ಬೆಂಗಳೂರು ನಗರ

‘ದಿ ಕಾಶ್ಮೀರ್ ಫೈಲ್ಸ್’ ಮೇಲಿರುವ ಆಸಕ್ತಿ ರಾಜ್ಯದ ಜನರ ಮೇಲಿಲ್ಲ; ಪ್ರಿಯಾಂಕ್ ಖರ್ಗೆ

ಬೆಂಗಳೂರು : ‘ದಿ ಕಾಶ್ಮೀರ್ ಫೈಲ್ಸ್’ ಸಿನಿಮಾದ ಮೇಲಿರುವ ಆಸಕ್ತಿ ರಾಜ್ಯದ ಜನರ ಮೇಲಿಲ್ಲ ಎಂದು ಮಾಜಿ ಸಚಿವ, ಕಾಂಗ್ರೆಸ್ ಶಾಸಕ ಪ್ರಿಯಾಂಕ್ ಖರ್ಗೆ ಶನಿವಾರ ಕಿಡಿ ಕಾರಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಕಾಶ್ಮೀರ್ ಫೈಲ್ಸ್ ಬಗ್ಗೆ ಸಾಕಷ್ಟು ಪ್ರಚಾರ ಮಾಡಿದರು. ರಾಜ್ಯ ಸರ್ಕಾರ ಟ್ಯಾಕ್ಸ್ ಫ್ರೀ ಮಾಡಿತು. ಸ್ಪೀಕರ್ ಅವರು ಸಿನಿಮಾ ನೋಡಿ ಅಂದರು. ಆದರೆ ನಾನು ಕೇಳೋದು ಇಷ್ಟೇ, ಕಾಶ್ಮೀರ್ ಫೈಲ್ಸ್ ಗೆ ಇವರು ಇಷ್ಟೊಂದು ಆಸಕ್ತಿ ನೀಡುತ್ತಾರೆ, ರಾಜ್ಯದ ಬಗ್ಗೆ ಇವರಿಗೆ ಆಸಕ್ತಿಯಿಲ್ಲ ಎಂದರು.

ಸಮಜಕಲ್ಯಾಣ ಇಲಾಖೆಯಲ್ಲಿ ಹಲವು ಯೋಜನೆ ಇವೆ.ಅದರಲ್ಲಿ ಗಂಗಾಕಲ್ಯಾಣ ಯೋಜನೆ ಒಂದು. 14,777 ಬೋರ್ ವೆಲ್ ಕೊರೆಯಲಾಗಿದೆ. ಅದರ ಬಗ್ಗೆ ಮಾಹಿತಿ ಕೇಳಿದ್ದೇನೆ, ಡ್ರಿಲ್ಲಿಂಗ್,ಪಂಪ್ ಅಳವಡಿಕೆ,ಪವರ್ ಮೂರು ಹಂತದಲ್ಲಿ ಆಗಬೇಕು. ಮೊದಲು ಮೂರು ಟೆಂಡರ್ ಕರೆಯಲಾಗುತ್ತಿತ್ತು. ನಾನು ಸಚಿವನಾಗಿದ್ದಾಗ ಜಿಲ್ಲಾವಾರು ಪ್ಯಾಕೇಜ್ ನೀಡುತ್ತಿದ್ದೆವು. ಒಬ್ಬ ಕಂಟ್ರಾಕ್ಟರ್ ಗೆ ಎರಡಕ್ಕಿಂತ ಹೆಚ್ಚು ಕೊಡುತ್ತಿರಲಿಲ್ಲ. ಆಗ ಜಿಲ್ಲಾಧಿಕಾರಿಗಳು ಇದರ ಹೊಣೆ ನೋಡಿಕೊಳ್ಳುತ್ತಿದ್ದರು. ಮೊದಲು ನಾವು ಪಂಪ್ ಸೆಟ್ ಉತ್ಪಾದಕರಿಗೆ ಕೊಡುತ್ತಿದ್ದೆವು. ಕ್ವಾಲಿಟಿ ಪಂಪ್ ಸೆಟ್ ಸಿಗಲೆಂದು ಕೊಡುತ್ತಿದ್ದೆವು, ಆದರೆ ಈಗ ಡ್ರಿಲ್,ಪಂಪ್ಸೆಟ್ ಇಬ್ಬರಿಗೂ ಸೇರಿ ಟೆಂಡರ್ ಕೊಡುತ್ತಿದ್ದಾರೆ. ಇದಕ್ಕೆ ನಮ್ಮ ಅಭ್ಯಂತರವೇನಿಲ್ಲ, ಆದರೆ ತರಾತುರಿಯಲ್ಲಿ ಕಂಟ್ರ್ಯಾಕ್ಟರ್ ಗಳನ್ನೇ ಬದಲು ಮಾಡಿದ್ದಾರೆ, ಕೆಬಿಜೆಎನ್ ಎಲ್ ನವರಿಗೆ ಗುತ್ತಿಗೆ ಕೊಟ್ಟಿದ್ದಾರೆ. ಅವರಿಗೆ ಇದರ ಬಗ್ಗೆ ಸರಿಯಾದ ಮಾಹಿತಿಯಿಲ್ಲ ಎಂದು ಆರೋಪಿಸಿದರು.

ಕೇವಲ 10/15 ಜನರಿಗೆ ಮಾತ್ರ ಅವಕಾಶ ಕೊಟ್ಟಿದ್ದಾರೆ. ಇದರಲ್ಲಿ ಎಲ್ಲಾ ನಿಯಮಗಳನ್ನ ಉಲ್ಲಂಘನೆ ಮಾಡಿದ್ದಾರೆ. ಗುತ್ತಿಗೆದಾರನಿಗೆ ಸಂಪೂರ್ಣ ಅನುಭವವಿರಬೇಕು. ಕನಿಷ್ಠ 70 ಬೋರ್ ವೆಲ್ ಕೊರೆಯಿಸಿರಬೇಕು. ಆದರೆ ಅಂತಹ ಅನುಭವವಿಲ್ಲದವರಿಗೆ ಟೆಂಡರ್ ಕೊಟ್ಟಿದ್ದಾರೆ. ಇವರು ಹೇಗೆ ಕ್ವಾಲಿಫೈ ಆದರು ಎಂದು ಪ್ರಶ್ನಿಸಿದರು.

ಬೋರ್ ವೆಲ್ ಟೆಂಡರ್ ನಲ್ಲಿ ಅಕ್ರಮದ ಬಗ್ಗೆ ನನಗಂತೂ ಆಚ್ಚರಿಯಿಲ್ಲ. ನಮ್ಮ ದೇಶದ ಪ್ರಧಾನಿಯ ಡಿಗ್ರಿಯೇ ಫೇಕ್ ಸಿಗುತ್ತಿದೆ. ಹಾಗಿರಬೇಕಾದರೆ ಟೆಂಡರ್ ಫೇಕ್ ಮಾಡೋದು ಕಷ್ಟವಲ್ಲ. ಕೋಟಾ ಶ್ರೀನಿವಾಸ್ ಪೂಜಾರಿ ಒಳ್ಳೆಯವರು, ಆದರೆ ಅಧಿಕಾರಿಗಳು ಅವರನ್ನ ದಾರಿತಪ್ಪಿ ಸುತ್ತಿದ್ದಾರೆ. ಸಮಾಜಕಲ್ಯಾಣ ಇಲಾಖೆಯಲ್ಲಿ ದಾರಿ ತಪ್ಪಿಸುತ್ತಿದ್ದಾರೆ. ಲಕ್ಷ್ಮಿ ವೆಂಕಟೇಶ್ವರ್ ಅವರಿಗೆ ಟೆಂಡರ್ ಕೊಟ್ಟಿದ್ದಾರೆ. ಮೊದಲು ಅವರಿಗೆ ಟೆಂಡರ್ ಕೊಟ್ಟಿಲ್ಲ,ಎರಡನೇ ತಿಂಗಳಿಗೆ ಎಲಿಜಬಲ್ ಸರ್ಟಿಪಿಕೆಟ್ ಕೊಡುತ್ತಾರೆ. ಇದು ಹೇಗೆ ಸಾಧ್ಯ ಅನ್ನೋದು ನಮ್ಮ ಪ್ರಶ್ನೆ ಎಂದರು.

ವಾಲ್ಮೀಕಿ ನಿಗಮದಲ್ಕಿ ಟೆಂಟರ್ ರದ್ದಾಗುತ್ತದೆ. ಆದಿ ಜಾಂಬವ ನಿಗಮದಲ್ಲಿಅರ್ಹ ಆಗುತ್ತದೆ. ಪಂಚಮುಖಿ ಬೋರ್ ವೆಲ್ ಗೆ ಕೊಟ್ಟಿದ್ದಾರೆ. ಟರ್ನ್ ಓವರ್ ಮೀರಿ ಅಲಾಟ್ ಮಾಡಲಾಗಿದೆ. ಒಂದು ಕಡೆ ಇಲ್ಲದ್ದು ಇನ್ನೊಂದು ಕಡೆ ಹೇಗೆ ಕ್ವಾಲಿಫೈ ಆಯ್ತು ಎಂದು ಗಂಗಾಕಲ್ಯಾಣ ಯೋಜನೆ ಬಗ್ಗೆ ಆಕ್ರೋಶ ಹೊರ ಹಾಕಿದರು.

Gayathri SG

Recent Posts

ಆರ್‌ಸಿಬಿ ಸಿಎಸ್‌ಕೆ ಹೈವೋಲ್ಟೇಜ್ ಪಂದ್ಯ: ಸೈಬರ್‌ ಖದೀಮರಿಂದ ವಂಚನೆ

ಇಂದು ಚಿನ್ನಸ್ವಾಮಿಯಲ್ಲಿ ನಡೆಯಲಿರುವ ಹೈವೋಲ್ಟೇಜ್ ಪಂದ್ಯದ ಟಿಕೆಟ್ ಈಗಾಗಲೇ ಸೋಲ್ಡ್ ಔಟ್ ಆಗಿದೆ. ಆದರೆ ಈ ಪಂದ್ಯದ ಟಿಕೆಟ್‌ ನೀಡುತ್ತೇವೆ…

9 mins ago

ದೇಶಿಯ ಮದ್ಯಗಳ ಬೆಲೆ ಹೆಚ್ಚಿಸಲು ಮುಂದಾದ ಸರಕಾರ

ಪಂಚ ಗ್ಯಾರಂಟಿ ಯೋಜನೆಗಳಿಗೆ ಹಣ ಹೊಂದಿಸುವುದು ಸರಕಾರಕ್ಕೆ ಸವಾಲಾಗಿದ್ದು, ಗ್ಯಾರಂಟಿ ಯೋಜನೆಗಳಿಗೆ ಹಣ ಹೊಂದಿಸಲು ದೇಶಿಯ ಮದ್ಯಗಳ ಬೆಲೆ ಹೆಚ್ಚಿಸಲು…

25 mins ago

ಬಹುಭಾಷೆಯಲ್ಲಿ ಡಬ್ ಆಗಿದೆ ದೊಡ್ಮನೆ ಕುಡಿಯ ‘ಯುವ’ ಸಿನಿಮಾ

ದೊಡ್ಮನೆ ಕುಡಿ ಯುವರಾಜ್‌ಕುಮಾರ್ ನಟನೆಯ ‘ಯುವ’ ಸಿನಿಮಾ ಒಟಿಟಿಗೆ ಲಗ್ಗೆ ಇಟ್ಟಿದ್ದು ಇದೀಗ ಬಹುಭಾಷೆಯಲ್ಲಿ ಯುವ ಸಿನಿಮಾ ಡಬ್ ಆಗಿದೆ.…

45 mins ago

ಕೊನೆಯ ಸ್ಥಾನದೊಂದಿಗೆ ಐಪಿಎಲ್ ಅಂತ್ಯಗೊಳಿಸಿದ ಮುಂಬೈ ಇಂಡಿಯನ್ಸ್

ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ಶುಕ್ರವಾರ  ನಡೆದ ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧದ  ಹಾರ್ದಿಕ್ ಪಾಂಡ್ಯ ಪಡೆ ಮುಂಬೈ ಇಂಡಿಯನ್ಸ್ ಸೋಲನುಭವಿಸಿದೆ.

1 hour ago

8 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್‌: ಗುಡುಗು, ಮಿಂಚು ಸಹಿತ ಮಳೆ ಸಾಧ್ಯತೆ

ರಾಜ್ಯಾದ್ಯಂತ ಪ್ರತ್ಯೇಕವಾಗಿ ಭಾರಿ ಮಳೆಯಾಗುವ ಸಾಧ್ಯತೆಯಿದ್ದು,  40-50 ಕಿ.ಮೀ ವೇಗದಲ್ಲಿ ಗಾಳಿ ಬೀಸಿ, ಗುಡುಗು, ಮಿಂಚು ಸಹಿತ ಮಳೆಯಾಗುವ ಸಾಧ್ಯತೆಯಿದೆ.

2 hours ago

ಸ್ವಾತಿ ಮಲಿವಾಲ್‌ ಮೇಲೆ ದೂರು ದಾಖಲಿಸಿದ ಆರೋಪಿ ಬಿಭವ್‌

ಆಪ್‌ ರಾಜ್ಯಸಭಾ ಸದಸ್ಯೆ ಸ್ವಾತಿ ಮಲಿವಾಲ್‌ ಮೇಲೆ ಹಲ್ಲೆ ಪ್ರಕರಣದ ಆರೋಪಿಯಾಗಿರುವ ಬಿಭವ್‌ ಕುಮಾರ್‌ ಸಿವಿಲ್ ಲೈನ್ಸ್ ಪೊಲೀಸ್ ಠಾಣೆಗೆ…

2 hours ago