News Karnataka Kannada
Monday, April 29 2024
ಬೆಂಗಳೂರು ನಗರ

ಜವಾದ್ ಚಂಡಮಾರುತ ಹಿನ್ನೆಲೆ, 11 ರೈಲುಗಳ ಸಂಚಾರ ಸ್ಥಗಿತ

Railway Delhi 17 6 21 Dt 176216 1 Newsk 9508623154
Photo Credit :

ಬೆಂಗಳೂರು, ಡಿ.3 : ಜವಾದ್ ಚಂಡಮಾರುತ ಹಿನ್ನೆಲೆಯಲ್ಲಿ ನೈರುತ್ಯ ರೈಲ್ವೆ 11 ರೈಲುಗಳ ಸಂಚಾರ ರದ್ದು ಮಾಡಿದೆ.

ಮುಂದಿನ 24 ಗಂಟೆಯಲ್ಲಿ ಜಾವದ್ ಚಂಡಮಾರುತ ಆಂಧ್ರಪ್ರದೇಶ ಮತ್ತು ಒಡಿಶಾ ಕರಾವಳಿ ಪ್ರದೇಶದಲ್ಲಿ ತೀವ್ರ ಕಟ್ಟೆಚ್ಚರ ವಹಿಸಲಾಗಿದೆ. ಜವಾದ್ ಚಂಡಮಾರುತದ ಪರಿಸ್ಥಿತಿಯನ್ನು ಎದುರಿಸಲು ರಾಜ್ಯಗಳು ಮತ್ತು ಕೇಂದ್ರ ಸಚಿವಾಲಯಗಳು ಹಾಗೂ ಸಂಬಂಧಿಸಿದ ಸಂಸ್ಥೆಗಳು ಕೈಗೊಂಡಿರುವ ಸಿದ್ಧತೆಗಳ ಕುರಿತು ಪ್ರಧಾನಿ ನರೇಂದ್ರ ಮೋದಿ ಅಧ್ಯಕ್ಷತೆಯಲ್ಲಿ ಉನ್ನತ ಮಟ್ಟದ ಸಭೆ ನಡೆಸಲಾಗಿದೆ.

ಚಂಡಮಾರುತದ ಪ್ರಭಾವದ ಕರ್ನಾಟಕದ ಮೇಲೆ ಅಷ್ಟಾಗಿ ಇಲ್ಲದಿದ್ದರೂ ಸಹ ರಾಜ್ಯದ ಕರಾವಳಿ ಹಾಗೂ ದಕ್ಷಿಣ ಒಳನಾಡಿನ ಬಹುತೇಕ ಜಿಲ್ಲೆಗಳಲ್ಲಿ ಡಿಸೆಂಬರ್ 7ರವರೆಗೂ ಸಾಧಾರಣ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

11 ರೈಲುಗಳ ಸಂಚಾರ ರದ್ದು:

ಡಿ. 3 ಶುಕ್ರವಾರ: ರೈಲು ಸಂಖ್ಯೆ 22883 ಪುರಿ – ಯಶವಂತಪುರ ಗರೀಬ್ ರಥ್ ಎಕ್ಸ್‌ಪ್ರೆಸ್

ಡಿ. 3 ಶುಕ್ರವಾರ: ರೈಲು ಸಂಖ್ಯೆ 12245 ಹೌರಾ – ಯಶವಂತಪುರ ದುರೊಂತೋ ಎಕ್ಸ್‌ಪ್ರೆಸ್

ಡಿ. 3 ಶುಕ್ರವಾರ : ರೈಲು ಸಂಖ್ಯೆ 22817 ಹೌರಾ – ಮೈಸೂರು ಸೂಪರ್ ಫಾಸ್ಟ್ ಎಕ್ಸ್ ಪ್ರೆಸ್

ಡಿ. 3 ಶುಕ್ರವಾರ: ರೈಲು ಸಂಖ್ಯೆ 12863 ಹೌರಾ – ಯಶವಂತಪುರ ಎಕ್ಸ್ ಪ್ರೆಸ್

ಡಿ. 3 ಶುಕ್ರವಾರ: ರೈಲು ಸಂಖ್ಯೆ 12889 ಟಾಟಾನಗರ – ಯಶವಂತಪುರ ಸೂಪರ್ ಫಾಸ್ಟ್ ಎಕ್ಸ್ ಪ್ರೆಸ್

ಡಿ. 3 ಶುಕ್ರವಾರ: ರೈಲು ಸಂಖ್ಯೆ 12246 ಯಶವಂತಪುರ – ಹೌರಾ ದುರಾಂಟೊ ಎಕ್ಸ್ ಪ್ರೆಸ್ ಸೇವೆ

ಡಿ. 3 ಶುಕ್ರವಾರ: ರೈಲು ಸಂಖ್ಯೆ 12246 ಯಶವಂತಪುರ – ಹೌರಾ ಸೂಪರ್ ಫಾಸ್ಟ್ ಎಕ್ಸ್ ಪ್ರೆಸ್

ಡಿ. 3 ಶುಕ್ರವಾರ: ರೈಲು ಸಂಖ್ಯೆ 18048 ವಾಸ್ಕೋ-ಡ-ಗಾಮಾ – ಹೌರಾ ಅಮರಾವತಿ ಎಕ್ಸ್ ಪ್ರೆಸ್‌

ಡಿ. 3 ಶುಕ್ರವಾರ: ರೈಲು ಸಂಖ್ಯೆ 18464 ಕೆಎಸ್‌ಆರ್ ಬೆಂಗಳೂರು – ಭುವನೇಶ್ವರ ಪ್ರಶಾಂತಿ ಎಕ್ಸ್ ಪ್ರೆಸ್

ಡಿ. 4 ಶನಿವಾರ: ರೈಲು ಸಂಖ್ಯೆ 18463 ಭುವನೇಶ್ವರ – ಕೆಎಸ್‌ಆರ್ ಬೆಂಗಳೂರು ಪ್ರಶಾಂತಿ ಎಕ್ಸ್ ಪ್ರೆಸ್

ಡಿ. 4 ಶನಿವಾರ: ರೈಲು ಸಂಖ್ಯೆ 18637 ಹಟಿಯಾ – ಬೆಂಗಳೂರು ಕಂಟೋನ್ಮೆಂಟ್ ಎಕ್ಸ್ ಪ್ರೆಸ್

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
44
News Karnataka Kannada

The most exciting, trusted and preferred news websites of Karnataka and Kannadigas around the world.

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು