News Karnataka Kannada
Monday, April 15 2024
Cricket
ಬೆಂಗಳೂರು ನಗರ

ಸಿಡಿ ಪ್ರಕರಣದಲ್ಲಿ ಕ್ಲೀನ್ ಚಿಟ್ ತೆಗೆದುಕೊಂಡ ನಂತರವೂ ಜಾರಕಿಹೊಳಿಗೆ ತಪ್ಪಲಿಲ್ಲ ನಿರಾಸೆ

Photo Credit :

ಸಿಡಿ ಪ್ರಕರಣದಲ್ಲಿ ಕ್ಲೀನ್ ಚಿಟ್ ತೆಗೆದುಕೊಂಡ ನಂತರವೂ ಜಾರಕಿಹೊಳಿಗೆ ತಪ್ಪಲಿಲ್ಲ ನಿರಾಸೆ

ಬೆಂಗಳೂರು : ರಾಜ್ಯ ರಾಜಕಾರಣದಲ್ಲಿ ಗೊಂದಲವನ್ನು ಸೃಷ್ಟಿಸಿದ ಹಾಗೂ ಅನೇಕ ವಿವಾದಕ್ಕೆ ಕಾರಣವಾಗಿದ್ದ ಸಿಡಿ ಪ್ರಕರಣದಲ್ಲಿ ಕ್ಲೀನ್ ಚಿಟ್ ​ತೆಗೆದುಕೊಂಡ ನಂತರವೂ ಮಾಜಿ ಸಚಿವ ರಮೇಶ್ ಜಾರಕಿಹೊಳಿಗೆ ನಿರಾಸೆ ತಪ್ಪಲಿಲ್ಲ.  

 

ಸದ್ಯ ನಡೆಯುತ್ತಿರುವ ಸಂಪುಟ ಪುನರ್ ​ ರಚನೆ ಪ್ರಕ್ರಿಯೆಯಲ್ಲಿ ಮತ್ತೆ ಮಂತ್ರಿಯಾಗುವ ಆಸೆ ರಮೇಶ್ ಜಾರಕಿಹೊಳಿ ಇಟ್ಟುಕೊಂಡಿದ್ದರು ಎನ್ನಲಾಗಿತ್ತು . ಆದ್ರೆ ಪ್ರಕರಣದಲ್ಲಿ ಬಿ ರಿಪೋರ್ಟ್ ಪ್ರಕ್ರಿಯೆಯನ್ನ ಎಸ್ ‌ ಐಟಿ ಮುಂದೂಡಿಕೆ ಮಾಡಿದೆ .

 

ಪ್ರಕರಣದ ಪ್ರಗತಿ ವರದಿಯನ್ನ ಹೈಕೋರ್ಟ್ ​​ ಗೆ ನೀಡಲಾಗಿದ್ದು ಮುಂದಿನ 17 ನೇ ತಾರೀಕು ಮತ್ತೊಂದು ಸ್ಟೇಟಸ್ ರಿಪೋರ್ಟ್ ನೀಡಬೇಕಿದೆ . ಹೈಕೋರ್ಟ್ ಪ್ರಶ್ನೆ ಮಾಡಿದ್ರೆ ಮತ್ತಷ್ಟು ಸಾಕ್ಷಿಗಳ ಸ್ಟೇಟಸ್ ರಿಪೋರ್ಟ್ ನೀಡಲಿದೆಯಂತೆ . ಆರೋಪಿಗಳ ಹಿಂದಿನ ಕೆಲ ಕೃತ್ಯಗಳ ಸಾಕ್ಷಿಗಳು ಲಭ್ಯವಾಗಿದ್ದು ಅವುಗಳನ್ನೂ ಸೇರಿಸಿ ಸಂಪೂರ್ಣ ವರದಿ ನೀಡಲು ಎಸ್ ​ ಐಟಿ ಸಂಪೂರ್ಣ ವರದಿ ನೀಡಲು ಸಿದ್ಧತೆ ನಡೆಸಿದೆ ಎನ್ನಲಾಗಿದೆ .

 

ಈ ಕಾರಣದಿಂದ ಜಾರಕಿಹೊಳಿ ಮತ್ತೆ ಮಂತ್ರಿಯಾಗುವ ಆಸೆಗೆ ಕಡಿವಾಣ ಬೀಳುವ ಸಾಧ್ಯತೆ ಇದೆ ಎಂದು ವರದಿಗಳು ತಿಳಿಸಿವೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
205

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು