ಈ ಬಾರಿ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಫಿಕ್ಸ್, ಕೊರೋನಾ ಪಾಸ್‌ ಇಲ್ಲ! : ಶಿಕ್ಷಣ ಸಚಿವ ಬಿ.ಸಿ. ನಾಗೇಶ್‌

ಈ ವರ್ಷ ಎಲ್ಲಾ ವಿದ್ಯಾರ್ಥಿಗಳು ಎಸ್‌ ಎಸ್‌ ಎಲ್‌ ಸಿ ಪರೀಕ್ಷೆ ಬರೆದೇ ಪಾಸ್‌ ಆಗಬೇಕು. ಕಳೆದ ವರ್ಷದಂತೆ ಕೊರೋನಾ ಪಾಸ್‌ ಮಾಡುವುದಿಲ್ಲ ಎಂದು ಶಿಕ್ಷಣ ಸಚಿವ ಬಿ.ಸಿ. ನಾಗೇಶ್‌ ಹೇಳಿದ್ದಾರೆ.

2021ರಲ್ಲಿ ಎಲ್ಲಾ ಶಿಕ್ಷಣ ಸಂಸ್ಥೆಗಳು, ವಿದ್ಯಾರ್ಥಿಗಳು ಕೋವಿಡ್‌ ಸಮಸ್ಯೆ ಎದುರಿಸುತ್ತಿದ್ದರು. ಹಾಗಾಗಿ ಕಳೆದ ವರ್ಷ ಕೊರೋನಾ ಪಾಸ್‌ ನೀಡಲಾಯಿತು. ಆದರೆ ಈ ಬಾರಿ ಆ ವ್ಯವಸ್ಥೆ ಇರುವುದಿಲ್ಲ. ಮಕ್ಕಳು ಪರೀಕ್ಷೆ ಬರೆದೇ ಪಾಸ್‌ ಆಗಬೇಕು. ಇಲ್ಲವಾದರೆ ಮಕ್ಕಳು ಓದುವ ಅಭ್ಯಾಸವನ್ನೇ ಮರೆತು ಬಿಡುತ್ತಾರೆ ಎಂದರು.

ಈಗಾಗಲೇ ಮಕ್ಕಳಿಗೆ ಸಹಾಯವಾಗಲೆಂದು ಶೇ.30ರಷ್ಟು ಪಠ್ಯಕ್ರಮ ಕಡಿಮೆ ಮಾಡಲಾಗಿದೆ. ಹಾಗಾಗಿ ಮಾರ್ಚ್‌- ಏಪ್ರಿಲ್‌ ವೇಳೆಗೆ ಎಸ್‌ ಎಸ್‌ ಎಲ್‌ ಸಿ ಪರೀಕ್ಷೆ ನಡೆಯಲಿದೆ. ಎಲ್ಲಾ ಕೋವಿಡ್‌ ನಿಯಮಗಳನ್ನು ಅನುಸರಿಸಿ ಪರೀಕ್ಷೆ ನಡೆಸಲಾಗುತ್ತದೆ ಎಂದರು.

Sneha Gowda

Recent Posts

ಎಷ್ಟು ದಿನ ಮುಸ್ಲಿಮರ ಬಗ್ಗೆ ಭಯ ಹುಟ್ಟಿಸುತ್ತೀರಿ: ಮೋದಿಗೆ ಓವೈಸಿ ಪ್ರಶ್ನೆ

ಮುಸ್ಲಿಮರು ಶೀಘ್ರದಲ್ಲೇ ಬಹುಸಂಖ್ಯಾತರಾಗುತ್ತಾರೆ ಎಂಬ ಭಯವನ್ನು ನರೇಂದ್ರ ಮೋದಿ ಇನ್ನೂ ಹಿಂದೂಗಳಲ್ಲಿ ಹರಡಲು ಪ್ರಯತ್ನಿಸುತ್ತಿದ್ದಾರೆ ಎಂದು ಆಲ್ ಇಂಡಿಯಾಮಜ್ಲಿ ಸ್-ಎ-ಇತ್ತೆಹಾದುಲ್…

16 mins ago

ಛತ್ತೀಸ್‌ಗಢದಲ್ಲಿ ಭೀಕರ ರಸ್ತೆ ಅಪಘಾತ: 9 ಮಂದಿ ದುರ್ಮರಣ, 23 ಮಂದಿಗೆ ಗಾಯ

ಛತ್ತೀಸ್‌ಗಢದ ಬೆಮೆತಾರಾದ ಕಥಿಯಾ ಪೆಟ್ರೋಲ್ ಪಂಪ್ ಬಳಿ ಪಿಕಪ್ ಟ್ರಕ್ ರಸ್ತೆ ಬದಿ ನಿಲ್ಲಿಸಿದ್ದ ಟಾಟಾ 407 ವಾಹನಕ್ಕೆ ಡಿಕ್ಕಿ…

38 mins ago

ಅಪಾರ್ಟ್‌ಮೆಂಟ್‌ನ ಕಿಟಕಿಯಿಂದ ವಿಂಡೋ ಪೋರ್ಚ್‌ ಮೇಲೆ ಬಿದ್ದ ಮಗು: ವಿಡಿಯೋ ವೈರಲ್‌

ತಮಿಳುನಾಡಿನ ಚೆನ್ನೈನ ಅವಡಿಯ ತಿರುಮಲ್ಲೈವೋವಲ್‌ನಲ್ಲಿರುವ  ಅಪಾರ್ಟ್‌ಮೆಂಟ್‌ನ ಕಿಟಕಿಯಿಂದ ಏಳು ತಿಂಗಳ ಮಗುವೊಂದು ವಿಂಡೋ ಪೋರ್ಚ್‌  ಮೇಲೆ ಬಿದ್ದ ಘಟನೆ ನಡೆದಿದೆ. 

55 mins ago

ಸೋನಾಮಾರ್ಗ್‌ನಲ್ಲಿ ಸ್ಕಿಡ್​ ಆಗಿ ನದಿಗೆ ಉರುಳಿದ ಕಾರು: 4 ಜನರ ಸಾವು

ಜಮ್ಮು ಮತ್ತು ಕಾಶ್ಮೀರದ ಸೋನಾಮಾರ್ಗ್‌ನಲ್ಲಿ  ಒಂಭತ್ತು ಜನ ಪ್ರಯಾಣ ಮಾಡುತ್ತಿದ್ದ ಟವೇರಾ ಎಸ್‌ಯುವಿ ಕಾರ್ ನಿಯಂತ್ರಣ ತಪ್ಪಿ  ಸಿಂಧ್ ನದಿಗೆ…

1 hour ago

ಬಸ್​ ಹಾಗೂ ಟ್ರಕ್​ ನಡುವೆ ಭೀಕರ ಅಪಘಾತ: ಆರು ಜನರ ದುರ್ಮರಣ

ಉತ್ತರ ಪ್ರದೇಶದ ಉನ್ನಾವೋ ಜಿಲ್ಲೆಯ ಸಫಿಪುರದಲ್ಲಿ ಬಸ್​ ಹಾಗೂ ಟ್ರಕ್​ ನಡುವೆ ಭೀಕರ ಅಪಘಾತ ಸಂಭವಿಸಿದ ಘಟನೆ  ನಡೆದಿದೆ.

2 hours ago

ಮತ್ತೊಂದು ಲವ್ ಜಿಹಾದ್ ಪ್ರಕರಣ: ಬಾಲಕಿಯನ್ನು ಪುಸಲಾಯಿಸಿ ಕರೆತಂದ ಯುವಕ

ಹುಬ್ಬಳ್ಳಿಯಲ್ಲಿ  ಅನ್ಯಕೋಮಿನ ಯುವಕನೊಬ್ಬ ಅಪ್ರಾಪ್ತ ಬಾಲಕಿಯನ್ನು ಫುಸಲಾಯಿಸಿ ಬಾಗಲಕೋಟೆ ಜಿಲ್ಲೆಯಿಂದ ಹುಬ್ಬಳ್ಳಿಗೆ ಕರೆದುಕೊಂಡ ಬಂದಿದ್ದಾನೆ.

2 hours ago