ಒಳ ಜಗಳ ಬೇಗುದಿಯಿಂದ ಕಾಂಗ್ರೆಸ್ ನಲುಗಿ ಹೋಗಿದೆ; ಸಚಿವ ಆರ್. ಅಶೋಕ್

ಬೆಂಗಳೂರು : ಸಿದ್ದರಾಮಯ್ಯ ಮತ್ತು ಅಶೋಕ್ ಪಟ್ಟಣ್ ನ‌ ಪಿಸು ಮಾತುಗಳು ಮಾಧ್ಯಮಗಳಿಂದ ಗೊತ್ತಾಗಿದೆ. ಪಾದಯಾತ್ರೆಯನ್ನು ಡಿ ಕೆ ಶಿವಕುಮಾರ್ ವ್ಯಯಕ್ತಿಕ ವರ್ಚಸ್ಸಿಗಾಗಿ ಮಾಡಿದ್ದಾರೆ. ಇದರ‌ ಬಗ್ಗೆ ನಾವು ಕೇಳಿದಾಗ ನಾವೆಲ್ಲರೂ ಒಗ್ಗಟ್ಟಾಗಿದ್ದೇವೆ ಎಂದಿದ್ದರು. ಆದರೆ ಈಗ ಇವರ ಮಾತಿಂದಲೇ ಅವರ ಜಗಳ ಬೀದಿಗೆ ಬಂದಿದೆ ಎಂದು ಸಚಿವ ಆರ್. ಅಶೋಕ್ ಟೀಕೆ ಮಾಡಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಡಿಕೆ ಶಿವಕುಮಾರ್ ರಾಜ್ಯದ ಎಲ್ಲಾ ಕ್ಷೇತ್ರ ಗಳನ್ನು ಹಾಳು ಮಾಡುತ್ತಿದ್ದಾರೆಂಬ ಮಾತು ಸಿದ್ದರಾಮಯ್ಯರಿಂದಲೇ ಗೊತ್ತಾಗಿದೆ . ಇವರ ಈ ಒಳ ಜಗಳ ಬೇಗುದಿಯಿಂದ ಕಾಂಗ್ರೆಸ್ ನಲುಗಿ ಹೋಗಿದೆ. ತಿರುಕನ ಕನಸು ಕಾಣುವ ಅವರು ಈ ಒಳ ಜಗಳದಿಂದ ಆಚೆ ಬಂದರೆ ಸಾಕು ಎಂದರು.

ಬಿಜೆಪಿಯ ರಾಮದಾಸ್ ಹಾಗೂ ಪ್ರತಾಪ್ ಸಿಂಹ ನಡುವೆ ಜಟಾಪಟಿಯ ಬಗ್ಗೆ ಮಾತನಾಡಿದ ಅಶೊಕ್, “ಅದು ಅಭಿವೃದ್ಧಿಯ ಜಗಳವೇ, ಹೊರತು ಪಕ್ಷದದ ಜಗಳವಲ್ಲ” ಎಂದರು. ನಿಮ್ಮ ಪಕ್ಷದಲ್ಲಿ ಒಳ‌ ಜಗಳವಿಲ್ಲವೇ, ಸಚಿವರ ಮೇಲೆ ನಿಮ್ಮ ಶಾಸಕರು ದೂರು ಕೊಟ್ಟಿದ್ದಾರೆಂಬ ಪ್ರಶ್ನೆಗೆ ಅಶೋಕ್ ಮೌನವಾದರು.

ವೆಹಿಕಲ್ ಟೋಯಿಂಗ್ ವಿಚಾರದಲ್ಲಿ ಪೊಲೀಸರು, ಜನಸಾಮಾನ್ಯರ ನಡುವೆ ಘರ್ಷಣೆ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಮಾಧ್ಯಮಗಳಲ್ಲಿ ಹಲವು ಪ್ರಕರಣಗಳನ್ನು ನೋಡಿದ್ದೇವೆ. ಕೆಲವೆಡೆ ಟೋಯಿಂಗ್ ಮಾಡುವ ವಿಚಾರದಲ್ಲಿ ಬೇಕಾಬಿಟ್ಟಿ ಆಡುತ್ತಿದ್ದಾರೆ. ಈಗಾಗಲೇ ರವಿಕಾಂತೇಗೌಡ ಜೊತೆ ಮಾತುಕತೆ ನಡೆಸಿದ್ದೇವೆ. ಸೋಮವಾರ ಟ್ರಾಫಿಕ್ ಪೊಲೀಸ್ ಅಧಿಕಾರಿಗಳ ಜೊತೆ ಸಭೆ ನಡೆಸುತ್ತೇವೆ. ಬೆಂಗಳೂರಿನಲ್ಲಿ ಆಗುತ್ತಿರುವ ಘಟನೆಗಳ ಬಗ್ಗೆ ಸೂಕ್ತ ನಿರ್ದೇಶನ ಕೊಡುತ್ತೇವೆ ಎಂದರು.

Gayathri SG

Recent Posts

ವಕೀಲ ಬಾಬಶೆಟ್ಟಿ ಹತ್ಯೆಗೆ 5 ಲಕ್ಷ ಸುಪಾರಿ: ಪ್ರಮುಖ ಆರೋಪಿ ಬಂಧನ

ಐದು ಲಕ್ಷ ರೂಪಾಯಿಗೆ ಸುಪಾರಿ ಕೊಟ್ಟು, ವಕೀಲನ ಹತ್ಯೆಗೆ ಸಂಚು ರೂಪಿಸಿದ್ದ ಪ್ರಮುಖ ಆರೋಪಿಯನ್ನು ಬಂಧಿಸುವಲ್ಲಿ ಬೀದರ್‌ ಜಿಲ್ಲಾ ಪೊಲೀಸರು…

9 mins ago

ದೇಶಾದ್ಯಂತ 24 ಗಂಟೆ ವಿದ್ಯುತ್‌ ಪೂರೈಕೆ ಸೇರಿ 10 ಗ್ಯಾರಂಟಿ ಘೋಷಿಸಿದ ಕೇಜ್ರಿವಾಲ್

2024ರ ಲೋಕಸಭಾ ಚುನಾವಣೆಯಲ್ಲಿ ಆಮ್ ಆದ್ಮಿ ಪಕ್ಷ ಗೆದ್ದರೆ ಹತ್ತು ಗ್ಯಾರಂಟಿಗಳನ್ನು ಜಾರಿಗೊಳಿಸಲಾಗುವುದು ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ್‌ ಕೇಜ್ರಿವಾಲ್‌…

15 mins ago

ಬೀದರ್‌: ಬಿಸಿ ದೋಸೆಯಂತೆ ಮಾರಾಟವಾಗುತ್ತಿದೆ ಎಸಿ, ಕೂಲರ್‌

ಬಿಸಿಲು ಹಾಗೂ ಅದರ ಝಳದಿಂದ ಜನ ಒಂದೆಡೆ ತೀವ್ರ ಅನಾರೋಗ್ಯದ ಸಮಸ್ಯೆ ಎದುರಿಸುತ್ತಿದ್ದರೆ, ಏರ್‌ ಕಂಡಿಷನರ್‌ (ಎಸಿ), ಏರ್‌ ಕೂಲರ್‌ಗಳ…

29 mins ago

ಪರಿಷತ್ ಚುನಾವಣೆಯಲ್ಲೂ ಜೆಡಿಎಸ್ ಜತೆ ಮೈತ್ರಿ ಮುಂದುವರಿಕೆ: ಬಿ.ಎಸ್.ಯಡಿಯೂರಪ್ಪ

ಮುಂಬರುವ ವಿಧಾನಪರಿಷತ್ ಚುನಾವಣೆಯಲ್ಲೂ ಜೆಡಿಎಸ್-ಬಿಜೆಪಿಮೈತ್ರಿ ಮುಂದುವರಿಯಲಿದ್ದು, ಮೈತ್ರಿಗೆ ಯಾವುದೇ ಭಂಗ ಆಗುವುದಿಲ್ಲ ಎಂದು ಬಿಜೆಪಿ ಸಂಸದೀಯ ಮಂಡಳಿ ಸದಸ್ಯ ಬಿ.ಎಸ್.ಯಡಿಯೂರಪ್ಪ…

46 mins ago

ವೇಣುಗೋಪಾಲಸ್ವಾಮಿ ದೇಗುಲ ಬಳಿ ಅಡ್ಡಾಡುತ್ತಿರುವ ಒಂಟಿ ಗಜ

ಪ್ರತಿಷ್ಠಿತ ಇತಿಹಾಸ ಪ್ರಸಿದ್ಧ ಶ್ರೀ ಹಿಮವದ್ ವೇಣುಗೋಪಾಲಸ್ವಾಮಿ ಬೆಟ್ಟದ ದೇಗುಲ ಆವರಣದ ಬಳಿ ಎಂದಿನಂತೆ ಆಗಮಿಸಿದ ಒಂಟಿ ಆನೆ ವಾಪಾಸ್…

1 hour ago

ಕಾಡಾನೆಯಿಂದ ಬೆಳೆ ನಾಶ: ಮನನೊಂದು ರೈತ ಆತ್ಮಹತ್ಯೆ

ಸಾಲ ಮಾಡಿ ಬೆಳೆದ ಬೆಳೆಯನ್ನು ಕಾಡಾನೆ ಹಿಂಡುಗಳು ನಾಶ ಮಾಡಿದ್ದರಿಂದ ಮನನೊಂದು ರೈತ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೇಲೂರು ತಾಲೂಕಿನ ಅರೇಹಳ್ಳಿ ಹೋಳಿಯ ಚಿಕ್ಕಸಾಲಾವರದ ಬಾವಿಕಟ್ಟೆ ಗ್ರಾಮದಲ್ಲಿ ನಡೆದಿದೆ.

1 hour ago