News Karnataka Kannada
Wednesday, April 24 2024
Cricket
ಬೆಂಗಳೂರು ನಗರ

ಸುಲಿಗೆ ಆರೋಪ ; ಪೀಪಲ್‌ ಟ್ರೀ ಅಸ್ಪತ್ರೆ ವಿರುದ್ದ ಪ್ರತಿಭಟನೆ

Photo Credit :

ಸುಲಿಗೆ ಆರೋಪ ;    ಪೀಪಲ್‌ ಟ್ರೀ ಅಸ್ಪತ್ರೆ ವಿರುದ್ದ ಪ್ರತಿಭಟನೆ

ಬೆಂಗಳೂರು: ಕೊವಿಡ್ ರೋಗಿಗಳ ಚಿಕಿತ್ಸೆಗಾಗಿ ಖಾಸಗಿ ಆಸ್ಪತ್ರೆಗಳು ಶೇಕಡ50ರಷ್ಟು ಹಾಸಿಗೆಗಳನ್ನು ಮೀಸಲಿಡಬೇಕು ಅಂತಾ ಸರ್ಕಾರದ ಆದೇಶವೇ ಇದೆ. ಆದ್ರೆ ರೋಗಿಗಳು ಫುಲ್ ಫಿಲ್ ಅಂತಾ ಲೆಕ್ಕಾ ತೋರಿಸ್ತಿರೋ ಖಾಸಗಿ ಆಸ್ಪತ್ರೆಗಳಲ್ಲಿ ರೋಗಿಗಳಿಗೆ ಎಷ್ಟರಮಟ್ಟಿಗೆ ಚಿಕಿತ್ಸೆ ಸಿಗ್ತಿದೆ ಅನ್ನೋ ಪ್ರಶ್ನೆ ಸದ್ಯದ ಕೆಲ ಘಟನೆಗಳಿಂದ ಉದ್ಭವವಾಗಿದೆ. ಕೊರೊನಾ ಸೋಂಕಿತನಿಗೆ ಐಸಿಯುನಲ್ಲಿ ಸೂಕ್ತ ಆಕ್ಸಿಜನ್ ನೀಡದೆ ಸಾವಿಗೆ ಕಾರಣವಾಗಿರುವುದಲ್ಲದೇ. ಬರೋಬ್ಬರಿ 6 ಲಕ್ಷ ಬಿಲ್ ಪಾವತಿಸದೆ ಶವ ನೀಡುವುದಿಲ್ಲ ಎಂದಿರುವ ಆರೋಪ ಗೊರಗುಂಟೆಪಾಳ್ಯದ ಪೀಪಲ್ ಟ್ರೀ ಆಸ್ಪತ್ರೆ ವಿರುದ್ಧ ಕೇಳಿ ಬಂದಿದ್ದು, ತಡರಾತ್ರಿ ಸ್ಥಳೀಯರು ಸೇರಿದಂತೆ ಸೋಂಕಿತನ ಕುಟುಂಬಸ್ಥರು ಮಾಜಿ ಕಾರ್ಪೋರೇಟರ್ ಜಿ.ಕೆ ವೆಂಕಟೇಶ್ ನೇತೃತ್ವದಲ್ಲಿ ಆಸ್ಪತ್ರೆ ಮುಂದೆ ಪ್ರತಿಭಟನೆ ನಡೆಸಿದ್ರು. ಪ್ರತಿಭಟನಾ ಸ್ಥಳಕ್ಕೆ ಶಾಸಕ ಮುನಿರತ್ನ ಆಗಮಿಸಬೇಕು ಹಾಗೂ ಆಸ್ಪತ್ರೆ ಪರವಾನಗಿ ರದ್ದಾಗಬೇಕು ಅಂತಾ ಪ್ರತಿಭಟನಾಕಾರರು ಆಗ್ರಹಿಸಿದ್ರು. ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಆಗಮಿಸಿದ ಶಾಸಕ ಮುನಿರತ್ನ ಸಹ ಈ ಆಸ್ಪತ್ರೆ ವಿರುದ್ಧ ಆರೋಪ ಇದೇ ಮೊದಲೇನಲ್ಲ, ಇಡೀ ಕಟ್ಟಡವೇ ಕಾನೂನಾತ್ಮಕವಾಗಿಲ್ಲ, ಅಗ್ನಿ ಅವಘಡವಾದರೆ ತುರ್ತು ಸ್ಪಂದನೆಗೆ ಸಹ ಸುರಕ್ಷತಾ ಕ್ರಮಗಳನ್ನ ಅನುಸರಿಸದ ಇದೊಂದು ಸಾವಿನ ಮನೆ ಅಂತಾ ಹರಿಹಾಯ್ದರು. ಆಸ್ಪತ್ರೆಗ ಬಳಿಗೆ ಶಾಸಕರು ಬಂದು ಮಾತುಕತೆಗೆ ಆಹ್ವಾನಿಸಿದ್ರೂ ಆಸ್ಪತ್ರೆ ಪರವಾಗಿ ಯಾರೊಬ್ಬರೂ ಸಹ ಮಾತನಾಡಲು ಮುಂದೆ ಬರಲಿಲ್ಲ.   ಖಾಸಗಿ ಆಸ್ಪತ್ರೆಗಳ ಅಂಧಾದರ್ಬಾರ್‌ಗೆ ಹಿಡಿದ ಕೈನ್ನಡಿಯಂತೆ ಕಂಡು ಬಂದ ಪೀಪಲ್ ಟ್ರೀ ಆಸ್ಪತ್ರೆ ವಿರುದ್ಧ ಕ್ರಮಕ್ಕೆ ಮನವಿ ಮಾಡುವುದಾಗಿ ಶಾಸಕರು ಭರವಸೆ ನೀಡಿದ್ದಾರೆ. ಇನ್ನಾದರೂ ಕೊವಿಡ್ ರೋಗಿಗಳಿಗೆ ಸೂಕ್ತ ಚಿಕಿತ್ಸೆ ದೊರೆಯುವ ಮೂಲಕ ಪೀಪಲ್ ಟ್ರೀ ಆಸ್ಪತ್ರೆ ಪೀಪಲ್ ಫ್ರೆಂಡ್ಲಿ ಆಗಬೇಕಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
145

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು