ಈ ಬಾರಿ ಸೂಕ್ಷ್ಮ ಬಜೆಟ್​ ಮಂಡಿಸಲಾಗಿದೆ : ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ  ಅವರು ಸಿಎಂ ಆಗಿ 9 ತಿಂಗಳ ಬಳಿಕ ಚೊಚ್ಚಲ ಬಜೆಟ್​  ಮಂಡಿಸಿದ್ದಾರೆ. ಕೊರೊನಾ, ಮುಂಬರುವ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಇಂದು(ಮಾ.4) 2022-23ನೇ ಸಾಲಿನ ಬಜೆಟ್​ ಮಂಡಿಸಿದ್ದಾರೆ. ಶಿಕ್ಷಣ, ಆರೋಗ್ಯ, ಶಿಕ್ಷಣ ಕ್ಷೇತ್ರಗಳಿಗೆ ಹೆಚ್ಚಿನ ಒತ್ತು ನೀಡಲಾಗಿದೆ. ಇಂದು  ಮಧ್ಯಾಹ್ನ ಬಜೆಟ್​ ಮಂಡಿಸಿದ ಬಳಿಕ ಸುದ್ದಿಗೋಷ್ಟಿ ನಡೆಸಿ ಮಾತನಾಡಿದರು.

ಸುದ್ದಿಗೋಷ್ಟಿಯಲ್ಲಿ ಬಜೆಟ್​ ಬಗ್ಗೆ ಮಾತನಾಡಿದ ಅವರು, ಈ ಬಾರಿ ಸೂಕ್ಷ್ಮ ಬಜೆಟ್​ ಮಂಡಿಸಲಾಗಿದೆ. ಕಳೆದ ಎರಡು ವರ್ಷಗಳಲ್ಲಿ ಆರ್ಥಿಕತೆ ಬಹಳಷ್ಟು ಪೆಟ್ಟುಬಿದ್ದಿತ್ತು. ನೈಸರ್ಗಿಕ ವಿಕೋಪ ಹಾಗೂ ಕೋವಿಡ್ ನಿಂದ 2021 -22 ರಲ್ಲಿ ಕುಸಿತವಾಗಿತ್ತು. ಈಗ ಆರ್ಥಿಕತೆ ಸುಧಾರಿಸುತ್ತಿದೆ ಲೆಕ್ಕಚಾರ ಹಾಕೋದಕ್ಕೆ ಗೊತ್ತಾಗುತ್ತಿದೆ.

2.65.720 ಕೋಟಿ ಈ ಬಾರಿಯ ಬಜೆಟ್ ಗಾತ್ರವಾಗಿದೆ. ಕಳೆದ ಬಾರಿಗಿಂತ 19,513 ಕೋಟಿ ಹೆಚ್ಚಳವಾಗಿದೆ. ಕಳೆದ ಬಾರಿಗೆ ಕಂಪೇರ್ ಮಾಡಿದರೆ, ಕ್ಯಾಪಿಟಲ್ ಎಕ್ಸ್ಪೆಂಡೇಚರ್ ಸುಮಾರು 2700 ಕೋಟಿ ಹೆಚ್ಚಳವಾಗಿದೆ. ನಮಗೆ 67100 ಕೋಟಿ ಸಾಲ ತೆಗೆದುಕೊಳ್ಳಲು ಅವಕಾಶವಿತ್ತು.

ಆದರೆ ಆರ್ಥಿಕ ಸಂಪೂನ್ಮೂಲ ಹೆಚ್ಚಳ ಮಾಡುವುದರ ಮೂಲಕ, ಖರ್ಚುಗಳನ್ನ ಕಡಿಮೆಮಾಡುವುದರ ಮೂಲಕ ಸುಮಾರು 4 ಕೋಟಿ ಕಡಿಮೆ ಮಾಡಿದ್ದೇವೆ. ಇದು ನಮ್ಮ ಆರ್ಥಿಕತೆ ಬಗ್ಗೆ ಪ್ರತಿಬಿಂಬಿಸುತ್ತದೆ ಎಂದಿದ್ದಾರೆ.

ನಾವೂ ಆರ್ಥಿಕ ಸಂಪನ್ಮೂಲ ಕ್ರೂಢಿಕರಿಸುವುದು, ಖರ್ಚುವೆಚ್ಚ ಕಡಿಮೆ ಮಾಡುವುದು ನಮ್ಮ ಮುಂದಿರುವ ಗುರಿಯಾಗಿದೆ
ಈ ಬಾರಿಯ ಬಜೆಟ್ ನಲ್ಲಿ ಕೇಂದ್ರದ ಜಿಎಸ್ ಟಿ ಪರಿಹಾರವನ್ನ ಲೆಕ್ಕಕ್ಕೆ ತೆಗೆದುಕೊಂಡಿಲ್ಲ. ನಾವೂ ಕೇಂದ್ರ ಸರ್ಕಾರಕ್ಕೆ ಕನಿಷ್ಠ ಮೂರು ವರ್ಷ ಮುಂದುವರಿಸಿ ಎಂದು ಮನವಿ ಮಾಡಿದ್ದೇವೆ. ಆಗ ಗಣನೀಯವಾಗಿ ಆರ್ಥಿಕತೆಯನ್ನ ನಾವೂ ಸುಧಾರಿಸಬಹುದು.

ರೈತರಿಗೆ ಐದು ಎಕರೆವರೆಗೂ ಡೀಸೆಲ್ ಗೆ ಎಕರೆಗೆ 250 ರೂಪಾಯಿವರೆಗೂ ಸಬ್ಸಿಡಿ ನೀಡುತ್ತೇವೆ. ಯಶಸ್ವಿನಿ ಯೋಜನೆಗೆ ೩೦೦ ಕೋಟಿ ಮೀಸಲಿಟ್ಟು ರೈತರ ಆರೋಗ್ಯಕ್ಕೆ ನೆರುವು ಆಗುವಂತೆ ಮಾಡಿದ್ದೇವೆ. 33 ಲಕ್ಷ ರೈತರಿಗೆ ಬಡ್ಡಿ ರಹಿತ ಸಾಲ ನೀಡುತ್ತೇವೆ. ಇದು ರೈತರಿಗೆ ನೆರವಾಗಲಿದೆ. ಇದು ಬಡವರ ಪರವಾದ, ಕಷ್ಟದಲ್ಲಿರುವವರನ್ನ ಅರಿತು ಮಾಡಿರುವ ಸೂಕ್ಷ್ಮ ಬಜೆಟ್ ಆಗಿದೆ.  ರಾಜ್ಯವನ್ನು ನವಕರ್ನಾಟಕದಿಂದ ನವಭಾರತದತ್ತ ತೆಗೆದುಕೊಂಡು ಹೋಗಲು ಬೇಕಾದ ಕ್ರಮ ಕೈಗೊಳ್ಳಲಾಗುವುದು.

ಇನ್ನು ಕೆಲವು ಸಮಸ್ಯೆಗಳಿಗೆ ಕಾನೂನಿನ ತೊಡಕು ಇದೆ. ಅದನ್ನು ನಿವಾರಿಸಿ ಜನರಿಗೆ ಉಪಯುಕ್ತವಾಗುವಂತೆ ಮಾಡುತ್ತೇವೆ. ಇದು ಅತ್ಯಂತ ಗುರಿಯಿಟ್ಟ, ಪ್ರಾದೇಶಿಕ ಸಮಾನತೆಯ ಬಜೆಟ್​, ಕೃಷಿ, ದುಡಿಯುವವರಿಗೆ, ಮಹಿಳೆ, ಯುವ ಜನತೆಗೆ ಉಪಯೋಗವಾಗಲಿದೆ.

ಬಜೆಟ್​ ನಲ್ಲಿ ಒಂದಷ್ಟು ಹೊಸ ವಿಚಾರ ಅಡಕವಾಗಿದೆ, ಈ ಬಾರಿಯ ಬಜೆಟ್​ನಲ್ಲಿ ಘೋಷಣೆಯಾದ ಯೋಜನೆಗಳನ್ನು ಇದೇ ವರ್ಷದಲ್ಲಿ ಜಾರಿಗೆ ತರಲಾಗುವುದು.  ಎಂದರು. ಇನ್ನು ಮೇಕೆ ದಾಟು ಯೋಜನೆಗ್ಎ ಹಣ ಮೀಸಲಿಟ್ಟ ಬಗ್ಗೆ ಮಾತನಾಡಿ, ಮೇಕೆದಾಟು ಯೋಜನೆ ಪ್ರಾರಂಭಿಸುವ ಇಚ್ಚಾಶಕ್ತಿ ಇದೆ. ಅದಕ್ಕಾಗಿಯೇ 1 ಸಾವಿರ ಕೊಟಿ ರೂ.ಹಳನ್ನು ತೆಗೆದಿಡಲಾಗಿದೆ.  ಅದೇ ರಿತಿ ಕೆಲಸ ಮಾಡುತ್ತೇವೆ ಎಂದಿದ್ದಾರೆ.

ಇಂದಿನ ಬಜೆಟ್ ಮೇಲಿನ ಸುದ್ದಿಗೋಷ್ಟಿಯಲ್ಲಿ ಸಚಿವರಾದ ಗೋವಿಂದ್ ಕಾರಜೋಳ ಹಾಗೂ ಸಿಸಿ ಪಾಟೀಲ್ ಹಾಜರಾಗಿದ್ದು,
ಉಳಿದಂತೆ ಎಲ್ಲಾ ಸಚಿವರು ಗೈರಾಗಿದ್ದರು.

Sneha Gowda

Recent Posts

ವಕೀಲ ದೇವರಾಜೆಗೌಡ ಮತ್ತೆ 2 ದಿನ ಎಸ್‌ಐಟಿ ಕಸ್ಟಡಿಗೆ

ಜಿಲ್ಲೆಯ 5ನೇ ಸಿವಿಲ್ ಕೋರ್ಟ್‌ನಲ್ಲಿ ಸಂಸದ ಪ್ರಜ್ವಲ್ ರೇವಣ್ಣ ಅಶ್ಲೀಲ ವಿಡಿಯೋ ವೈರಲ್ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆ ನಡೆಸಿದ ನ್ಯಾಯಾಧೀಶರು,…

6 mins ago

ಕೇರಳದಲ್ಲಿ ಭಾರೀ ಮಳೆ : ರೆಡ್ ಅಲರ್ಟ್ ಘೋಷಣೆ

ಮುಂಗಾರು ಪ್ರವೇಶಕ್ಕೆ ಕ್ಷಣಗಣನೆ ಆರಂಭವಾಗಿರುವಂತೆಯೇ ದೇವರನಾಡು ಕೇರಳದಲ್ಲಿ ಭಾರಿ ಮಳೆಯಾಗುತ್ತಿದ್ದು, ಶನಿವಾರ ಭಾರತೀಯ ಹವಾಮಾನ ಇಲಾಖೆ (IMD) ರೆಡ್ ಅಲರ್ಟ್…

22 mins ago

ವಿಧಾನಪರಿಷತ್ ಚುನಾವಣೆ : ನಾಮಪತ್ರ ಅಂಗೀಕಾರ,ತಿರಸ್ಕೃತ ಅಭ್ಯರ್ಥಿಗಳ ಪಟ್ಟಿ ರಿಲೀಸ್

ರಾಜ್ಯ ವಿಧಾನ ಪರಿಷತ್​ಗೆ ನೈಋತ್ಯ, ಈಶಾನ್ಯ, ಬೆಂಗಳೂರು ಪದವೀಧರ ಕ್ಷೇತ್ರಗಳು ಹಾಗೂ ಆಗ್ನೇಯ, ನೈಋತ್ಯ ಶಿಕ್ಷಕರ ಕ್ಷೇತ್ರ, ದಕ್ಷಿಣ ಶಿಕ್ಷಕರ…

44 mins ago

ಟಾಸ್​ ಗೆದ್ದ ಚೆನ್ನೈ ಸೂಪರ್​ ಕಿಂಗ್ಸ್​ : ಫೀಲ್ಡಿಂಗ್​ ಆಯ್ಕೆ

ಪ್ಲೇ ಆಫ್​ ಪ್ರವೇಶಕ್ಕೆ ಮಹತ್ವವಾದ ಶನಿವಾರದ ಐಪಿಎಲ್(IPL 2024)​ ಪಂದ್ಯದಲ್ಲಿ ಆರ್​ಸಿಬಿ ವಿರುದ್ಧ ಹಾಲಿ ಚಾಂಪಿಯನ್ ಚೆನ್ನೈ ಸೂಪರ್​ ಕಿಂಗ್ಸ್​​…

1 hour ago

ಶಿಕ್ಷಕ-ಪದವೀಧರ ಕ್ಷೇತ್ರದ ಅಭ್ಯರ್ಥಿಗಳ ಗೆಲುವು ನಿಶ್ಚಿತ : ಜಾರ್ಜ್

ಕಳೆದ ವಿಧಾನಸಭಾ ಹಾಗೂ ಲೋಕಸಭಾ ಚುನಾವಣೆ ಮಾದರಿಯಂ ತೆ, ವಿಧಾನ ಪರಿಷತ್ ಚುನಾವಣೆಯಲ್ಲೂ ಕಾರ್ಯಕರ್ತರುಗಳು ಅಭ್ಯರ್ಥಿಗಳ ಪರವಾಗಿ ಬೂತ್‌ಮಟ್ಟ ದಿಂದ…

2 hours ago

ಆಸ್ಪತ್ರೆಯಲ್ಲಿ ಶುಶ್ರೂಷಕಿಯರ ಪಾತ್ರ ಮಹತ್ವದ್ದು ಡಾ.ಮೋಹನ್‌ಕುಮಾರ್

ಆಸ್ಪತ್ರೆಯಲ್ಲಿ ಶುಶ್ರೂ?ಕಿಯರ ಪಾತ್ರ ಮಹತ್ವದ್ದು, ದಾದಿಯರು ಯಾ ವಾಗಲೂ ಹಸನ್ಮುಖಿಯರಾಗಿ ರೋಗಿಗಳ ಸೇವೆಯಲ್ಲಿ ತೊಡಗಿಸಿಕೊಳ್ಳಬೇಕು ಎಂದು ಮಲ್ಲೇಗೌಡ ಜಿಲ್ಲಾ ಸ್ಪತ್ರೆ…

3 hours ago