ಜನರನ್ನು ಕೊರೋನಾ ಭಯದಿಂದ ಮುಕ್ತಿಗೊಳಿಸಿ: ಲತಾ ಶುಭಾಷಿಣಿ

ಬೆಂಗಳೂರು : ಕೊರೋನಾ ವೈರಸ್ ಹೆಸರಿನಲ್ಲಿ ಜನಸಾಮಾನ್ಯರನ್ನು ಭಯ ಭೀತಿಗೊಳಿಸಿ ಅವರ ಜೀವನವನ್ನು ಬೀದಿಗೆ ತರುವ‌ ಕೆಲಸವನ್ನ ನಿಲ್ಲಿಸಬೇಕು ಎಂದು ಭಾರತೀಯ ಜನರಕ್ಷಣಾ ಸೇನಾ ಮಹಿಳಾ ವಿಭಾಗ ರಾಜ್ಯಾಧ್ಯಕ್ಷರಾದ ಲತಾ ಶುಭಾಷಿಣಿ ಸರ್ಕಾರವನ್ನು ಒತ್ತಾಯಿಸಿದ್ದಾರೆ.

ಕಳೆದ ಎರಡು ವರ್ಷಗಳಿಂದ ಕೊರೋನಾ ಹೆಸರಿನಲ್ಲಿ ಸರ್ಕಾರ ಕೈಗೊಂಡ ಅವೈಜ್ಞಾನಿಕ ನೀತಿ ನಿರ್ಧಾರಗಳಿಂದ ಜನಸಾಮಾನ್ಯರ ಬದುಕು ಮೂರಾಬಟ್ಟೆಯಾಗಿದ್ದು ಹಲವಾರು ಮಂದಿ ಸಂಕಷ್ಟ ದಿಂದ ಪಾರಾಗಲಾಗದೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಕೋಟ್ಯಾಂತರ ಮಂದಿ ಉದ್ಯೋಗ ಕಳೆದುಕೊಂಡು ಬೀದಿಪಾಲಾಗಿದ್ದಾರೆ. ಹಲವಾರು ಮಂದಿ ವ್ಯವಹಾರ ಹಾಗೂ ಉದ್ಯಮ ನಡೆಸಲು ಮಾಡಿದ ಸಾಲ ತೀರಿಸಲಾಗದೆ ಅವರ ಆಸ್ತಿಗಳು ಹರಾಜಿಗೆ ಬಂದಿವೆ. ಕೊರೋನಾ ಮೊದಲು ಹಾಗೂ ಕೊರೋನಾ ನಂತರದ ಜನರ ಆರ್ಥಿಕ ಸಾಮಜಿಕ ಸ್ಥಿತಿಗತಿಗಳ ವೈಜ್ಞಾನಿಕ ಅಧ್ಯಯನ ನಡೆಸಿ ತೀರ ಸಂಕಷ್ಟದಲ್ಲಿರುವವರನ್ನು ಗುರುತಿಸಿ ಅವರ ಜೀವನ ಮಟ್ಟ ಮೇಲೆತ್ತಲು ಹಾಗೂ ಅರ್ಹರಿಗೆ ಉದ್ಯೋಗ ಒದಗಿಸಲು ಸರ್ಕಾರ ವಿಶೇಷ ಯೋಜನೆ ರೂಪಿಸಬೇಕು ಎಂದು ಹೇಳಿದ್ದಾರೆ.

ಸಾಲ ಮಾಡಿ ಸಂಕಷ್ಟಕೊಳಗಾದವರನ್ನು ಗುರುತಿಸಿ ಎರಡು ವರ್ಷಗಳ ಕಾಲದ ಬಡ್ಡಿ ಸಂಪೂರ್ಣ ಮನ್ನಾ ಮಾಡಬೇಕು ಹಾಗೂ ಬ್ಯಾಂಕ್ ಸಾಲ ವಸೂಲಾತಿ ಕಿರುಕುಳ ನಿಲ್ಲಿಸಬೇಕು ಹಾಗೂ ಅವರು ತಮ್ಮ ಉದ್ಯಮವನ್ನು ಯಥಾಸ್ಥಿತಿಗೆ ತರಲು ಬಡ್ಡಿ ರಹಿತ ಹೆಚ್ಚುವರಿ ಸಾಲ ನೀಡಬೇಕು ಎಂದರು.

ಮಾಸ್ಕ್ ಹೆಸರಿನಲ್ಲಿ ದಂಡ ವಿದಿಸುವುದನ್ನು ನಿಲ್ಲಿಸಬೇಕು ಇಲ್ಲವೆ ಬ್ರಿಟನ್ ಮಾದರಿಯಲ್ಲಿ ಮಾಸ್ಕ್ ದರಿಸುವುದನ್ನು ನಿಷೇದಿಸಬೇಕು. ಕೊರೋನಾ ಹೆಸರಿನಲ್ಲಿ ಪೊಲೀಸರು ಹಾಗೂ ಬಿಬಿಎಂಪಿ ಮಾರ್ಷಲ್ ಗಳು ದೌರ್ಜನ್ಯ ನಡೆಸಿದರೆ ಅವರ ವಿರುದ್ದ ಕಾನೂನು ಪ್ರಕಾರ ಕ್ರಮಕೈಗೊಳ್ಳಬೇಕು ಎಂದು ತಿಳಿಸಿದ್ದಾರೆ.

ಸುಪ್ರೀಂ ಕೋರ್ಟ್ ಆದೇಶದಂತೆ ಕೊರೋನಾ ಲಸಿಕೆ ( ವ್ಯಾಕ್ಸಿನ್) ವ್ಯಕ್ತಿಯ ಒಪ್ಪಿಗೆ ಇಲ್ಲದೆ ಬಲವಂತವಾಗಿ ಹಾಕುವಂತಿಲ್ಲ ಆ ಹಿನ್ನಲೆಯಲ್ಲಿ ವ್ಯಾಕ್ಸಿನ್ ಹಾಕಿಕೊಳ್ಳುವುದು ವ್ಯಕ್ತಿಯ ಸ್ವಯಂ ನಿರ್ಧಾರಕ್ಕೆ ಬಿಡುವುದು ಒಳ್ಳಯದು ಯಾವುದೇ ಕಾರಣಕ್ಕೂ ಸರ್ಕಾರ ಬಲವಂತವಾಗಿ ಯಾರಿಗೂ ಲಸಿಕೆಯನ್ನು ಹಾಕುವಂತಿಲ್ಲ. ಒಂದು ಪಕ್ಷ ಬಲವಂತವಾಗಿ ಲಸಿಕೆ ಹಾಕಿದರೆ ಅಂತವರ ವಿರುದ್ದ ಜನ ಸಾಮಾನ್ಯರು ಎಚ್ಚೆತ್ತುಕೊಂಡು ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಕರೆ ನೀಡಿದ್ದಾರೆ.

Gayathri SG

Recent Posts

ರಿಚರ್ಡ್‌ ಹ್ಯಾನ್ಸೆನ್‌ಗೆ ಸೆಲ್ಕೋದ ಪ್ರತಿಷ್ಠಿತ ʼಸೂರ್ಯಮಿತ್ರʼ ಪ್ರಶಸ್ತಿ

ಅಭಿವೃದ್ಧಿಶೀಲ ರಾಷ್ಟ್ರಗಳ ಗ್ರಾಮೀಣ ಪ್ರದೇಶಗಳಲ್ಲಿ ಸೌರವಿದ್ಯುತ್ ಸೌಲಭ್ಯವನ್ನು ಹೆಚ್ಚಿಸಲು, ಆಧುನಿಕ ಫೋಟೋ ವೋಲ್ಟಾಯಿಕ್‌ (ಪಿವಿ) ತಂತ್ರಜ್ಞಾನವನ್ನು ಮೈಕ್ರೋ ಫೈನಾನ್ಸ್ ಸಂ‍ಸ್ಥೆಗಳ…

7 hours ago

ಜಿಯೋ ಬಂಪರ್‌ ಆಫರ್‌ : 15 ಒಟಿಟಿ ಆ್ಯಪ್ಲಿಕೇಷನ್‌ ಜೊತೆ ಅನ್‌ಲಿಮಿಟೆಡ್ ಡೇಟಾ ಪ್ಲಾನ್

ಜಿಯೋ ಇದೀಗ ಮತ್ತೊಂದು ಹೊಚ್ಚ ಹೊಸ ಪ್ಲಾನ್ ಘೋಷಿಸಿದೆ. ನೆಟ್‌ಫ್ಲಿಕ್ಸ್‌ನ ಬೇಸಿಕ್ ಪ್ಲಾನ್, ಅಮೆಜಾನ್ ಪ್ರೈಮ್ ಸೇರಿದಂತೆ 15 ಒಟಿಟಿ…

7 hours ago

ಕಾರಿನಲ್ಲಿ ಆಕಸ್ಮಿಕ ಬೆಂಕಿ : ವ್ಯಕ್ತಿ ಸಜೀವ ದಹನ

ಕಾರಿಗೆ ಆಕಸ್ಮಿಕ ಬೆಂಕಿ ತಗುಲಿ, ಕಾರಿನಲ್ಲಿದ್ದ ವ್ಯಕ್ತಿ ಸಜೀವ ದಹನವಾದ ಘಟನೆ ಬಾಗಲಕೋಟೆ ತಾಲೂಕಿನ ಇಂಗಳಗಿ ಗ್ರಾಮದಲ್ಲಿ ನಡೆದಿದೆ.ಕಾರಿನಲ್ಲಿದ್ದ ಸಂಗನಗೌಡ…

7 hours ago

ವಿಧಾನಪರಿಷತ್ ಚುನಾವಣೆ : ಅಭ್ಯರ್ಥಿಗಳ ಪಟ್ಟಿ ಪ್ರಕಟಿಸಿದ ಬಿಜೆಪಿ

ವಿಧಾನಪರಿಷತ್ತಿನ ಪದವೀಧರ, ಶಿಕ್ಷಕರ ಕೇತ್ರಗಳಿಗೆ ಜೂ. 3ರಂದು ನಡೆಯಲಿರುವ ಚುನಾವಣೆಗೆ ಬಿಜೆಪಿ ತನ್ನ ಅಭ್ಯರ್ಥಿಗಳ ಪಟ್ಟಿಯನ್ನು ಪ್ರಕಟಿಸಿದೆ. 6 ಕ್ಷೇತ್ರಗಳ…

8 hours ago

ಹಾಡಹಗಲೇ ಚಾಕುವಿನಿಂದ ಇರಿದು ಯುವಕನ ಭೀಕರ ಹತ್ಯೆ

ಚಾಕುವಿನಿಂದ ಇರಿದು ಹಾಡಹಗಲೇ ಯುವಕನ ಭೀಕರ ಹತ್ಯೆ ಮಾಡಿರುವ ಘಟನೆ ಜಿಲ್ಲೆಯ ಅಫಜಲಪುರ ತಾಲೂಕಿನ ‌ಮಣ್ಣೂರು ಗ್ರಾಮದಲ್ಲಿ ನಡೆದಿದೆ. ಪ್ರೀತಿ…

8 hours ago

ಮೊಬೈಲ್‌ ಕಳ್ಳತನಕ್ಕೆ ಯತ್ನಿಸಿದ ಕಳ್ಳಿಗೆ ಬಿತ್ತು ಧರ್ಮದೇಟು

ಮೊಬೈಲ್‌ ಕಳ್ಳತನಕ್ಕೆ ಯತ್ನಿಸಿದ ಕಳ್ಳಿಗೆ ಸಾರ್ವಜನಿಕರೇ ಧರ್ಮದೇಟು ನೀಡಿದ ಘಟನೆ ಉಡುಪಿ ಸಿಟಿ ಬಸ್‌ ನಿಲ್ದಾಣದಲ್ಲಿ ಇಂದು ಸಂಭವಿಸಿದೆ

8 hours ago