News Karnataka Kannada
Sunday, April 21 2024
Cricket
ಬೆಂಗಳೂರು ನಗರ

ವಿಧಾನ ಸೌಧದಲ್ಲಿ 110 ಜನರಿಗೆ ಕೋವಿಡ್ ಪಾಸಿಟಿವ್

Photo Credit :

ವಿಧಾನ ಸೌಧದಲ್ಲಿ 110 ಜನರಿಗೆ ಕೋವಿಡ್ ಪಾಸಿಟಿವ್

ಬೆಂಗಳೂರು: ಕಳೆದ ಎರಡು ದಿನಗಳಿಂದ ವಿಧಾನ ಸೌಧದಲ್ಲಿ ನಡೆಸಿದ 2,145 ಪರೀಕ್ಷೆಗಳಲ್ಲಿ 110 ಜನರಿಗೆ ಕೋವಿಡ್ ಪಾಸಿಟಿವ್ ಬಂದಿದ್ದು, ಇದರಲ್ಲಿ ಪತ್ರಕರ್ತರು, ಅಧಿಕಾರಿಗಳು ಮತ್ತು ಜನರ ಪ್ರತಿನಿಧಿಗಳು ಸೇರಿದ್ದಾರೆ.

ಉಪಮುಖ್ಯಮಂತ್ರಿ ಗೋವಿಂದ ಎಂ. ಕಾರಜೋಳ ಕೂಡ ಈಗ ಕೋವಿಡ್ 19 ಸೋಂಕಿಗೆ ಗುರಿಯಾಗಿದ್ದಾರೆ.

ರಾಜ್ಯದ ವಿಧಾನಸಭೆಯಲ್ಲಿ ನಡೆಯುತ್ತಿರುವ ಅಧಿವೇಶನದಲ್ಲಿ ಭಾಗವಹಿಸುವ ಎಲ್ಲರ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಬೇಕಾದ ಅವಶ್ಯಕತೆ ಇದೆ. ಹಾಗಾಗಿ ವಿಧಾನ ಸೌಧದಲ್ಲಿ ಕೋವಿಡ್ 19 ಪರೀಕ್ಷೆಯನ್ನು ಕಡ್ಡಾಯಗೊಳಿಸಲಾಗಿತ್ತು.

ಅಧಿಕಾರಿಗಳ ಪ್ರಕಾರ 110 ಪಾಸಿಟಿವ್ ಬಂದಿರುವ ಹೆಚ್ಚಿನ ಜನರಲ್ಲಿ ಯಾವುದೇ ಕರೋನ ಲಕ್ಷಣಗಳು ಕಾಣಿಸಿಕೊಂಡಿಲ್ಲ.  ಪಾಸಿಟಿವ್ ಪ್ರಮಾಣ 5.2% ಇರಬಹುದು ಎಂಬುದು ಸ್ಪೀಕರ್ ವಿಶ್ವೇಶರ ಹೆಗಡೆ ಕಾಗೇರಿ ಅವರ ಅಭಿಪ್ರಾಯ.

 “ಅನೇಕರು ಲಕ್ಷಣರಹಿತರಾಗಿರುವುದರಿಂದ, ಪ್ರತಿಯೊಬ್ಬರೂ ತಮ್ಮ ಕೋವಿಡ್ 19 ಸ್ಥಿತಿಯ ಬಗ್ಗೆ ಕೋವಿಡ್ 19 ಪರೀಕ್ಷೆಯ ಸಮಯದಲ್ಲಿ ಮಾತ್ರ ತಿಳಿದುಕೊಳ್ಳುತ್ತಿದ್ದಾರೆ” ಎಂದು ಅಧಿಕಾರಿಗಳು ವಿವರಿಸುತ್ತಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು