ಕರೆ ಸ್ವೀಕರಿಸದ್ದಕ್ಕೆ ಶಾಸಕ ಸೋಮಶೇಖರ ರೆಡ್ಡಿ ಆಕ್ರೋಶ: ಸ್ಪಷ್ಟನೆ ನೀಡಿದ ಡಾ. ಕೆ ಸುಧಾಕರ್

ಬೆಂಗಳೂರು ಫೆ. 03: ತಮ್ಮ ಕರೆ ಸ್ವೀಕರಿಸದ್ದಕ್ಕೆ ಶಾಸಕ ಸೋಮಶೇಖರ ರೆಡ್ಡಿ ಆಕ್ರೋಶಗೊಂಡ ಬೆನ್ನಲ್ಲೆ ಇಂದು ಆರೋಗ್ಯ ಸಚಿವ ಡಾ. ಕೆ ಸುಧಾಕರ್ ಪ್ರತಿಕ್ರಿಯೆ ನೀಡಿದ್ದಾರೆ. ಸೋಮಶೇಖರ್ ರೆಡ್ಡಿ ಅವರು ಆರೋಗ್ಯ ಸರಿ ಇಲ್ಲದ ಸಮಯದಲ್ಲಿ ನನಗೆ ಕರೆ ಮಾಡಿದ್ದರು. ಅವರು ನನ್ನ ಆತ್ಮೀಯ ಸ್ನೇಹಿತರು ಎಂದು ಸುಧಾಕರ್ ಹೇಳಿದ್ದಾರೆ.

ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಡಾ.ಕೆ ಸುಧಾಕರ್, ‘ಸೋಮಶೇಖರ್ ರೆಡ್ಡಿ ನನಗೆ ಕರೆ ಮಾಡಿದ್ದರು. ಆಗ ನನಗೆ ಆರೋಗ್ಯ ಸರಿ ಇರಲಿಲ್ಲ. ಹೀಗಾಗಿ ನಾನು ಮಾತನಾಡಲಿಲ್ಲ. ಬಳಿಕ ನಾನು ಅವರೊಂದಿಗೆ ಮಾತನಾಡಿದ್ದೇನೆ. ಸದ್ಯ ಯಾವುದೇ ಸಮಸ್ಯೆ ಇಲ್ಲ. ಅವರು ನನ್ನ ಆಪ್ತ ಸ್ನೇಹಿತರು’ ಎಂದು ಅವರು ಹೇಳಿದ್ದಾರೆ.

ನಿನ್ನೆ ಬಿಜೆಪಿ ಶಾಸಕ ಸೋಮಶೇಖರ್ ರೆಡ್ಡಿ ಡಾ. ಕೆ ಸುಧಾಕರ್ ಮೇಲೆ ಕರೆ ಸ್ವೀಕರಿಸಿದ ಆರೋಪವನ್ನು ಮಾಡಿದ್ದರು. ಕಲ್ಯಾಣ ಕರ್ನಾಟಕ ಭಾಗದ ವಿದ್ಯಾರ್ಥಿಗಳಿಗೆ ಎಂಬಿಬಿಎಸ್ ಹಾಗೂ ಎಂಡಿ ಸೀಟ್​ಗಳ ಸಂಖ್ಯೆಯಲ್ಲಿ ಕಡಿತವಾಗಿದೆ ಎಂದು ಶಾಸಕ ಸೋಮಶೇಖರ ರೆಡ್ಡಿ ಆಕ್ರೋಶ ವ್ಯಕ್ತಪಡಿಸಿದರು. ಈ ಕುರಿತು ಚರ್ಚಿಸಲು ಆರೋಗ್ಯ ಸಚಿವ ಡಾ.ಕೆ.ಸುಧಾಕರ ಅವರಿಗೆ ಕರೆ ಮಾಡಿದ್ದೆ. ಅವರು ನನ್ನ ಕರೆ ಸ್ವೀಕರಿಸಲಿಲ್ಲ. ಆದರೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಕೇವಲ 30 ಸೆಕೆಂಡ್​ನಲ್ಲಿ ಕೆಲಸ ಮಾಡಿಕೊಟ್ಟರು. ಇವರೇನೂ ಸಿಎಂಗಿಂತ್ಲೂ ದೊಡ್ಡವರಾ? ಇವರ ವರ್ತನೆ ವಿರುದ್ಧ ಕ್ರಮಕೈಗೊಳ್ಳಬೇಕಿದೆ ಎಂದು ಅವರು ಆಗ್ರಹಿಸಿದ್ದರು. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಭೇಟಿಯಾಗಿ, ನಮ್ಮ ಸಮಸ್ಯೆ ಹೇಳಿಕೊಂಡೆವು. ಅವರು ತಕ್ಷಣ ಸಮಸ್ಯೆಗೆ ಸ್ಪಂದಿಸಿದರು. ಸಚಿವ ಸುಧಾಕರ್ ಅವರ ವರ್ತನೆಯ ಬಗ್ಗೆ ನನಗೆ ಆಕ್ಷೇಪವಿದೆ. ಅವರ ವಿರುದ್ಧ ಕ್ರಮ ಜರುಗಿಸಬೇಕೆಂದು ನಮ್ಮ ಪಕ್ಷದ ರಾಜ್ಯ ಘಟಕದ ಅಧ್ಯಕ್ಷರಿಗೆ ಮನವಿ ಮಾಡುತ್ತೇನೆ ಎಂದರು.

ಇನ್ನೂ ನಾನು 15ಕ್ಕೂ ಹೆಚ್ಚು ದುರಹಂಕಾರಿ ಸಚಿವರ ವಿರುದ್ಧ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಾಗೂ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರಿಗೆ ದೂರು ಕೊಟ್ಟಿರುವುದು ನಿಜ ಎಂದು ಹೊನ್ನಾಳಿ ಶಾಸಕ ಎಂ.ಪಿ.ರೇಣುಕಾಚಾರ್ಯ ಹೇಳಿದರು. ನಾನು ಲಿಖಿತ ರೂಪದಲ್ಲಿ ದೂರು ನೀಡಿಲ್ಲ. ಜ.27ರಂದು ಒಬ್ಬ ಸಚಿವರಿಗೆ ನಾನು ಕರೆ ಮಾಡಿದ್ದೆ, ಅವರು ನನ್ನ ಕರೆ ಸ್ವೀಕರಿಸಿರಲಿಲ್ಲ. ಅವರ ಆಪ್ತಸಹಾಯಕರು ಕರೆ ಸ್ವೀಕರಿಸಿ ಸಚಿವರಿಗೆ ಕೊರೊನಾ ಎಂದರು. ನಾನು ಸುಮ್ಮನಾಗಿದ್ದೆ. ಆದರೆ ಮರುದಿ‌ನ ಅವರು ಸಚಿವ ಸಂಪುಟ ಸಭೆಗೆ ಹಾಜರಾಗಿದ್ದರು. ಸಚಿವರು ಈ ರೀತಿಯಾಗಿ ಮಾಡಿರುವುದು ಸರಿಯಲ್ಲ. ನಾನು ಈ ದೂರವಾಣಿ ಕರೆಯ ಬಗ್ಗೆ ಸಹ ಮಾಹಿತಿ ನೀಡಿರುವೆ. ಈ ವಿಚಾರದ ಬಗ್ಗೆ ಬಿಜೆಪಿ ವರಿಷ್ಠರು ನಿರ್ಧರಿಸುತ್ತಾರೆ ಎಂದು ಅವರು ಹೇಳಿದರು.

ಹೊನ್ನಾಳಿಯಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಶಾಸಕರ ಮನವಿಗೆ ಸ್ಪಂದಿಸದ ಹಾಗೂ ಕ್ಷೇತ್ರದ ಕೆಲಸ ಮಾಡಿಕೊಡದ ಕೆಲ ದುರಹಂಕಾರಿ ಸಚಿವರನ್ನು ಸಂಪುಟದಿಂದ ವಜಾಗೊಳಿಸಬೇಕು ಎಂದು ಒತ್ತಾಯಿಸಿದರು. ಕೆಲವು ಸಚಿವರು ತಮ್ಮಿಂದಲೇ ಸರ್ಕಾರ ಬಂದಿದೆ. ತಮ್ಮಿಂದಲೇ ಎಲ್ಲವೂ ನಡೆಯುತ್ತದೆ ಎಂಬ ಅಹಂನಲ್ಲಿದ್ದಾರೆ. ನಾನು ಎಲ್ಲ ಸಚಿವರ ಬಗ್ಗೆ ಟೀಕೆ ಮಾಡುವುದಿಲ್ಲ. ಕೆಲವು ಸಚಿವರು ನಮ್ಮ ಮನವಿಗೆ ಸ್ಪಂದಿಸಿ ನಮ್ಮನ್ನು ಗೌರವದಿಂದ ಕಾಣುತ್ತಾರೆ. ಕ್ಷೇತ್ರದ ಕೆಲಸಗಳನ್ನು ಮಾಡಿಕೊಡುತ್ತಾರೆ. ಅಂಥವರ ಬಗ್ಗೆ ನಮಗೆ ಯಾವುದೇ ಅಸಮಾಧಾನವಿಲ್ಲ ಎಂದು ಸ್ಪಷ್ಟಪಡಿಸಿದರು.

Gayathri SG

Recent Posts

ರೇವಣ್ಣ ವಿಡಿಯೋ ಕೇಸ್‌ : ಡಿಸಿ ಸಿ. ಸತ್ಯಭಾಮ ಮತ್ತೊಂದು ಸ್ಫೋಟಕ ಮಾಹಿತಿ

ಇದೀಗ ಪ್ರಜ್ವಲ್‌ ರೇವಣ್ಣ ಅವರ ಅಶ್ಲೀಲ ವಿಡಿಯೋ ಪ್ರಕರಣ್ಣಕ್ಕೆ ಸಂಬಂಧ ಪಟ್ಟಂತೆ ಜಿಲ್ಲಾಧಿಕಾರಿ ಸಿ. ಸತ್ಯಭಾಮ ಮಾತನಾಡಿದ್ದು ಯಾರಾದ್ರೂ ಸಂತ್ರಸ್ತೆ…

10 mins ago

ಪೋಕ್ಸೋ ಕೇಸ್; ನ್ಯಾಯಾಲಯಕ್ಕೆ ಶರಣಾದ ಮುರುಘಾ ಶ್ರೀ

ಪೋಕ್ಸೋ ಪ್ರಕರಣದ ಆರೋಪಿಯಾಗಿರುವ ಮುರುಘಾ ಮಠದ ಶ್ರೀ ಶಿವಮೂರ್ತಿ ಮುರುಘಾ ಶರಣರು ಇಂದು ಮಧ್ಯಾಹ್ನ ನ್ಯಾಯಾಲಯಕ್ಕೆ ಶರಣಾದರು. ಪೋಕ್ಸೋ ಪ್ರಕರಣದಡಿ…

39 mins ago

ಪ್ರಜ್ವಲ್ ರೇವಣ್ಣ ವಿಡಿಯೋ ಕೇಸ್​ಗೆ ಟ್ವಿಸ್ಟ್‌ : ಸಂತ್ರಸ್ಥೆ ಅತ್ತೆಯಿಂದ ಸ್ಫೋಟಕ ಮಾಹಿತಿ

ಹಾಸನ ಸಂಸದ ಪ್ರಜ್ವಲ್‌ ರೇವಣ್ಣ ವಿರುದ್ಧದ ಅಶ್ಲೀಲ ವಿಡಿಯೊ ಎನ್ನಲಾದ ಪೆನ್‌ಡ್ರೈವ್‌ ಪ್ರಕರಣಕ್ಕೆ ಟ್ವಿಸ್ಟ್‌ ಸಿಕ್ಕಿದ್ದು, ರೇವಣ್ಣ‌, ಪ್ರಜ್ವಲ್ ವಿರುದ್ಧ…

50 mins ago

ಮಾಜಿ ಮುಖ್ಯಮಂತ್ರಿ ಎಸ್.ಎಮ್ ಕೃಷ್ಣ ಆಸ್ಪತ್ರೆಗೆ ದಾಖಲು

ಮಾಜಿ ಮುಖ್ಯಮಂತ್ರಿ, ಹಿರಿಯ ರಾಜಕೀಯ ಮುತ್ಸದಿ ಎಸ್​ಎಂ ಕೃಷ್ಣ ಅವರನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಅವರ ಆರೋಗ್ಯದಲ್ಲಿ ಏರುಪೇರಾಗಿದ್ದರಿಂದ ಚಿಕಿತ್ಸೆಗಾಗಿ…

1 hour ago

ಅರಿಯಡ್ಕ ಗ್ರಾಮದ ಕೆರೆಮೂಲೆ ನಿವಾಸಿ ನಾಪತ್ತೆ

ಕೆದಂಬಾಡಿ ಗ್ರಾಮದ ಕೆರೆಮೂಲೆ ನಿವಾಸಿಯೊಬ್ಬರು ನಾಪತ್ತೆಯಾದ ಕುರಿತು ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

1 hour ago

ಸಿದ್ದಾರೂಢ ಕಾಲೋನಿಯಲ್ಲಿ ವಿನೋದ್‌ ಅಸೂಟಿ ಮತಯಾಚನೆ

ಲೋಕಸಭಾ ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿ ವಿನೋದ್‌ ಅಸೂಟಿ ಅವರು,ಧಾರವಾಡ ಗ್ರಾಮೀಣ ವಿಧಾನಸಭಾ ಕ್ಷೇತ್ರದ ಧಾರವಾಡ ನಗರದ ವಾರ್ಡ್ ೫ (ಸಿದ್ದಾರೂಢ…

1 hour ago