ಬೆಂಗಳೂರು ನಗರ

ಒಮಿಕ್ರಾನ್ ಸೋಂಕಿತ ವೈದ್ಯ ಇಂದು ಡಿಸ್ಚಾರ್ಜ್ ಆಗುವ ಸಾಧ್ಯತೆ; ಸಚಿವ ಸುಧಾಕರ್

ಬೆಂಗಳೂರು : ಹೊಸ ರೂಪಾಂತರಿ ವೈರಸ್ ಒಮಿಕ್ರಾನ್ ತೀವ್ರತೆ ಕಡಿಮೆಯಿದೆ. ಜನರು ಆತಂಕಪಡುವ ಅಗತ್ಯವಿಲ್ಲ ಎಂದು ಆರೋಗ್ಯ ಸಚಿವ ಡಾ.ಸುಧಾಕರ್ ತಿಳಿಸಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವ ಸುಧಾಕರ್, ಒಮಿಕ್ರಾನ್ ಸೋಂಕಿತ ವೈದ್ಯ ಇಂದು ಡಿಸ್ಚಾರ್ಜ್ ಆಗುವ ಸಾಧ್ಯತೆ ಇದೆ.

ನ.22ರಂದು ವೈದ್ಯನಿಗೆ ಸೋಂಕು ದೃಢಪಟ್ಟಿತ್ತು. ಸೋಂಕು ಪತ್ತೆಯಾಗಿ ಇಂದಿಗೆ 14 ದಿನಗಳಾಗಿತ್ತು. ಆರ್.ಟಿ.ಪಿ.ಸಿ.ಆರ್ ಟೆಸ್ಟ್ ಕೂಡ ಮಾಡಲಾಗಿದೆ. ವರದಿಯಲ್ಲಿ ನೆಗೆಟಿವ್ ಬಂದರೆ ವೈದ್ಯನನ್ನು ಇಂದು ಡಿಸ್ಚಾರ್ಜ್ ಮಾಡಲಾಗುತ್ತದೆ. ಡಿಸ್ಚಾರ್ಜ್ ಆದರೂ ಕೂಡ 7 ದಿನಗಳ ಕಾಲ ಹೋಂ ಕ್ವಾರಂಟೈನ್ ಆಗಬೇಕು ಎಂದರು.

ರೂಪಾಂತರಿ ಒಮಿಕ್ರಾನ್ ವೈರಸ್ ತೀವ್ರತೆ ಇಲ್ಲ. ಆದರೆ ಮುಂಜಾಗೃತಾ ಕ್ರಮಗಳನ್ನು ಕೈಗೊಳ್ಳುವ ಅಗತ್ಯವಿದೆ. ಯಾವತ್ತೂ ಮೊದಲ ಅಲೆಗಿಂತ ಎರಡನೇ ಅಲೆ ತೀವ್ರವಾಗಿರುತ್ತದೆ. ನಂತರ ಬರುವ ಅಲೆಗಳು ಅಷ್ಟೊಂದು ತೀವ್ರವಾಗಿರುವುದಿಲ್ಲ. ಮುಂದಿನ ದಿನಗಳಲ್ಲಿ ಈ ವೈರಸ್ ಸಾಯುತ್ತದೆ. ಹಾಗಂತ ನಿರ್ಲಕ್ಷ್ಯ ಬೇಡ. ಎಲ್ಲರೂ ಕಡ್ಡಾಯವಾಗಿ ಲಸಿಕೆ ಹಾಕಿಸಿಕೊಳ್ಳಬೇಕು ಎಂದು ಹೇಳಿದರು.

Gayathri SG

Recent Posts

‘ಜೀವನಕ್ಕೆ ಹೊಸಬರು ಬರಲಿದ್ದಾರೆ’: ಕುತೂಹಲ ಮೂಡಿಸಿದ ಪ್ರಭಾಸ್ ಪೋಸ್ಟ್ ವೈರಲ್‌

ಪ್ರಭಾಸ್ ಮದುವೆ ಬಗ್ಗೆ ಆಗಾಗ್ಗೆ ಸುದ್ದಿ ಹರಡುತ್ತಲೇ ಇರುತ್ತದೆ. ದರಲ್ಲಿಯೂ ನಟಿ ಅನುಷ್ಕಾ ಶೆಟ್ಟಿ ಜೊತೆಗಂತೂ ಪ್ರಭಾಸ್ ಮದುವೆಯೇ ಆಗಬಿಟ್ಟಿದ್ದಾರೆ…

17 seconds ago

ಎಂಜಿನಿಯರಿಂಗ್‌ ವಿದ್ಯಾರ್ಥಿನಿ ಹಾಸ್ಟೆಲ್‌ನಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಶವ ಪತ್ತೆ

ಅನುಮಾನಾಸ್ಪದ ರೀತಿಯಲ್ಲಿ ಎಂಜಿನಿಯರಿಂಗ್‌ ಕಾಲೇಜಿನ ವಿದ್ಯಾರ್ಥಿನಿ ಹಾಸ್ಟೆಲ್‌ನಲ್ಲಿ ಮೃತಪಟ್ಟ ಘಟನೆ ಆನೇಕಲ್ ತಾಲೂಕಿನ ಚಂದಾಪುರ ಸಮೀಪ ನಡೆದಿದೆ.

8 mins ago

ಮಂತ್ರಿಮಾಲ್​ನ ಬೀಗ ತೆರೆಯಲು ಬಿಬಿಎಂಪಿಗೆ ಹೈಕೋರ್ಟ್ ಆದೇಶ

ಆಸ್ತಿ ತೆರಿಗೆ ಕಟ್ಟದ ಹಿನ್ನೆಲೆ ಕಳೆದ ಶುಕ್ರವಾರ ಪ್ರತಿಷ್ಠಿತ ಮಂತ್ರಿಮಾಲ್ ನನ್ನು ಬಂದ್ ಮಾಡಲಾಗಿತ್ತು, ಮಾಲ್‌ ನ ಬೀಗ ತೆರೆಯುವಂತೆ ಬಿಬಿಎಂಪಿಗೆ…

25 mins ago

ಭಾರತದಲ್ಲಿ ಮೊಟೊರೊಲ ಎಡ್ಜ್ 50 ಫ್ಯೂಷನ್ ಬಿಡುಗಡೆ

ಭಾರತದಲ್ಲಿ ಅಪರೂಪಕ್ಕೆ ಆಕರ್ಷಕ ಸ್ಮಾರ್ಟ್​ಫೋನ್​ಗಳನ್ನು ಬಿಡುಗಡೆ ಮಾಡುವ ಪ್ರಸಿದ್ಧ ಮೊಟೊರೊಲ ಕಂಪನಿ ಇದೀಗ ನೂತನ ಫೋನ್​ನೊಂದಿಗೆ ಬಂದಿದೆ.

26 mins ago

ಅಂಜಲಿ ಹತ್ಯೆ ಖಂಡಿಸಿ ಬಿಜೆಪಿ ಕಾರ್ಯಕರ್ತರಿಂದ ಠಾಣೆಗೆ ಮುತ್ತಿಗೆ ಯತ್ನ, ಪ್ರತಿಭಟನೆ

ನಗರದಲ್ಲಿ ಅಂಜಲಿ ಹತ್ಯೆ ಖಂಡಿಸಿ ಬಿಜೆಪಿ ಕಾರ್ಯಕರ್ತರಿಂದ ಶಹರ ಪೊಲೀಸ್ ಠಾಣೆಗೆ ಮುತ್ತಿಗೆ ಹಾಕಲು ಯತ್ನಿಸಿದ ಬಿಜೆಪಿ ಕಾರ್ಯಕರ್ತರನ್ನು ಪೊಲೀಸರು…

37 mins ago

ಅಕ್ರಮ ಅಡುಗೆ ಎಣ್ಣೆ ಮಾರಾಟ: ಚಾಲಕ ಪೊಲೀಸರ ವಶಕ್ಕೆ

ಅಕ್ರಮವಾಗಿ ಅಡುಗೆ ಎಣ್ಣೆ ಮಾರಾಟ ಮಾಡಿ ಲಾರಿ ಪಲ್ಟಿಯಾಗಿ ಎಣ್ಣೆ ಕಳುವಾಗಿದೆ ಎಂದು ಮಾಲೀಕರಿಗೆ ಸುಳ್ಳು ಹೇಳಿದ್ದ ಚಾಲಕ ಸಿಕ್ಕಿಬಿದ್ದಿರುವ…

38 mins ago