News Karnataka Kannada
Friday, April 19 2024
Cricket
ಬೆಂಗಳೂರು ನಗರ

ಸ್ವಾಮೀಜಿಗಳ ಬಳಿ ಲಂಚ ಕೇಳುವ ನಾಚಿಕೆಗೇಡಿನ ಸರ್ಕಾರ: ಸಿದ್ದರಾಮಯ್ಯ

ಶೂದ್ರರು ಮತ್ತು ದಲಿತರಿಗೆ ಆರ್.ಎಸ್.ಎಸ್ ಗರ್ಭಗುಡಿಗೆ ಪ್ರವೇಶ ಇಲ್ಲ, ಅವರೇನಿದ್ದರೂ ಹೊರಬಾಗಿಲಲ್ಲಿ ನಿಂತು 'ಜೀ..ಜೀ..ಹುಜೂರ್' ಎಂದಷ್ಟೇ ಹೇಳಬೇಕು. ಇದಕ್ಕೆ ಬಿಜೆಪಿಯ ಮಾಜಿ ಶಾಸಕ ಗೂಳಿಹಟ್ಟಿ ಶೇಖರ್ ಅವರು ಬಿ.ಎಲ್ ಸಂತೋಷ್‌ ಅವರಿಗೆ ಕಳುಹಿಸಿರುವ ವಾಟ್ಸಾಪ್ ವಾಯ್ಸ್ ರೆಕಾರ್ಡ್ ಸಾಕ್ಷಿ.
Photo Credit :

ಬೆಂಗಳೂರು : ಸ್ವಾಮೀಜಿಗಳ ಬಳಿಯೇ ಲಂಚ ಕೇಳುತ್ತಾರೆಂದರೆ ಎಂಥಹ ನಾಚಿಕೆಗೇಡಿನ‌ ಸರ್ಕಾರವಿದು? ಇದು 40% ಸರ್ಕಾರ ಎನ್ನುವುದು ಸಾಬೀತಾಗಿದೆ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಆರೋಪಿಸಿದ್ದಾರೆ.

ಮಠಗಳಿಗೆ ಕೊಟ್ಟ ಅನುದಾನ ಪಡೆಯುವುದಕ್ಕೂ ಕಮಿಷನ್ ಕೊಡಬೇಕು ಎಂದು ಸ್ವಾಮೀಜಿಗಳು ಮಾಡಿರುವ ಆರೋಪ ಹಿನ್ನೆಲೆಯಲ್ಲಿ ಸರಣಿ ಟ್ವೀಟ್ ಮಾಡಿರುವ ಅವರು, ಸ್ವಾಮೀಜಿಗಳ ಬಳಿ ಕಮಿಷನ್ ಕೇಳೋದು ನಾಚಿಕೆಗೇಡಿನತನ.

ಸಿಎಂ ಮನೆ ಮುತ್ತಿಗೆ ಹಾಕಿದ್ದಕ್ಕೆ ಕಾಂಗ್ರೆಸ್ ನಾಯಕರ ಮೇಲೆ ಎಫ್‌ಐಆರ್ ಹಾಕಿದ್ದಾರೆ. ನಾನು ಎ1 ಆದರೂ ಆಗಲಿ, ಎ2 ಆದರೂ ಆಗಲಿ, ನಾವು ಎದುರಿಸುತ್ತೇವೆ ಎಂದು ಹೇಳಿದರು.

ಹುಬ್ಬಳ್ಳಿಯಲ್ಲಿ ಹಿರೇಮಠ ಎನ್ನುವಾತ ಪೋಸ್ಟ್ ಮಾಡಿದ್ದ. ಯಾಕಾಗಿ ಪೋಸ್ಟ್ ಮಾಡಿದ್ದ ಅಂತ ಗೊತ್ತಿಲ್ಲ. ನಾವು ಮಾಡುತ್ತಿರುವ ಹೋರಾಟವನ್ನು ಡೈವರ್ಟ್ ಮಾಡಲು ಮಾಡಿದರೇ ಎಂದು ಗೊತ್ತಿಲ್ಲ. ಆದರೆ ಯಾರೇ ತಪ್ಪು ಮಾಡಿದರೂ ಶಿಕ್ಷೆ ಆಗಬೇಕು. ಪೋಸ್ಟ್ ಮಾಡಿದ ಬಳಿಕ ಗಲಾಟೆಯಾಗಿದೆ. ಯಾರು ಕೂಡ ಕಾನೂನನ್ನು ಕೈಗೆ ತೆಗೆದುಕೊಳ್ಳಬಾರದು. ಅಮಾಯಕರು ಬಿಡುಗಡೆ ಆಗಬೇಕು ಎಂದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12790
NewsKannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು