News Karnataka Kannada
Friday, April 19 2024
Cricket
ಬೆಂಗಳೂರು ನಗರ

ಸಿದ್ದರಾಮಯ್ಯ ಸ್ಥಿತಿ ಸ್ಥಿರವಾಗಿದೆ: ಮಣಿಪಾಲ ಆಸ್ಪತ್ರೆ ಮಾಹಿತಿ

Photo Credit :

ಸಿದ್ದರಾಮಯ್ಯ ಸ್ಥಿತಿ ಸ್ಥಿರವಾಗಿದೆ: ಮಣಿಪಾಲ ಆಸ್ಪತ್ರೆ ಮಾಹಿತಿ

ಬೆಂಗಳೂರು: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸ್ಥಿತಿ ಸ್ಥಿರವಾಗಿದೆ ಮತ್ತು ಅವರಿಗೆ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಮಣಿಪಾಲ ಆಸ್ಪತ್ರೆಯ ಕಾರ್ಯಾಧ್ಯಕ್ಷ ಎಚ್. ಸುದರ್ಶನ್ ಬಳ್ಳಾಲ್ ಅವರು ತಿಳಿಸಿದರು.

ಜ್ವರದ ಕಾರಣದಿಂದಾಗಿ ಅವರನ್ನು ಮಣಿಪಾಲ ಆಸ್ಪತ್ರೆಗೆ ದಾಖಲಿಸಲಾಗಿತ್ತು ಮತ್ತು ಕೋವಿಡ್-19 ಪರೀಕ್ಷೆಯಲ್ಲಿ ಪಾಸಿಟಿವ್ ಆಗಿದೆ. ಅವರ ಸ್ಥಿತಿ ಸ್ಥಿರವಾಗಿದೆ. ವೈದ್ಯಕೀಯ ತಂಡವೊಂದು ಅವರ ಚಿಕಿತ್ಸೆಯಲ್ಲಿ ತೊಡಗಿದೆ ಎಂದು ಬಳ್ಳಾಲ್ ಮಾಹಿತಿ ನೀಡಿದರು.

ಸಿದ್ದರಾಮಯ್ಯ ಅವರಿಗೆ ಯಾರ ಸಂಪರ್ಕದಿಂದಾಗಿ ಕೊರೋನಾ ಬಂದಿದೆ ಎಂದು ತಿಳಿಯಲು ಆರೋಗ್ಯ ಇಲಾಖೆಯು ಪ್ರಯತ್ನಿಸುತ್ತಿದೆ. ಶನಿವಾರ ಅವರು ತನ್ನ ಊರಿಗೆ ತೆರಳಿದ್ದರು ಮತ್ತು ಅವರ ಸಂಪೂರ್ಣ ಕುಟುಂಬವು ಸಂಪರ್ಕಕ್ಕೆ ಬಂದಿತ್ತು. ಸಿದ್ದರಾಮಯ್ಯ ಅವರ ಸಂಪರ್ಕಕ್ಕೆ ಬಂದಿದ್ದ ನಾಯಕರು ಕೂಡ ಹೋಮ್ ಕ್ವಾರಂಟೈನ್ ಗೆ ಒಳಗಾಗಲಿದ್ದಾರೆ.

 

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
187

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು