ಬೆಂಗಳೂರು ನಗರ

ಉತ್ತಮ ಗುಣಮಟ್ಟವಲ್ಲದ ಔಷಧಿಗಳ ಬಳಕೆ ನಿಷೇಧ

ಬೆಂಗಳೂರು : ಔಷಧ ಪರೀಕ್ಷಾ ಪ್ರಯೋಗಾಲಯದ ವಿಶ್ಲೇಷಕರು ಆಗಾಗ್ಗೆ ಗುಣಮಟ್ಟವಲ್ಲದ ಔಷಧಿಗಳನ್ನು ನಿಷೇಧಿಸುತ್ತಲೇ ಬಂದಿದ್ದು ಇದೀಗ ಹಲವು ಔಷಧಿಗಳನ್ನು ನಿಷೇಧಿಸಲಾಗಿದೆ.

ಈಗ ನಿಷೇಧಿಸಿರುವ ಔಷಧಿಗಳು ಯಾವುಗಳೆಂದರೆ, ಕ್ಯೂಮ್ಯಾಕ್ಸ್ 200 (ಓಪ್ಲಾಕ್ಸಸಿನ್ ಟ್ಯಾಬ್ಲೆಟ್ಸ್ ಐಪಿ 200ಎಂಜಿ), ಇಸ್‍ಜೋಲ್-40 (ಇಸೋಮೆಫ್ರೆಜೋಲ್ ಮೆಗ್ನಿಷಿಯಂ ಗ್ಯಾಸ್ಟ್ರೋ ರಿಸಿಸ್ಟೆಂಟ್ ಟ್ಯಾಬ್ಲೆಟ್ಸ್ ಐ.ಪಿ.40 ಎಂಜಿ, ಶೆವ್ಕಾಲ್-500 (ಕ್ಯಾಲ್ಸಿಯಂ ಕಾರ್ಬೋನೇಟ್ ಟ್ಯಾಬ್ಲೆಟ್ಸ್, ಅಂಡ್ ವಿಟಮಿನ್ ಡಿ3 ಟ್ಯಾಬ್ಲೆಟ್ಸ್), ಕ್ಲಿಂಡಾಮೈಸಿನ್ ಕ್ಯಾಪ್ಸೂಲ್ಸ್ ಐ.ಪಿ (ಲಿಂಡಾಮಿಕ್ 300), ಕ್ಲೋಬಾಜ್-10 (ಕ್ಲೋಬಾಜಮ್ ಟ್ಯಾಬ್ಲೆಟ್ಸ್ ಐ.ಪಿ 10 ಎಜಿ), ಕ್ವಿನ್‍ಬಿಡ್- 500, (ಸಿಪ್ರೋಪ್ಲಾಕ್ಸಸಿನ್ ಟ್ಯಾಬ್ಲೆಟ್ಸ್ ಐ.ಪಿ), ಆರ್-ಡಾನ್ ಪ್ಲಸ್ ರಿಸ್ಪೆರಿಡೋನ್ ಅಂಡ್ ಟ್ರೈಹೆಕ್ಸಿಫೆನಿಡಲ್ ಹೆಚ್‍ಸಿಎಲ್ ಟ್ಯಾಬ್ಲೆಟ್ಸ್, ಪ್ರೋಕ್ಸೆಲ್-ಸಿವಿ ಟ್ಯಾಬ್ಲೆಟ್ಸ್, (ಸೆಫೋಡ್ಯಾಕ್ಸಿಮ್ ಪ್ರೋಕ್ಸೆಟಿಲ್ ಅಂಡ್ ಪೋಟ್ಯಾಷಿಯಂ ಕ್ಲಾವುಲನೇಟ್ ಟ್ಯಾಬ್ಲೆಟ್ಸ್) ಗಳಾಗಿವೆ.

ನ್ಯಾನೋಕೋಲ್ಡ್ (ಪ್ಯಾರಸೆಟಮೊಲ್, ಫನೈಲೆಪ್ರಿನ್ ಹೈಡ್ರೋಕ್ಲೋರೈಡ್, ಡಿಫೆನ್ ಹೈಡ್ರಾಮಿನ್ ಹೈಡ್ರೋಕ್ಲೋರೈಡ್ ಅಂಡ್ ಕೆಫೀನ್ ಅನ್‍ ಹೈಡ್ರಸ್ ಟ್ಯಾಬ್ಲೆಟ್ಸ್), ಆಕ್ಸಿಫ್ರೊ-500 ಟ್ಯಾಬ್ಲೆಟ್ಸ್ (ಸಿಫ್ರೋಪ್ಲಾಕ್ಸಸಿನ್ ಹೈಡ್ರೋಕ್ಲೋರೈಡ್ ಟ್ಯಾಬ್ಲೆಟ್ಸ್ ಐ.ಪಿ), ಕ್ಲೋರೋಫಿನೈರಮಿನ್ ಇನ್‍ಜೆಕ್ಷನ್ ಐ.ಪಿ (ಕ್ಲೋರ್‍ವಿಲ್), ಎಸ್‍ಎಕ್ಸ್-ಫ್ಲಾಮ್ (ಅಸೆಕ್ಲೋಫನಕ್, ಪ್ಯಾರಸೆಟಮೋಲ್ ಅಂಡ್ ಸೆರಾಟಿಯೋಪೆಪ್ಟಿಡೇಸ್ ಟ್ಯಾಬ್ಲೆಟ್ಸ್) ಮೊದಲಾದವು ಗುಣಮಟ್ಟದ್ದಲ್ಲವೆಂದು ಔಷಧ ಪರೀಕ್ಷಾ ಪ್ರಯೋಗಾಲಯದ ವಿಶ್ಲೇಷಕರು ಘೋಷಿಸಿದ್ದಾರೆ ಹೀಗಾಗಿ ಅವುಗಳನ್ನು ಔಷಧ ವ್ಯಾಪಾರಿಗಳು, ಸಗಟು ಔಷಧ ಮಾರಾಟಗಾರರು, ವೈದ್ಯರು, ಆಸ್ಪತ್ರೆ ಮತ್ತು ನರ್ಸಿಂಗ್‍ ಹೋಂನವರು ದಾಸ್ತಾನು ಮಾಡುವುದಾಗಲೀ, ಮಾರಾಟ ಮಾಡುವುದಾಗಲೀ ಅಥವಾ ಉಪಯೋಗಿಸುವುದಾಗಲೀ ಮಾಡದಂತೆ ಸೂಚನೆ ನೀಡಲಾಗಿದೆ.

ಒಂದು ವೇಳೆ ಈ ಔಷಧಿಗಳ ದಾಸ್ತಾನನ್ನು ಹೊಂದಿದ್ದಲ್ಲಿ ಕೂಡಲೇ ಸಂಬಂಧಪಟ್ಟ ಕ್ಷೇತ್ರದ ಔಷಧ ಪರಿವೀಕ್ಷಕರು ಅಥವಾ ಸಹಾಯಕ ಔಷಧ ನಿಯಂತ್ರಕರ ಗಮನಕ್ಕೆ ತರಬೇಕು ಹಾಗೂ ಸಾರ್ವಜನಿಕರು ಈ ಔಷಧಿಗಳನ್ನು ಉಪಯೋಗಿಸಬಾರದೆಂದು ಸೂಚಿಸಲಾಗಿದೆ.

Gayathri SG

Recent Posts

ಉದಯ ಟಿವಿಯಲ್ಲಿ‘ಶ್ರೀಮದ್ ರಾಮಾಯಣ’ ಧಾರಾವಾಹಿ ನೋಡಿ ಬಹುಮಾನ ಗೆಲ್ಲಿ

ಈಗ ‘ಉದಯ’ ವಾಹಿನಿಯು ಒಂದು ಹೊಸ ಧಾರಾವಾಹಿಯನ್ನು ಪ್ರೇಕ್ಷಕರ ಎದುರು ತರುತ್ತಿದೆ. ‘ಶ್ರೀಮದ್ ರಾಮಾಯಣʼ ಸೀರಿಯಲ್ ಪ್ರಸಾರಕ್ಕೆ ಸಜ್ಜಾಗಿದೆ. ಮೇ…

10 mins ago

ಲಾರಿಗೆ ಬಸ್‌ ಡಿಕ್ಕಿ : 4 ಸಾವು, 15ಕ್ಕೂ ಹೆಚ್ಚು ಮಂದಿಗೆ ಗಾಯ

ಓವರ್​ಟೇಕ್​ ಮಾಡುವ ಭರದಲ್ಲಿ ಪ್ರಯಾಣಿಕರಿದ್ದ ಬಸ್​ವೊಂದು​ ಲಾರಿಗೆ ಡಿಕ್ಕಿ ಹೊಡೆದ ಘಟನೆ ಚೆನ್ನೈ-ತಿರುಚಿ ಹೆದ್ದಾರಿಯಲ್ಲಿ ಇಂದು ನಡೆದಿದೆ.ಅಪಘಾತದಲ್ಲಿ ನಾಲ್ವರು ಸಾವನ್ನಪ್ಪಿದ್ದಾರೆ.…

31 mins ago

ಸ್ಲೊವಾಕಿಯಾ ಪ್ರಧಾನ ಮಂತ್ರಿಗೆ ಗುಂಡೇಟು : ಶಂಕಿತ ಅರೆಸ್ಟ್

ಅಮೆರಿಕ ವಿರೋಧಿ ನಿಲುವುಗಳನ್ನು ಹೊಂದಿರುವ ತೀವ್ರ ಎಡಪಂಥೀಯ ನಾಯಕ, ಸ್ಲೊವಾಕಿಯಾ ಪ್ರಧಾನ ಮಂತ್ರಿ ರಾಬರ್ಟ್ ಫಿಕೊ ಹತ್ಯೆ ಯತ್ನಬುಧವಾರ ನಡೆದಿದೆ.…

51 mins ago

49 ಅಭ್ಯರ್ಥಿಗಳಿಂದ ಉಮೇದುವಾರಿಕೆ : ನಾಮಪತ್ರ ಸಲ್ಲಿಕೆಗೆ ಇಂದು ಕೊನೆ ದಿನ

ಪದವೀಧರ ಹಾಗೂ ಶಿಕ್ಷಕರ ಕ್ಷೇತ್ರಗಳ ವಿಧಾನ ಪರಿಷತ್ತಿನ ಆರು ಸ್ಥಾನಗಳಿಗೆ ನಡೆಯಲಿರುವ ಚುನಾವಣೆಗೆ ನಾಮಪತ್ರ ಸಲ್ಲಿಸಲು ಗುರುವಾರ ಕೊನೆಯ ದಿನ.…

1 hour ago

ವೈದ್ಯರ ಎಡವಟ್ಟಿಗೆ ಆಸ್ಪತ್ರೆಯಲ್ಲಿ ರೋಗಿ ಸಾವು

ವೈದ್ಯರ ಎಡವಟ್ಟಿಗೆ ಆಸ್ಪತ್ರೆಯಲ್ಲಿ ರೋಗಿ ಸಾವನಪ್ಪಿರುವ ಘಟನೆ ಪುತ್ತೂರಿನ ಖಾಸಗಿ ಆಸ್ಪತ್ರೆಯಲ್ಲಿ ನಡೆದಿದೆ.ಕೃಷ್ಣಪ್ಪ ಗೌಡ(47) ಮೃತ ವ್ಯಕ್ತಿ. ಬಂಟ್ವಾಳ ತಾಲೂಕಿನ…

2 hours ago

ನೀವು ತಡರಾತ್ರಿ ವರೆಗೆ ಎಚ್ಚರ ಇರುತ್ತೀರಾ? ಇದರ ಸಮಸ್ಯೆಗಳೇನು ಗೊತ್ತೇ?

ತಡರಾತ್ರಿ ಇಲ್ಲ ಮುಂಜಾವರೆಗೂ ಕೆಲವರು ನಿದ್ದೆ ಗೆಡುತ್ತಾರೆ ಇದೊಂದು ಈಗಿನ ಜಯಮಾನದ ಸಾಮಾನ್ಯ ಅಭ್ಯಾಸವಾಗಿದೆ.ಕೆಲಸದ ಒತ್ತಡ, ಕಚೇರಿಯ ಕೆಲಸಗಳು, ಸಾಮಾಜಿಕ…

2 hours ago