News Karnataka Kannada
Saturday, April 13 2024
Cricket
ಬೆಂಗಳೂರು ನಗರ

ಸರ್ಕಾರದ ಬಳಿ ಒಂದು ಸಾವಿರ ಅನಾಥ ಮೃತರ ಅಸ್ಥಿ ಇದೆ: ಅರ್ ಅಶೋಕ್

Photo Credit :

ಸರ್ಕಾರದ ಬಳಿ ಒಂದು ಸಾವಿರ ಅನಾಥ ಮೃತರ ಅಸ್ಥಿ ಇದೆ: ಅರ್ ಅಶೋಕ್

ಬೆಂಗಳೂರು: ಕೊರೋನಾ ವೈರಸ್ ಸೋಂಕಿನಿಂದ ಮೃತಪಟ್ಟ ಸುಮಾರು 1 ಸಾವಿರ ಅನಾಥ ಶವಗಳ ಅಸ್ಥಿ ಸರಕಾರದ ಬಳಿ ಇದೆ ಎಂದು ಕಂದಾಯ ಸಚಿವ ಆರ್.ಅಶೋಕ್ ತಿಳಿಸಿದ್ದಾರೆ.

ಬೆಂಗಳೂರಿನಲ್ಲಿ ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅಸಹಾಯಕ ಜನರ ಅಸ್ಥಿ ಸರ್ಕಾರದ ಬಳಿ ಇದೆ. ಅನಿವಾರ್ಯ ಅಥವಾ ಕಷ್ಟದಿಂದಲೋ ಕುಟುಂಬದವರು ಸಂಗ್ರಹಿಸದ ಅಸ್ಥಿ ಸರಕಾರದ ಬಳಿ ಇದೆ ಎಂದು ಸ್ಪಷ್ಟಪಡಿಸಿದರು.

ಮೃತರ ಸಂಬಂಧಿಕರು ಮೊಬೈಲ್ ಸ್ವಿಚ್ ಆಫ್ ಇದೆ. ನಾವು ಅಸ್ಥಿ ತೆಗೆದುಕೊಳ್ಳಲು ಮನವಿ ಮಾಡುತ್ತಿದ್ದೇವೆ. ಆದರೆ ಅವರವರ ಕಷ್ಟದಿಂದ ಅಸ್ಥಿ ಪಡೆಯುತ್ತಿಲ್ಲ. ಅಂತಹ ಅಸ್ಥಿಗಳನ್ನು ಸರ್ಕಾರವೇ ಸಂಸ್ಕಾರ ಮಾಡಲು ತೀರ್ಮಾನಿಸಿದೆ ಎಂದು ಅಶೋಕ್ ಹೇಳಿದರು.

ಬಡವ ಬಲ್ಲಿದ ಎಂದು ಭೇದ ಭಾವ ಮಾಡದೇ ಅಸ್ಥಿಗಳನ್ನು ಪಂಚಭೂತಗಳಲ್ಲಿ ಲೀನವಾಗುವಂತೆ ವ್ಯವಸ್ಥೆ. ಸಂಪ್ರದಾಯ ಬದ್ಧವಾಗಿ ಕಂದಾಯ ಇಲಾಖೆ ವತಿಯಿಂದ ಗೌರವಯುತವಾಗಿ ಸಂಸ್ಕಾರ ಮಾಡಲಿದ್ದೇವೆ ಎಂದು ತಿಳಿಸಿದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
205

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು