ನಮ್ಮ ಮುಷ್ಕರವನ್ನು ಬೆಂಬಲಿಸಿ: ಯಶ್​ಗೆ ಪತ್ರ ಬರೆದ ಸಾರಿಗೆ ನೌಕರರು

ಬೆಂಗಳೂರು: ರಾಜ್ಯ ಸರ್ಕಾರ ಹಾಗೂ ಸಾರಿಗೆ ನೌಕರರ ನಡುವಿನ ಹಗ್ಗಜಗ್ಗಾಟ ತಾರ್ಕಿಕ ಅಂತ್ಯ ಕಾಣದೇ ಮುಷ್ಕರ ಎಂಟನೇ ದಿನಕ್ಕೆ ಕಾಲಿಟ್ಟಿದೆ. ಈ ವೇಳೆಯಲ್ಲಿ ಸಾರಿಗೆ ನೌಕರರು ಸ್ಯಾಂಡಲ್​ವುಡ್​ನ ಬಹುಬೇಡಿಕೆ ನಟ, ರಾಕಿಂಗ್​ ಸ್ಟಾರ್ ಅವರಿಗೆ ತಮ್ಮ ಮುಷ್ಕರಕ್ಕೆ ಬೆಂಬಲ ನೀಡುವಂತೆ ಮನವಿ ಮಾಡಿರುವ ಪತ್ರವೊಂದು ಹರಿದಾಡಲಾರಂಭಿಸಿದೆ. ಕರ್ನಾಟಕ ರಾಜ್ಯ ಸಾರಿಗೆ ನೌಕರರ ಒಕ್ಕೂಟದ ಹೆಸರಿನಲ್ಲಿ ಪತ್ರ ಬರೆಯಲಾಗಿದ್ದು, ನಿಮ್ಮ ತಂದೆಯವರೂ ಬಿಎಂಟಿಸಿ ನಿವೃತ್ತ ಚಾಲಕರು ಹೀಗಾಗಿ ಸಾರಿಗೆ ನೌಕರರ ಕುಟುಂಬದ ಹಿನ್ನೆಲೆಯುಳ್ಳ ನೀವು ಅನಿರ್ದಿಷ್ಟಾವಧಿ ಮುಷ್ಕರಕ್ಕೆ ಬೆಂಬಲ ನೀಡಬೇಕೆಂದು ಮನವಿ ಮಾಡಲಾಗಿದೆ.
ಯಶ್, ಜನಪ್ರಿಯ ನಟರು ಹಾಗೂ ನಿವೃತ್ತ ಬಿಎಂಟಿಸಿ ಚಾಲಕರ ಪುತ್ರ ಎಂಬ ಒಕ್ಕಣೆಯೊಂದಿಗೆ ಆರಂಭಗೊಂಡಿರುವ ಈ ಪತ್ರವು ಯಾವುದೇ ಅಧಿಕೃತ ಮುದ್ರೆಯನ್ನಾಗಲೀ, ಸಹಿಯನ್ನಾಗಲೀ, ದಿನಾಂಕವನ್ನಾಗಲೀ ಹೊಂದಿಲ್ಲ. ಇದನ್ನು ಯಶ್ ಅವರಿಗೆ ರವಾನೆ ಮಾಡಿದ್ದಾರೋ, ಇಲ್ಲವೋ ಎಂಬ ಬಗ್ಗೆಯೂ ಸ್ಪಷ್ಟನೆ ಸಿಕ್ಕಿಲ್ಲ. ಆದರೆ, ಯಶ್ ಅವರ ತಂದೆ ಸಾರಿಗೆ ನೌಕರರಾಗಿದ್ದರು ಎಂಬ ವಿಷಯವನ್ನಿಟ್ಟುಕೊಂಡು ನಿಮ್ಮ ತಂದೆ ಅವರ ಅನುಭವ, ನೋವನ್ನು ನಿಮ್ಮ ಜತೆ ಹಂಚಿಕೊಂಡಿರಬಹುದು. ನೀವು ಸಮಾಜಸೇವೆಯಲ್ಲಿ ಗುರುತಿಸಿಕೊಂಡಿದ್ದೀರಿ. ಈಗ ನಮಗೆ ಬೆಂಬಲಿಸಿ ಎಂಬ ಬೇಡಿಕೆಯನ್ನು ಸಲ್ಲಿಸಲಾಗಿದೆ.
ಸದ್ಯ ಈ ಪತ್ರಕ್ಕೆ ರಾಕಿಂಗ್ ಸ್ಟಾರ್ ಯಶ್ ಪ್ರತಿಕ್ರಿಯಿಸುತ್ತಾರಾ? ನೌಕರರ ಮನವಿಗೆ ಸ್ಪಂದಿಸಿ ಮುಷ್ಕರಕ್ಕೆ ಮನವಿ ನೀಡುತ್ತಾರಾ? ಆ ಮೂಲಕ ಎಂಟನೇ ದಿನಕ್ಕೆ ಕಾಲಿಟ್ಟಿರುವ ಸಾರಿಗೆ ಮುಷ್ಕರ ಮತ್ತಷ್ಟು ತೀವ್ರಗೊಳ್ಳಲಿದೆಯಾ? ಎಂಬೆಲ್ಲಾ ಪ್ರಶ್ನೆಗಳು ಹುಟ್ಟಿಕೊಂಡಿವೆ. ಆರನೇ ವೇತನ ಆಯೋಗದ ಶಿಫಾರಸಿಗೆ ಆಗ್ರಹಿಸಿ ಸಾರಿಗೆ ನೌಕರರು ಎಷ್ಟೇ ಬಿಗಿಪಟ್ಟು ಹಿಡಿದರೂ ಸರ್ಕಾರ ಮಾತ್ರ ಕಟ್ಟುನಿಟ್ಟಾಗಿ ಅದು ಸಾಧ್ಯವೇ ಇಲ್ಲ ಎಂದು ತಿಳಿಸಿದೆ.ಆದರೆ, ಇಟ್ಟ ಹೆಜ್ಜೆಯಿಂದ ಹಿಂದೆ ಸರಿಯಲು ಒಪ್ಪದ ನೌಕರರು ಬೇಡಿಕೆ ಈಡೇರುವ ತನಕವೂ ಮುಷ್ಕರ ಮಾಡುವುದಾಗಿ ಎಚ್ಚರಿಸಿದ್ದಾರೆ. ಏತನ್ಮಧ್ಯೆ ರಾಜ್ಯದ ವಿವಿಧ ಸಾರಿಗೆ ವಿಭಾಗಗಳಲ್ಲಿ ಕೆಲ ನೌಕರರು ಕೆಲಸಕ್ಕೆ ಹಾಜರಾಗಿರುವರಾದರೂ ಬೆರಳೆಣಿಕೆ ಸಂಖ್ಯೆಯಷ್ಟು ಬಸ್​ಗಳು ಮಾತ್ರ ಸಂಚರಿಸುತ್ತಿವೆ.

Desk

Recent Posts

ಪ್ರವಾಸಕ್ಕೆ ಬಂದಿದ್ದ ಐವರು ವಿದ್ಯಾರ್ಥಿಗಳ ದಾರುಣ ಸಾವು

ಪ್ರವಾಸಕ್ಕೆಂದು ತೆರಳಿದ್ದ ಐವರು ವಿದ್ಯಾರ್ಥಿಗಳು ನೀರುಪಾಲದ ದಾರುಣ ಘಟನೆ ಕನಕಪುರ ತಾಲೂಕಿನ ಮೇಕೆದಾಟು ಬಳಿಯ ಸಂಗಮದ ಕಾವೇರಿ ನದಿಯಲ್ಲಿ ನಡೆದಿದೆ.…

1 min ago

ನಿಯಂತ್ರಣ ಕಳೆದುಕೊಂಡ ‘ಅಮಿತ್ ಶಾ’ ಪ್ರಯಾಣಿಸುತ್ತಿದ್ದ ಹೆಲಿಕಾಪ್ಟರ್

ಬಿಹಾರದ ಬೇಗುಸರಾಯ್‌ ನಿಂದ ಟೇಕ್ ಆಫ್ ಆಗುವ ಮೊದಲು ಅಮಿತ್ ಶಾ ಅವರ ಹೆಲಿಕಾಪ್ಟರ್ ಸ್ವಲ್ಪ ಸಮಯದವರೆಗೆ ನಿಯಂತ್ರಣ ಕಳೆದುಕೊಂಡ…

9 mins ago

ಮುರುಘಾ ಸ್ವಾಮೀಜಿ ಮತ್ತೆ ಜೈಲಿಗೆ : ಮೇ 27ರವರೆಗೆ ನ್ಯಾಯಾಂಗ ಬಂಧನ

ಮುರುಘಾ ಮಠದ ವಸತಿ ಶಾಲ ವಿದ್ಯಾರ್ಥಿನಿಯರ ಮೇಲಿನ ಅತ್ಯಚಾರ ಪ್ರಕರಣದಲ್ಲಿ ಜಾಮನೀನು ಪಡೆದು ಹೊರ ಬಂದಿದ್ದ ಮುರುಘಾ ಶ್ರೀಗಳಿಗೆ ಪುನಃ…

19 mins ago

ಅಮಿತ್ ಶಾ ನಕಲಿ ವಿಡಿಯೋ ಹಂಚಿಕೆ : ತೆಲಂಗಾಣ ಸಿಎಂ ರೇವಂತ್‌ಗೆ ಸಮನ್ಸ್

ಕೇಂದ್ರ ಸಚಿವ ಅಮಿತ್‌ ಶಾ ಕುರಿತಾದ ನಕಲಿ ವಿಡಿಯೋವನ್ನು ʻಎಕ್ಸ್‌ʼನಲ್ಲಿ ಹಂಚಿಕೊಂಡ ಆರೋಪದ ಮೇರೆಗೆ ಮೇ 1ರಂದು ವಿಚಾರಣೆಗೆ ಹಾಜರಾಗುವಂತೆ…

47 mins ago

ರೇವಣ್ಣ ವಿಡಿಯೋ ಕೇಸ್‌ : ಡಿಸಿ ಸಿ. ಸತ್ಯಭಾಮ ಮತ್ತೊಂದು ಸ್ಫೋಟಕ ಮಾಹಿತಿ

ಇದೀಗ ಪ್ರಜ್ವಲ್‌ ರೇವಣ್ಣ ಅವರ ಅಶ್ಲೀಲ ವಿಡಿಯೋ ಪ್ರಕರಣ್ಣಕ್ಕೆ ಸಂಬಂಧ ಪಟ್ಟಂತೆ ಜಿಲ್ಲಾಧಿಕಾರಿ ಸಿ. ಸತ್ಯಭಾಮ ಮಾತನಾಡಿದ್ದು ಯಾರಾದ್ರೂ ಸಂತ್ರಸ್ತೆ…

1 hour ago

ಪೋಕ್ಸೋ ಕೇಸ್; ನ್ಯಾಯಾಲಯಕ್ಕೆ ಶರಣಾದ ಮುರುಘಾ ಶ್ರೀ

ಪೋಕ್ಸೋ ಪ್ರಕರಣದ ಆರೋಪಿಯಾಗಿರುವ ಮುರುಘಾ ಮಠದ ಶ್ರೀ ಶಿವಮೂರ್ತಿ ಮುರುಘಾ ಶರಣರು ಇಂದು ಮಧ್ಯಾಹ್ನ ನ್ಯಾಯಾಲಯಕ್ಕೆ ಶರಣಾದರು. ಪೋಕ್ಸೋ ಪ್ರಕರಣದಡಿ…

2 hours ago