ಬೆಂಗಳೂರಿಗೆ ʻಉಕ್ರೇನ್ʼನಲ್ಲಿ ಸಿಲುಕಿದ್ದ 31 ವಿದ್ಯಾರ್ಥಿಗಳು ಆಗಮನ

ಬೆಂಗಳೂರು :  ಉಕ್ರೇನ್‌ನಿಂದ ಆಪರೇಷನ್‌ ಗಂಗಾ ಕಾರ್ಯಾಚರಣೆ ಮೂಲಕ ಬುಧವಾರ ಕರ್ನಾಟಕದ 31 ವೈದ್ಯಕೀಯ ವಿದ್ಯಾರ್ಥಿಗಳು ಬಂದಿದ್ದಾರೆ.ಉಕ್ರೇನ್ ನಿಂದ ಮಂಗಳವಾರ ರಾತ್ರಿ ದೆಹಲಿಯ ಕರ್ನಾಟಕ ಭವನದಲ್ಲಿ ತಂಗಿದ್ದ ಈ ವಿದ್ಯಾರ್ಥಿಗಳು ಬೆಂಗಳೂರಿಗೆ ಬಂದಿಳಿದ್ದಾರೆ.ಈ ಮೂಲಕ ಫೆ. 27 ರಿಂದ ಈವರೆಗೆ 86 ವಿದ್ಯಾರ್ಥಿಗಳು ರಾಜ್ಯಕ್ಕೆ ಮರಳಿದ್ದಾರೆ.

ಇನ್ನು ಉಕ್ರೇನ್‌ನಲ್ಲಿ ಸಿಲುಕಿರುವ ಸುಮಾರು 200 ಭಾರತೀಯರನ್ನು ಹೊತ್ತ ವಿಶೇಷ ವಿಮಾನವು ಇಂದು ರೊಮೇನಿಯಾದಿಂದ ದೆಹಲಿ ತಲುಪಿದೆ. ಇಂದಿರಾಗಾಂಧಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸಿದ ಭಾರತೀಯ ನಾಗರಿಕರನ್ನು ಕೇಂದ್ರ ರಾಜ್ಯ ಸಚಿವ ರಾಜೀವ್ ಚಂದ್ರಶೇಖರ್ ಬರಮಾಡಿಕೊಂಡರು. ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದರು.

‘ನಾವು ಕಷ್ಟಗಳ ನಡುವೆಯೂ ನಮ್ಮ ನಾಗರಿಕರನ್ನು ಮರಳಿ ಕರೆತರುತ್ತಿದ್ದೇವೆ. ಸಂಕಷ್ಟದಲ್ಲಿರುವ ಪ್ರತಿಯೊಬ್ಬ ಭಾರತೀಯರನ್ನು ತಲುಪುವುದು ಮೋದಿ ಸರ್ಕಾರದ ಮೂಲ ಸಿದ್ಧಾಂತವಾಗಿದೆ’ ಎಂದು ಚಂದ್ರಶೇಖರ್ ಮಾಧ್ಯಮಗಳಿಗೆ ತಿಳಿಸಿದರು.

Swathi MG

Recent Posts

‘ಕಾಂತಾರ’ ಪ್ರೀಕ್ವೆಲ್‌ ಶೂಟಿಂಗ್‌ ಬಗ್ಗೆ ಅಪ್‌ಡೇಟ್‌ ಕೊಟ್ಟ ರಿಷಬ್‌ ಶೆಟ್ಟಿ

ಡಿವೈನ್ ಸ್ಟಾರ್ ರಿಷಬ್ ಶೆಟ್ಟಿ ಸದ್ಯ ‘ಕಾಂತಾರ’ ಪ್ರೀಕ್ವೆಲ್ ಚಿತ್ರದ ಕೆಲಸದಲ್ಲಿ ಬ್ಯುಸಿಯಾಗಿದ್ದಾರೆ. ಇದರ ನಡುವೆ ಇಂದು ಬೈಂದೂರಿನ ಕೆರಾಡಿಯಲ್ಲಿ…

8 mins ago

ಇವಿಎಂಗೆ ಬೆಂಕಿ ಹಚ್ಚಿದ ಯುವಕ: ಪೊಲೀಸರ ವಶಕ್ಕೆ

ನೆರೆಯ ಮಹಾರಾಷ್ಟ್ರದ ಸಾಂಗ್ಲಿ ಜಿಲ್ಲೆಯ ಸಾಂಗೋಲಾ ತಾಲೂಕಿನ ಬಾಗಲವಾಡಿ ಗ್ರಾಮದಲ್ಲಿ ಯುವಕನೊಬ್ಬ ಇವಿಎಂಗೆ ಬೆಂಕಿ ಹಚ್ಚಿದ್ದಾನೆ.

22 mins ago

100 ವರ್ಷ ತುಂಬಿದ ಅಜ್ಜನಿಗೆ ಹುಟ್ಟುಹಬ್ಬದ ಸಂಭ್ರಮ

೧೦೦ ವರ್ಷ ತುಂಬಿದ ಅಜ್ಜನಿಗೆ ಇಡೀ ಕುಟುಂಬ, ಹಾಗೂ ಗ್ರಾಮದ ವತಿಯಿಂದ ಹುಟ್ಟುಹಬ್ಬದ ಸಂಭ್ರಮ ಆಚರಣೆ ಮಾಡಿದ ವಿಶೇಷ ಕಾರ್ಯಕ್ರಮ…

39 mins ago

ಖ್ಯಾತ ಗಾಯಕಿ ಅನನ್ಯಾ ಬಿರ್ಲಾ ಪೋಸ್ಟ್​ ನೋಡಿ ಅಭಿಮಾನಿಗಳು ಶಾಕ್​

ಆದಿತ್ಯ ಬಿರ್ಲಾ ಗ್ರೂಪ್‌ ಮುಖ್ಯಸ್ಥರಾದ ಕುಮಾರ್ ಮಂಗಲಂ ಬಿರ್ಲಾ ಅವರ ಪುತ್ರಿ ಅನನ್ಯಾ ಬಿರ್ಲಾ ಅವರು ಅಭಿಮಾನಿಗಳಿಗೆ ಶಾಕಿಂಗ್​ ವಿಚಾರವೊಂದನ್ನು…

41 mins ago

ಮಲ್ಪೆ ಬಂದರಿನಲ್ಲಿರುವ ಅಗ್ನಿಶಾಮಕ ದಳಕ್ಕೆ ತಕ್ಷಣ ವಾಹನ ಒದಗಿಸಿ: ಶಾಸಕ ಯಶ್ ಪಾಲ್ ಸುವರ್ಣ ಆಗ್ರಹ

ಮಲ್ಪೆ ಮೀನುಗಾರಿಕೆ ಬಂದರಿನಲ್ಲಿರುವ ಅಗ್ನಿಶಾಮಕ ದಳದ 15 ವರ್ಷ ಹಿಂದಿನ ಎರಡು ವಾಹನಗಳನ್ನು ಸರ್ಕಾರ ಎರಡು ತಿಂಗಳ ಹಿಂದೆ ಸೇವೆಯಿಂದ…

56 mins ago

ಹುಟ್ಟೂರು ಕೆರಾಡಿಯಲ್ಲಿ ಮತ ಚಲಾಯಿಸಿದ ರಿಷಬ್ ಶೆಟ್ಟಿ

ಕಾಂತಾರ’ ಸೂಪರ್ ಸ್ಟಾರ್ ರಿಷಬ್ ಶೆಟ್ಟಿ ‘ಕಾಂತಾರ’ ಪಾರ್ಟ್‌ 1 ಚಿತ್ರದ ಶೂಟಿಂಗ್‌ಗೆ ಬ್ರೇಕ್ ನೀಡಿ ಇಂದು (ಮೇ.7) ಮತದಾನ…

1 hour ago