ಬೆಂಗಳೂರು ನಗರ

ಕೇಸರಿ ಶಾಲು ಹಾಕೋದು ನಿನ್ನೆ, ಮೊನ್ನೆಯಿಂದ ಬಂದಿರೋದು. ಹಿಜಾಬ್ ಹಿಂದಿನಿಂದಲೂ ಇದೆ; ಸಿದ್ದರಾಮಯ್ಯ

ಬೆಂಗಳೂರು : ಉಡುಪಿಯಲ್ಲಿಯ ಹಿಜಾಬ್ ಮತ್ತು ಕೇಸರಿ ಸಂಘರ್ಷದ ಕುರಿತು ಮಾಜಿ ಸಿಎಂ ವಿಪಕ್ಷ ನಾಯಕ ಸಿದ್ದರಾಮಯ್ಯ ಕಿಡಿಕಾರಿದ್ದಾರೆ.

ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಕುಂದಾಪುರ ಕಾಲೇಜಿನಲ್ಲಿ ಪ್ರಿನ್ಸಿಪಾಲ್ ಗೇಟ್ ಹಾಕುವ ಮೂಲಕ ಮುಸ್ಲಿಂ ಹೆಣ್ಣು ಮಕ್ಕಳನ್ನ ಕಾಲೇಜಿಗೆ ತಡೆದಿದ್ದಾರೆ.  ಕೇಸರಿ ಶಾಲು ಹಾಕಿ ಬಿಜೆಪಿ ಬೇಕೆಂದೇ ಮಾಡಿದೆ. ವಿಷಯಾಂತರ ಮಾಡೋಕೆ ಈ ರೀತಿ ಮಾಡಿದ್ದಾರೆ ಎಂದು ಆರೋಪಿಸಿದರು.

ಹೆಣ್ಣು ಮಕ್ಕಳನ್ನು ವಿದ್ಯೆಯಿಂದ ವಂಚಿತ ಮಾಡುವ ಹುನ್ನಾರ ಇದಾಗಿದೆ. ಸ್ಕಾರ್ಫ್ ಹಾಕೋದು ಅವರ ಧಾರ್ಮಿಕ ನಿಯಮ. ಎಷ್ಟೋ ವರ್ಷಗಳಿಂದ ನಡೆಯುತ್ತಾ ಬರ್ತಿದೆ. ಈಗ ಯಾಕೆ ಇದನ್ನ ತಂದಿರೋದು. ಸರ್ಕಾರಿ ಕಾಲೇಜ್ ಪ್ರಿನ್ಸಿಪಾಲ್ ತಡೆಯೋದು ಸರಿಯೇ ಎಂದು ಪ್ರಶ್ನೆ ಮಾಡಿದರು. ಮಕ್ಕಳನ್ನ ಶಿಕ್ಷಣದಿಂದ ವಂಚಿತರನ್ನಾಗಿ ಮಾಡೋ ಪ್ರಯತ್ನ ಮಾಡಲಾಗುತ್ತಿದೆ. ಅವನ್ಯಾರೋ ರಘುಪತಿ ಭಟ್ ಹೇಳಿದ ಅಂತ ಮಾಡಿದ್ದಾರೆ ಎಂದು ಗಂಭೀರ ಆರೋಪ ಮಾಡಿದರು.

ಕೇಸರಿ ಶಾಲು ಮೊದಲಿನಿಂದ ಹಾಕ್ತಿದ್ರಾ? ಹಿಜಾಬ್ ಮೊದಲಿನಿಂದಲೂ‌ ಹಾಕುತ್ತಿದ್ದರು. ಕೋರ್ಟ್ ನಲ್ಲಿ ವಿಚಾರಣೆಯಿದೆ. ನಾನು ಲಾಯರ್,ಪ್ರತಿಪಕ್ಷ ನಾಯಕನಾಗಿಯೇ ಹೇಳ್ತಿದ್ದೇನೆ. ಕೇಸರಿ ಶಾಲು ಹಾಕೋದು ನಿನ್ನೆ, ಮೊನ್ನೆಯಿಂದ ಬಂದಿರೋದು. ಹಿಜಾಬ್ ಹಿಂದಿನಿಂದಲೂ ಇದೆ. ಸಂಘ ಪರಿವಾರದ ಪ್ರಯೋಗಾಲಯ ಕರಾವಳಿ ಪ್ರದೇಶ, ಎಲೆಕ್ಷನ್ ಹತ್ತಿರ ಬಂದಾಗ ಇಂತಹ ವಿಷಯಗಳನ್ನು ಮುನ್ನಲೆ ತರಲಾಗುತ್ತದೆ. ಕೊರ್ಟ್ ನ ಡಿಸಿಷನ್ ನೋಡಿಕೊಂಡು ನಾವು ಅಸೆಂಬ್ಲಿಯಲ್ಲಿ ಈ ವಿಷಯವನ್ನು ಪ್ರಸ್ತಾಪ ಮಾಡುತ್ತೇವೆ ಎಂದು ತಿಳಿಸಿದರು.

Gayathri SG

Recent Posts

ಸ್ಲೊವಾಕಿಯಾ ಪ್ರಧಾನ ಮಂತ್ರಿಗೆ ಗುಂಡೇಟು : ಶಂಕಿತ ಅರೆಸ್ಟ್

ಅಮೆರಿಕ ವಿರೋಧಿ ನಿಲುವುಗಳನ್ನು ಹೊಂದಿರುವ ತೀವ್ರ ಎಡಪಂಥೀಯ ನಾಯಕ, ಸ್ಲೊವಾಕಿಯಾ ಪ್ರಧಾನ ಮಂತ್ರಿ ರಾಬರ್ಟ್ ಫಿಕೊ ಹತ್ಯೆ ಯತ್ನಬುಧವಾರ ನಡೆದಿದೆ.…

7 mins ago

49 ಅಭ್ಯರ್ಥಿಗಳಿಂದ ಉಮೇದುವಾರಿಕೆ : ನಾಮಪತ್ರ ಸಲ್ಲಿಕೆಗೆ ಇಂದು ಕೊನೆ ದಿನ

ಪದವೀಧರ ಹಾಗೂ ಶಿಕ್ಷಕರ ಕ್ಷೇತ್ರಗಳ ವಿಧಾನ ಪರಿಷತ್ತಿನ ಆರು ಸ್ಥಾನಗಳಿಗೆ ನಡೆಯಲಿರುವ ಚುನಾವಣೆಗೆ ನಾಮಪತ್ರ ಸಲ್ಲಿಸಲು ಗುರುವಾರ ಕೊನೆಯ ದಿನ.…

24 mins ago

ವೈದ್ಯರ ಎಡವಟ್ಟಿಗೆ ಆಸ್ಪತ್ರೆಯಲ್ಲಿ ರೋಗಿ ಸಾವು

ವೈದ್ಯರ ಎಡವಟ್ಟಿಗೆ ಆಸ್ಪತ್ರೆಯಲ್ಲಿ ರೋಗಿ ಸಾವನಪ್ಪಿರುವ ಘಟನೆ ಪುತ್ತೂರಿನ ಖಾಸಗಿ ಆಸ್ಪತ್ರೆಯಲ್ಲಿ ನಡೆದಿದೆ.ಕೃಷ್ಣಪ್ಪ ಗೌಡ(47) ಮೃತ ವ್ಯಕ್ತಿ. ಬಂಟ್ವಾಳ ತಾಲೂಕಿನ…

46 mins ago

ನೀವು ತಡರಾತ್ರಿ ವರೆಗೆ ಎಚ್ಚರ ಇರುತ್ತೀರಾ? ಇದರ ಸಮಸ್ಯೆಗಳೇನು ಗೊತ್ತೇ?

ತಡರಾತ್ರಿ ಇಲ್ಲ ಮುಂಜಾವರೆಗೂ ಕೆಲವರು ನಿದ್ದೆ ಗೆಡುತ್ತಾರೆ ಇದೊಂದು ಈಗಿನ ಜಯಮಾನದ ಸಾಮಾನ್ಯ ಅಭ್ಯಾಸವಾಗಿದೆ.ಕೆಲಸದ ಒತ್ತಡ, ಕಚೇರಿಯ ಕೆಲಸಗಳು, ಸಾಮಾಜಿಕ…

1 hour ago

ಮೋದಿ ವಿರುದ್ಧ ಸ್ಪರ್ಧಗೆ ಮುಂದಾಗಿದ್ದ ಕಾಮೆಡಿಯನ್‌ ಶ್ಯಾಮ್ ನಾಮಪತ್ರ  ರಿಜೆಕ್ಟ್‌!

ಪ್ರಧಾನಿ ನರೇಂದ್ರ ಮೋದಿ ಅವರ ವಿರುದ್ಧ ವಾರಣಾಸಿ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಿದ್ದ ಸ್ಟ್ಯಾಂಡಪ್‌ ಕಾಮಿಡಿಯನ್‌ ಶ್ಯಾಮ್ ರಂಗೀಲಾ ಅವರ ನಾಮಪತ್ರ…

1 hour ago

ಪ್ಯಾಶನ್ ಫ್ರೂಟ್: ಇದರಲ್ಲಿರುವ ಆರೋಗ್ಯಕರ ಪ್ರಯೋಜನಗಳೇನು?

ಈ ಹಣ್ಣು ಹುಳಿ ರುಚಿಯನ್ನು ಹೊಂದಿದ್ದರೂ ಆರೋಗ್ಯ ವಿಚಾರದಲ್ಲಿ ಸಿಹಿ ಗುಣಗಳನ್ನು ಹೊಂದಿದೆ. ಇದನ್ನು ಬೆಳೆಯಲು ಉಷ್ಣ ವಲಯ ಅತ್ಯುತ್ತಮ.…

2 hours ago