ಜನವರಿ 3ರಿಂದ ಬಿಎಂಟಿಸಿ ಎಸಿ ಬಸ್ ಸಂಚಾರ ಆರಂಭ

ಬೆಂಗಳೂರು : ರಾಜ್ಯರಾಜಧಾನಿಯಲ್ಲಿ ಬಸ್‌ ಸಂಚಾರ ವ್ಯವಸ್ಥೆಯನ್ನು ಸುಧಾರಿಸುವ ನಿಟ್ಟಿನಲ್ಲಿ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯು ಮಹತ್ತರ ಯೋಜನೆಯನ್ನು ಕೈಗೊಂಡಿದೆ. ಬೆಂಗಳೂರಿನ ವಿವಿಧ ಭಾಗಗಳಿಗೆ ಹವಾನಿಯಂತ್ರಿತ ಸಾರಿಗೆ ಸೇವೆಯನ್ನು ಹೆಚ್ಚಿಸಲು ತೀರ್ಮಾನಸಲಾಗಿದೆ.

ಸಾರ್ವಜನಿಕ ಪ್ರಯಾಣಿಕರಿಗೆ ದಕ್ಷ, ವಿಶ್ವಾಸನೀಯ, ಆರಾಮದಾಯಕ ಹಾಗೂ ಮಿತವ್ಯಯಕರ ದರದಲ್ಲಿ ಉತ್ತಮ ಸಾರಿಗೆ ಸೌಲಭ್ಯವನ್ನು ಒದಗಿಸುತ್ತಿದೆ. ಅದೇ ನಿಟ್ಟಿನಲ್ಲಿ ಜನವರಿ 3ರಿಂದ ಬೆಂಗಳೂರಿನ ಹಲವು ಮಾರ್ಗಗಳಲ್ಲಿ ಬಿಎಂಟಿಸಿ ಎಸಿ ಬಸ್ ಸಂಚಾರವನ್ನು ಹೆಚ್ಚಿಸಲಾಗುತ್ತಿದೆ.

ಬಿಎಂಟಿಸಿ ಎಸಿ ಬಸ್‌ಗಳ ಟಿಕೆಟ್ ದರ ಇಂದಿನಿಂದ ಕಡಿತ
ಬೆಂಗಳೂರಿನ ಮಾರ್ಗಸಂಖ್ಯೆ ವಿ-ಎಂಎಫ್-6, ವಿ-ಜಿ7, ವಿ-285ಎಂಬಿ, ವಿ-333ಪಿ ಮತ್ತು ವಿ-501ಎ ಬಸ್ ಸಂಚಾರವನ್ನು ಆರಂಭಿಸಲಾಗಿದೆ. ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ ಆರಂಭಿಸಿರುವ ಸಾರಿಗೆಗಳ ವಿವರವನ್ನು ಮುಂದೆ ಓದಿ.

ಕ್ರ.ಸಂ ಮಾರ್ಗ ಸಂಖ್ಯೆ ಎಲ್ಲಿಂದ ಎಲ್ಲಿಗೆ ಸಾರಿಗೆಗಳ ಸಂಖ್ಯೆ ಸುತ್ತುವಳಿಗಳ ಸಂಖ್ಯೆ
1 ವಿ-ಎಂಎಫ್‌-6 ಸ್ವಾಮಿ ವಿವೇಕಾನಂದ ಮೆಟ್ರೋ ನಿಲ್ದಾಣ ಸೆಂಟ್ರಲ್‌ ಸಿಲ್ಕ್‌ ಬೋರ್ಡ್‌ 05 64
2 ವಿ-ಜಿ7 ಕೆಂಪೇಗೌಡ ಬಸ್‌ ನಿಲ್ದಾಣ ಜನಪ್ರಿಯ ಟೌನ್‌ಶಿಪ್‌ 06 60
3 ವಿ-285ಎಂಬಿ ಕಾವೇರಿ ಭವನ ಡಿ.ಕ್ರಾಸ್‌ (ದೊಡ್ಡಬಳ್ಳಾಪುರ) 05 32
4 ವಿ-333ಪಿ ಕೆಂಪೇಗೌಡ ಬಸ್‌ ನಿಲ್ದಾಣ ವೈಟ್‌ಫೀಲ್ಡ್‌ ಟಿಟಿಎಂಸಿ 11 60
5 ವಿ-501ಎ ಹೆಬ್ಬಾಳ ಸೆಂಟ್ರಲ್‌ ಸಿಲ್ಕ್‌ ಬೋರ್ಡ್‌ 10 50
ಒಟ್ಟು 37 266

ಯಾವ ಮಾರ್ಗದಲ್ಲಿ ಎಷ್ಟು ಬಸ್ ಸಂಚಾರ:

* ಬೆಂಗಳೂರಿನ ಸ್ವಾಮಿ ವಿವೇಕಾನಂದ ಮೆಟ್ರೋ ನಿಲ್ದಾಣದಿಂದ ಸೆಂಟ್ರಲ್‌ ಸಿಲ್ಕ್‌ ಬೋರ್ಡ್‌ ಮಾರ್ಗ ಸಂಖ್ಯೆ ವಿಎಫ್-6ನಲ್ಲಿ 5 ಬಸ್ ಅನ್ನು ಬಿಡಲಾಗುತ್ತಿದ್ದು, ಒಟ್ಟು 64 ರೌಂಡ್ ಹಾಕಲಿವೆ.
* ಕೆಂಪೇಗೌಡ ಬಸ್‌ ನಿಲ್ದಾಣದಿಂ ಜನಪ್ರಿಯ ಟೌನ್‌ಶಿಪ್‌ ಮಾರ್ಗ ಸಂಖ್ಯೆ ವಿ-ಜಿ7 ನಲ್ಲಿ 6 ಬಸ್ ಬಿಡಲಾಗುತ್ತಿದ್ದು, 60 ರೌಂಡ್ ಹಾಕಲಿವೆ.
* ಕಾವೇರಿ ಭವನದಿಂದ ಡಿ ಕ್ರಾಸ್(ದೊಡ್ಡಬಳ್ಳಾಪುರ) ಮಾರ್ಗದಲ್ಲಿ ವಿ-285ಎಂಬಿಯ 5 ಬಸ್ ಸಂಚರಿಸಲಿದ್ದು, 32 ಸುತ್ತು ಪ್ರಯಾಣಿಸಲಿವೆ.** *ಕೆಂಪೇಗೌಡ ಬಸ್ ನಿಲ್ದಾಣದಿಂದ ವೈಟ್ ಫೀಲ್ಡ್ ಟಿಟಿಎಂಸಿ ಮಾರ್ಗ ವಿ-333ಪಿಯಲ್ಲಿ 11 ಬಸ್ ಬಿಡಲಾಗುತ್ತಿದ್ದು, 60 ರೌಂಡ್ ಹೊಡೆಯಲಿವೆ.* ಹೆಬ್ಬಾಳದಿಂದ ಸೆಂಟ್ರಲ್ ಸಿಲ್ಕ್ ಬೋರ್ಡ್ ವರೆಗೆ ವಿ-501ಎ ಮಾರ್ಗದಲ್ಲಿ 10 ಬಸ್ ಬಿಡಲಾಗುತ್ತಿದ್ದು, 50 ರೌಂಡ್ ಹೊಡೆಯಲಿವೆ.
* ಜನವರಿ 3ರಿಂದ ಒಟ್ಟು 37 ಹವಾನಿಯಂತ್ರಿತ ಬಸ್ ಅನ್ನು ಬಿಡಲಾಗುತ್ತಿದ್ದು, 266 ಸುತ್ತು ಹಾಕಲಿವೆ ಎಂದು ಬಿಬಿಎಂಪಿ ಪ್ರಕಟಣೆಯಲ್ಲಿ ತಿಳಿಸಲಾಗಿದೆ

Gayathri SG

Recent Posts

ಒಗ್ಗಟ್ಟಾಗಿ ಕೆಲಸ ಮಾಡಿದರೆ ಶಿವಮೊಗ್ಗದಲ್ಲಿ ರಾಘವೇಂದ್ರ ಗೆಲ್ಲುತ್ತಾರೆ : ಹೆಚ್‌ಡಿಕೆ

ಒಗ್ಗಟ್ಟಾಗಿ ಕೆಲಸ ಮಾಡಿದರೆ ಶಿವಮೊಗ್ಗ ಗ್ರಾಮಾಂತರದಲ್ಲಿ ಒಂದು ಲಕ್ಷದ ಮತ ದಿಂದ ರಾಘವೇಂದ್ರ ಗೆಲ್ಲಲಿದ್ದಾರೆ ಎಂದು ಮಜಿಮುಖ್ಯಮಂತ್ರಿ ಕುಮಾರ ಸ್ವಾಮಿ…

8 hours ago

ಪ್ರಜ್ವಲ್ ರೇವಣ್ಣ ಉಚ್ಚಾಟನೆ : ಕುಮಾರ ಸ್ವಾಮಿ ಶಿವಮೊಗ್ಗದಲ್ಲಿ ಪ್ರತಿಕ್ರಿಯೆ

ಪ್ರಜ್ವಲ್ ರೇವಣ್ಣ ಉಚ್ಚಾಟನೆ ಬಗ್ಗೆ ಮಾಜಿ ಸಿಎಂ ಕುಮಾರ ಸ್ವಾಮಿ ಶಿವಮೊಗ್ಗದಲ್ಲಿ ಪ್ರತಿಕ್ರಿಯೆ ನೀಡಿದ್ದು, ನಿನ್ನೆಯೇ ಈ ಬಗ್ಗೆ ನಮ್ಮ…

8 hours ago

ಬಿಜೆಪಿ ಅಭ್ಯರ್ಥಿ ಜೈಲಿಗೆ ಹೋಗುವ ದಿನಕ್ಕೆ ಕ್ಷಣಗಣನೆ : ಪ್ರಿಯಾಂಕಾ ಗಾಂಧಿ

ಒಲಿಂಪಿಕ್ಸ್ ಆಟಗಾರರ ಮೇಲೆ ಕಿರುಕುಳವಾಗಿತ್ತು, ಮಹಿಳೆಯ ಮೇಲೆ ಅತ್ಯಾಚಾರವಾಗಿತ್ತು. ಆಗ ಪ್ರಧಾನಿ ಮೋದಿ‌ ಸುಮ್ಮನೆ ಇದ್ದರಲ್ಲದೆ ಇಂದು ಕರ್ನಾಟಕದಲ್ಲಿ ಸಾವಿರಾರು…

8 hours ago

ಕಾಂಗ್ರೆಸ್ ಗ್ಯಾರಂಟಿ ಕಾರ್ಡ ವಿತರಣೆ ಮಾಡಿದ ಕಾರ್ಯಕರ್ತರು

ಮತಕ್ಷೇತ್ರದ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ರಾಧಾಕೃಷ್ಣ ದೊಡ್ಡಮನಿ ಗೆಲವು ನಿಶ್ಚಿತವಾಗಿದೆ ಎಂದು ಕಾಂಗ್ರೆಸ್ ಮುಖಂಡ ವಿಶ್ವರಾಧ್ಯ ದಳವಾಯಿ ಸುಂಬಡ ಅವರು…

8 hours ago

ದೇಶ ಭಕ್ತಿಯನ್ನು ಮೋದಿಯವರಿಗೆ ಗುತ್ತಿಗೆ ಕೊಟ್ಟಿಲ್ಲ: ಲಕ್ಷ್ಮಣ ಸವದಿ

ದೇಶ ಭಕ್ತಿಯನ್ನು ಈ ಬಿಜೆಪಿಯವರಿಗೆ ಹಾಗೂ ಪ್ರಧಾನಿಗೆ ಗುತ್ತಿಗೆ ಕೊಟ್ಟಿಲ್ಲ. ನಾವು ಕೂಡ ದೇಶ ಭಕ್ತರೇ ಎಂದು ಮಾಜಿ ಮುಖ್ಯಮಂತ್ರಿ…

8 hours ago

ಶನಿವಾರಸಂತೆ ಹಲ್ಲೆ ಪ್ರಕರಣ : ನಿಷ್ಪಕ್ಷಪಾತ ತನಿಖೆಗೆ ಹನೀಫ್ ಒತ್ತಾಯ

ಕಳೆದ ಚುನಾವಣಾ ದಿನದಂದು ಕ್ಷುಲ್ಲಕ ವಿಚಾರವಾಗಿ ಎರಡು ರಾಜಕೀಯ ಪಕ್ಷಗಳ ನಡುವೆ ನಡೆದ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ನಿಷ್ಪಕ್ಷಪಾತವಾದ…

8 hours ago