ಚಾಮರಾಜಪೇಟೆ ಕೊಲೆ ಪ್ರಕರಣ: ಬಿಜೆಪಿ ನಾಯಕರ ವಿಭಿನ್ನ ಹೇಳಿಕೆ – ಸಿದ್ದರಾಮಯ್ಯ

ಬೆಂಗಳೂರು : ಚಾಮರಾಜಪೇಟೆ ಕೊಲೆ ಪ್ರಕರಣದ ಬಗ್ಗೆ ಸಿ.ಟಿ.ರವಿ, ರವಿಕುಮಾರ್​, ಗೃಹ ಸಚಿವ ಆರಗ ಜ್ಞಾನೇಂದ್ರ ಹಾಗೂ ನಗರ ಪೊಲೀಸ್​ ಆಯುಕ್ತರ ಹೇಳಿಕೆಗಳು ವಿಭಿನ್ನವಾಗಿವೆ. ಪ್ರಚೋದನೆ ಮಾಡುವುದು ಬಿಜೆಪಿ ನಾಯಕರ ಉದ್ದೇಶವಾಗಿದ್ದು, ಇದು ಗೃಹ ಸಚಿವರ ವೈಫಲ್ಯ ಎತ್ತಿ ತೋರಿಸುತ್ತದೆ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ.

ಬೆಂಗಳೂರಿನ ತಮ್ಮ ನಿವಾಸದಲ್ಲಿ ಮಾತನಾಡಿದ ಅವರು, ಕಾನೂನು ಸುವ್ಯವಸ್ಥೆ ಕಾಪಾಡುವುದು ಇವರಿಂದ ಸಾಧ್ಯವಿಲ್ಲ. ಇದರಿಂದ ದೇಶ ಹಾಗೂ ರಾಜ್ಯವೂ ಅಭಿವೃದ್ಧಿಯಾಗಲ್ಲ, ಬಿಜೆಪಿಯವರು ತಮ್ಮ ಸ್ವಾರ್ಥಕ್ಕಾಗಿ, ವೋಟಿಗಾಗಿ, ಭಾಷೆ,ಧರ್ಮ,ದ್ವೇಷದ ವಿಚಾರವನ್ನು ಮುಂದೆ ತಂದು ರಾಜ್ಯವನ್ನು ಹಾಳು ಮಾಡುತ್ತಿದ್ದಾರೆ ಎಂದು ಹೇಳಿದರು.

ಶಿವಮೊಗ್ಗದ ಹರ್ಷ ಹತ್ಯೆ ಪ್ರಕರಣದ ತನಿಖೆಯನ್ನು ಎನ್ ಐ ಎಗೆ ವಹಿಸಲಾಗಿದೆ. ಯಾರಾದರೂ ತನಿಖೆ ನಡೆಸಲಿ, ತಪ್ಪಿತಸ್ಥರಿಗೆ ಶಿಕ್ಷೆಯಾಗಲಿ. ಸರ್ಕಾರ ಇದೇ ನಿಲುವನ್ನು ದಿನೇಶ್ ಮತ್ತು ಸುಭಾನ್ ಹತ್ಯೆ ವಿಚಾರದಲ್ಲಿಯೂ ಅನುಸರಿಸಲಿ ಎಂದರು.

ದಿನೇಶ್ ಕೊಲೆಗೆ ಭಜರಂಗ ದಳ, ಸುಭಾನ್ ಹತ್ಯೆಗೆ ಶ್ರೀರಾಮಸೇನೆ ಕಾರಣ. ಹರ್ಷ ಕುಟುಂಬದವರಿಗೆ 25 ಲಕ್ಷ ಪರಿಹಾರ ನೀಡಿದಂತೆ ದಿನೇಶ್ ಮತ್ತು ಸುಭಾನ್ ಕುಟುಂಬದವರಿಗೂ ಕೊಡಲಿ. ಕಾನೂನು ಎಲ್ಲರಿಗೂ ಒಂದೆ. ಇದರಲ್ಲಿ ತಾರತಮ್ಯ ಬೇಡ.ಹಿಜಾಬ್ ಗದ್ದಲದಿಂದ ಇಲ್ಲಿಯವರೆಗೆ ಜನ ಎಲ್ಲವನ್ನೂ ಗಮನಿಸುತ್ತಿದ್ದಾರೆ.ಯಾವುದೇ ಪ್ರಕರಣದಲ್ಲಿ ನಾವು ತಪ್ಪಿತಸ್ಥರು, ಕಾನೂನಿಗೆ ವಿರುದ್ಧವಾಗಿ ವರ್ತಿಸುವವರ ಪರ ನಿಲ್ಲುವುದಿಲ್ಲ.ಯಾರೇ ತಪ್ಪು ಮಾಡಿದರೆ, ಕಾನೂನು ಉಲ್ಲಂಘಿಸಿದರೆ ಶಿಕ್ಷೆಯಾಗಲಿ ಎಂದು ಹೇಳಿದರು.

ಕಾನೂನು ಸುವ್ಯವಸ್ಥೆ ಸರಿ ಇಲ್ಲ, ದ್ವೇಷದ ವಾತಾವರಣ ಇದೆ, ಸಮಾಜದಲ್ಲಿ ಅಶಾಂತಿ ಉಂಟಾಗಿದೆ ಎಂಬ ಕಾರಣಕ್ಕೆ ಕೈಗಾರಿಕೆಗಳು ರಾಜ್ಯದಿಂದ ಹೊರಗೆ ಹೋಗುತ್ತಿವೆ.ಬಂಡವಾಳ ಬರಬೇಕಾದರೆ ರಾಜ್ಯದಲ್ಲಿ ಉತ್ತಮ ವಾತಾವರಣ ಇರಬೇಕು. ಅಂತಹ ವಾತಾವರಣವನ್ನು ಬಿಜೆಪಿಯವರು ಹಾಳು ಮಾಡುತ್ತಿದ್ದಾರೆ ಎಂದು ದೂರಿದರು.

Gayathri SG

Recent Posts

ಮ್ಯಾಗಿ ತಿಂದು 10 ವರ್ಷದ ಬಾಲಕ ಸಾವು : 6 ಮಂದಿ ಅಸ್ವಸ್ಥ

ಉತ್ತರ ಪ್ರದೇಶದ ಪಿಲಿಬಿತ್‌ ಜಿಲ್ಲಯಲ್ಲಿ ಒಂದು ದಾರುಣ ಘಟನೆ ನಡೆದಿದ್ದು 10 ವರ್ಷದ ಅಪ್ರಾಪ್ತ ಬಾಲಕ ಅನ್ನದೊಂದಿಗೆ ಮ್ಯಾಗಿ ತಿಂದ…

8 mins ago

ಪಲ್ಟಿಯಾದ ಲಾರಿಯಲ್ಲಿ 7 ಕೋ. ಹಣ ಪತ್ತೆ: ವಶಕ್ಕೆ ಪಡೆದ ಪೊಲೀಸರು

ಪಲ್ಟಿಯಾದ ಲಾರಿಯಲ್ಲಿ ಬರೋಬ್ಬರಿ 7 ಕೋಟಿ ಹಣವನ್ನು ವಶಕ್ಕೆ ಪಡೆದ ಘಟನೆ ಆಂಧ್ರಪ್ರದೇಶದಲ್ಲಿ ನಡೆದಿದೆ.

24 mins ago

ಪುಸ್ತಕದಲ್ಲಿ ಬೈಬಲ್‌ ಪದ ಬಳಕೆ : ಕರೀನಾ ಕಪೂರ್‌ಗೆ ಕೋರ್ಟ್‌ ನೋಟಿಸ್‌

ಗರ್ಭಧಾರಣೆಗೆ (ಪ್ರಗ್ನೆನ್ಸಿ) ಸಂಬಂಧಿಸಿದಂತೆ ಬರೆದ ಪುಸ್ತಕದ ಶೀರ್ಷಿಕೆಯಲ್ಲಿ ‘ಬೈಬಲ್’ ಪದ ಬಳಕೆ ಮಾಡಿದಕ್ಕಾಗಿ ಮಧ್ಯಪ್ರದೇಶ ಹೈಕೋರ್ಟ್ ಬಾಲಿವುಡ್ ನಟಿ ಕರೀನಾ…

31 mins ago

ಭಯೋತ್ಪಾದಕ ಕೃತ್ಯದಲ್ಲಿ ಭಾಗಿ: ಉಗ್ರರ ಇಬ್ಬರು ಸಹಚರರ ಬಂಧನ

ಉಗ್ರರ ಇಬ್ಬರು ಸಹಚರರನ್ನು ಜಮ್ಮು–ಕಾಶ್ಮೀರದ ಶೋಪಿಯಾನ್ ಜಿಲ್ಲೆಯಲ್ಲಿ ಬಂಧಿಸಲಾಗಿದೆ ಎಂದು ಪೊಲೀಸರು ಶನಿವಾರ ತಿಳಿಸಿದ್ದಾರೆ.

46 mins ago

ಗುಜರಾತ್ ತಂಡದ ನಾಯಕ ಶುಭಮನ್ ಗಿಲ್​ಗೆ ಮತ್ತೆ 24 ಲಕ್ಷ ರೂ. ದಂಡ

ಶುಕ್ರವಾರ ನಡೆದ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ 35 ರನ್‌ಗಳಿಂದ ಜಯಗಳಿಸಿದ ಗುಜರಾತ್ ಟೈಟಾನ್ಸ್ ತಂಡದ ನಾಯಕ ಶುಭಮನ್…

46 mins ago

ಟಿ20 ವಿಶ್ವಕಪ್​ಗೆ ಮುನ್ನ ರಿಷಭ್​ ಪಂತ್​​ಗೆ ನಿಷೇಧ, 30 ಲಕ್ಷ ರೂ. ದಂಡ

17ನೇ ಆವೃತ್ತಿಯ ಐಪಿಎಲ್​ನ 62ನೇ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಹಾಗೂ ರಾಯಲ್ ಚಾಲೆಂಜರ್ಸ್​ ಬೆಂಗಳೂರು ತಂಡದ ನಡುವೆ ಹೈವೋಲ್ಟೇಜ್ ಪಂದ್ಯ…

1 hour ago