿಸ್ತಾನದ ಬಳಿ ಪರಮಾಣು ಬಾಂಬ್​ ಇದೆ ಹಾಗಾಗಿ ನಾವು ಅವರನ್ನು ಗೌರವಿಸಬೇಕಾಗುತ್ತದೆ ಎಂಬ ಕಾಂಗ್ರೆಸ್​ ನಾಯಕ ಮಣಿಶಂಕರ್​ ಐಯ್ಯರ್​ ಹೇಳಿಕೆಗೆ…

1 hour ago

ಖಾಸಗಿ ಶಾಲೆಗಳಲ್ಲಿ 30% ವರೆಗೆ ಶುಲ್ಕ ಏರಿಕೆ : ಕಂಗಾಲಾದ ಪೋಷಕರು

2024-25ನೇ ಸಾಲಿಗೆ ಶಾಲಾ ಪ್ರವೇಶ ಪ್ರಕ್ರಿಯೆ ನಡೆಸುತ್ತಿರುವ ಖಾಸಗಿ ಶಾಲೆಗಳು ಶೇ.20ರಿಂದ 30ರವರೆಗೆ ಶುಲ್ಕ ಹೆಚ್ಚಿಸುವ ಮೂಲಕ ಸುಲಿಗೆ ಪದ್ಧತಿ…

2 hours ago