News Karnataka Kannada
Saturday, April 20 2024
Cricket
ಬೆಂಗಳೂರು ನಗರ

ವಿಕ್ರಂ ಹಾಸ್ಪಿಟಲ್ ನ ಶೇ .100 ಷೇರುಗಳನ್ನು ತನ್ನದಾಗಿಸಿಕೊಂಡ ಮಣಿಪಾಲ್ ಆಸ್ಪತ್ರೆ

Photo Credit :

ವಿಕ್ರಂ ಹಾಸ್ಪಿಟಲ್ ನ ಶೇ .100 ಷೇರುಗಳನ್ನು ತನ್ನದಾಗಿಸಿಕೊಂಡ ಮಣಿಪಾಲ್ ಆಸ್ಪತ್ರೆ

ಬೆಂಗಳೂರು : ಷೇರು ಮಾರುಕಟ್ಟೆಯಲ್ಲಿ ಅನೇಕ ವ್ಯತ್ಯಾಸಗಳು ಉಂಟಾಗುತ್ತಿದ್ದು, ಯಾವ ಕ್ಷಣದಲ್ಲಿ ಏನಾಗುತ್ತದೆ ಎಂದು ಹೇಳಲಾಗದ ಸಂದರ್ಭದಲ್ಲಿ ಬೆಂಗಳೂರು ನಗರದ ಪ್ರತಿಷ್ಠಿತ ವಿಕ್ರಂ ಹಾಸ್ಪಿಟಲ್ ನ ಶೇ .100 ಷೇರುಗಳನ್ನು ಮಣಿಪಾಲ್ ಆಸ್ಪತ್ರೆಯೂ ಖರೀದಿಸಿದೆ . 

 

ಮಣಿಪಾಲ್ ಹಾಸ್ಪಿಟಲ್ಸ್ ವಿಕ್ರಮ್ ಆಸ್ಪತ್ರೆಯನ್ನು 350 ಕೋಟಿ ರೂ.ಗಳಿಗೆ ಖರೀದಿಸಿದೆ ಎಂದು ಮೂಲಗಳು ತಿಳಿಸಿವೆ . ಈಗಾಗಲೇ ಕೊಲಂಬಿಯಾ ಏಷ್ಯಾ ಆಸ್ಪತ್ರೆಗಳನ್ನು ಖರೀದಿಸಿರುವ ಮಣಿಪಾಲ್ ಆಸ್ಪತ್ರೆ ಈಗ ವಿಕ್ರಂ ಹಾಸ್ಪಿಟಲ್ ನ್ನು ತನ್ನ ತೆಕ್ಕೆಗೆ ತೆಗೆದುಕೊಂಡಿದೆ . ಮಣಿಪಾಲ್ ಹಾಸ್ಪಿಟಲ್ಸ್ ಕೊಲಂಬಿಯಾ ಏಷ್ಯಾ ಆಸ್ಪತ್ರೆಗಳನ್ನು ಕಳೆದ ಏಪ್ರಿಲ್‌ನಲ್ಲಿ 2,100 ಕೋಟಿ ರೂ.ಗಳಿಗೆ ಖರೀದಿಸಿತ್ತು . ಅಪೊಲೋ ಆಸ್ಪತ್ರೆಗಳ ನಂತರ ಮಣಿಪಾಲ್ ಹಾಸ್ಪಿಟಲ್ಸ್ ದೇಶದ ಎರಡನೇ ಅತಿದೊಡ್ಡ ಆಸ್ಪತ್ರೆ ಸಮುದಾಯದ ಪಟ್ಟಿಗೆ ಸೇರಿದೆ. ಅಂತೆಯೇ ತನ್ನ ವಿಸ್ತಾರವನ್ನು ಹೆಚ್ಚಿಸಿಕೊಳ್ಳುತ್ತದೆ ಇರುವ ಮಣಿಪಾಲ್ ಆಸ್ಪತ್ರೆಯ ತೆಕ್ಕೆಗೆ ಇದೀಗ ಮತ್ತೊಂದು ಆಸ್ಪತ್ರೆ ಸೇರ್ಪಡೆಯಾದಂತಾಗಿದೆ. 

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
205

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು