News Karnataka Kannada
Monday, April 15 2024
Cricket
ಬೆಂಗಳೂರು ನಗರ

ವಿಕ್ಟೋರಿಯಾ ಕ್ಯಾಂಪಸ್​​​ನಲ್ಲಿ ಮೇಕ್​ಶಿಫ್ಟ್​ ಆಸ್ಪತ್ರೆ ನಿರ್ಮಿಸಲು ನಿರ್ಧಾರ; ಆರೋಗ್ಯ ಸಚಿವ ಸುಧಾಕರ್

Photo Credit :

ವಿಕ್ಟೋರಿಯಾ ಕ್ಯಾಂಪಸ್​​​ನಲ್ಲಿ ಮೇಕ್​ಶಿಫ್ಟ್​ ಆಸ್ಪತ್ರೆ ನಿರ್ಮಿಸಲು ನಿರ್ಧಾರ; ಆರೋಗ್ಯ ಸಚಿವ ಸುಧಾಕರ್

ಬೆಂಗಳೂರು : ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಇಂದು​ ವಿಕ್ಟೋರಿಯಾ ಆಸ್ಪತ್ರೆಗೆ ಭೇಟಿ ನೀಡಿದ್ದಾರೆ. ಮಾಡುಲರ್ ಐಸಿಯು ವ್ಯವಸ್ಥೆ ಮಾಡುವ ಹಿನ್ನೆಲೆ ಭೇಟಿ ನೀಡಿದ್ದಾರೆ. ಖಾಲಿ‌ ಜಾಗಗಳಲ್ಲಿ ಟೆಂಟ್ ಹಾಕಿ ಐಸಿಯು ವ್ಯವಸ್ಥೆ ಮಾಡುವ ಉದ್ದೇಶವನ್ನು ಹೊಂದಲಾಗಿದೆ. ನಾಳೆ ಈ ಕುರಿತಾಗಿ ಸಚಿವ ಸುಧಾಕರ್ ಸಭೆಯಲ್ಲಿ ಚರ್ಚಿಸಲಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಸುಧಾಕರ್, ಮೇಕ್ ಶಿಫ್ಟ್ ಆಸ್ಪತ್ರೆ ನಿರ್ಮಿಸ್ತಿದ್ದೇವೆ. ಐಸಿಯು, ವೆಂಟಿಲೇಟರ್ ಕೊರತೆ ನೀಗಸಲು ತಾತ್ಕಾಲಿಕ ಆಸ್ಪತ್ರೆ ನಿರ್ಮಾಣ ಮಾಡುತ್ತಿದ್ದೇವೆ. ಖಾಸಗಿ ಆಸ್ಪತ್ರೆಯಲ್ಲಿ 75 % ಬೆಡ್ ಕೊಟ್ಟಿದ್ದಾರೆ. ಬೆಂಗಳೂರಿನಲ್ಲಿ 2500 ಐಸಿಯು, ವೆಂಟಿಲೇಟರ್ ಘಟಕ ನಿರ್ಮಿಸಲು ಪ್ಲಾನ್ ಮಾಡಲಾಗಿದೆ. ಒಂದೊಂದು ಯುನಿಟ್ 200 ರಿಂದ 250 ಹಾಸಿಗೆ ಹೊಂದಿರುತ್ತೆ ಎಂದು ಮಾಹಿತಿ ನೀಡಿದರು.
ತೃತೀಯ ಹಂತದ ಆಸ್ಪತ್ರೆ ಆವರಣದಲ್ಲಿ ಅಭಿವೃದ್ಧಿ ಮಾಡಲು ಉದ್ದೇಶಿಸಲಾಗಿದೆ. 15 ದಿನದ ಒಳಗೆ ನಿರ್ಮಾಣ ಆಗಲಿದೆ. ಜಿಲ್ಲಾ ಕೇಂದ್ರದಲ್ಲೂ ಮಾಡಲು ತೀರ್ಮಾನ ಮಾಡಿದ್ದೇವೆ. ಮೈಲ್ಡ್ ಕೇಸಸ್ ಗಳಿಗೆ ಆಕ್ಸಿಜನ್ ವ್ಯವಸ್ಥೆ ಮಾಡಲಿದ್ದೇವೆ. ಬೆಂಗಳೂರಿನಲ್ಲಿ ಐದು ಸಾವಿರ, ಪ್ರತಿ ಜಿಲ್ಲೆಗೆ ಒಂದು ಸಾವಿರ ಪೋರ್ಟೆಬಲ್ ಆಕ್ಸಿಜನ್ ಎಕ್ಯುಪ್ಮೆಂಟ್ ಆಮದು ಮಾಡಿಕೊಳ್ಳುತ್ತಿದ್ದೇವೆ. ಬೇರೆ ಬೇರೆ ದೇಶದಿಂದ ಆಮದು ಮಾಡಿಕೊಳ್ತಿದ್ದೀವಿ ಎಂದರು.
ನಿನ್ನೆ ಸಿಎಂ ಜೊತೆ ಸಭೆ ಆಗಿದೆ. ಗೃಹ ಸಚಿವರು, ಕಂದಾಯ ಸಚಿವರು, ಕೇಂದ್ರ ಸಚಿವರಾದ ಸದಾನಂದ ಗೌಡ, ಪ್ರಹ್ಲಾದ ಜೊತೆ ನಾನು ಸೇರಿದಂತೆ ಸಭೆಯಲ್ಲಿ ಭಾಗಿಯಾಗಿದ್ದೇವೆ. ರಾಜ್ಯ ಸದ್ಯ 300 ಟನ್ ಆಕ್ಸಿಜನ್ ಸಾಮರ್ಥ್ಯ ಹೊಂದಿದೆ. ನಿನ್ನೆ ಕೇಂದ್ರದಿಂದ 800 ಟನ್ ಆಕ್ಸಿಜನ್ ಕರ್ನಾಟಕಕ್ಕೆ ರವಾನೆ ಆಗಿದೆ. ರೆಮಿಡಿಸಿವರ್ 1.22 ಲಕ್ಷ ವಯಲ್ಸ್ ಕೇಂದ್ರದಿಂದ ನೀಡಲಾಗಿದೆ. ಇನ್ನು ಮುಂದೆ ರಾಜ್ಯದಲ್ಲಿ ಆಕ್ಸಿಜನ್, ರೆಮಿಡಿಸಿವರ್ ಕೊರತೆ ಆಗೋದಿಲ್ಲ.
ಮುಂದಿನ ತಿಂಗಳು ಮತ್ತಷ್ಟು ಆಕ್ಸಿಜನ್, ರೆಮಿಡಿಸಿವರ್ ವ್ಯವಸ್ಥೆ ಮಾಡಲಾಗುತ್ತೆ ಎಂದು ಹೇಳಿದರು.
ವಿಕ್ಟೋರಿಯಾ ಕ್ಯಾಂಪಸ್‌ನಲ್ಲಿ ಮೇಕ್ ಶಿಫ್ಟ್ ಆಸ್ಪತ್ರೆ ನಿರ್ಮಿಸಲು ಚಿಂತಿಸಲಾಗಿದೆ. ವೆಂಟಿಲೇಟರ್ ಕೊರತೆ ಕಾಣುತ್ತಿದೆ. ನಿನ್ನೆಯ ಸಭೆಯಲ್ಲಿ ಈ ಬಗ್ಗೆ ಚರ್ಚೆ ನಡೆದಿದೆ. ಖಾಸಗಿ ಆಸ್ಪತ್ರೆಗಳಲ್ಲಿ 75 % ಕೋವಿಡ್ ಬೆಡ್ ತೆಗೆದುಕೊಳ್ಳುವ ನಿರ್ಧಾರ ಆಗಿದೆ. 2000- 2,500 ಐಸಿಯು ಹಾಸಿಗೆ, ವೆಂಟಿಲೇಟರ್ ಘಟಕಗಳನ್ನು ‌ಮಾಡಬೇಕು ಎನ್ನುವ ನಿರ್ಧಾರ ಆಗಿದೆ.ಎಲ್ಲಾ ವೈದ್ಯಕೀಯ ಕಾಲೇಜು, ತೃತೀಯ ಚಿಕಿತ್ಸೆ ಹಂತದ ಆಸ್ಪತ್ರೆಗಳಲ್ಲಿ ಮೇಕ್ ಶಿಫ್ಟ್ ಹಾಸ್ಪಿಟಲ್ ಮಾಡಲು‌ ನಿರ್ಧಾರ ಮಾಡಲಾಗಿದೆ ಎಂದರು.
ಎಲ್ಲಾ ಕಡೆ 100 ರಿಂದ 150 ಬೆಡ್​ನ ಮೇಕ್ ಶಿಫ್ಟ್ ಆಸ್ಪತ್ರೆ ಮಾಡಲಾಗುತ್ತದೆ. ಬೀದರ್, ಶಿವಮೊಗ್ಗ, ಮೈಸೂರು, ತುಮಕೂರು ಸೇರಿ ಹಲವು ಜಿಲ್ಲೆಗಳಲ್ಲಿ ಮಾಡ್ಯೂಲರ್ ಐಸಿಯು ತೆರೆಯಲು ಸಿಎಂ‌ ಸೂಚಿಸಿದ್ದಾರೆ. ಮೈಲ್ಡ್ ಕೇಸ್ ನವರಿಗೆ ಪೋರ್ಟೆಬಲ್ ಆಕ್ಸಿಜನ್ ಸಿಗುವ ವ್ಯವಸ್ಥೆ ಮಾಡಲಾಗುತ್ತದೆ. ಪ್ರತಿ ಜಿಲ್ಲೆಗೆ 1 ಸಾವಿರ, ನಗರ ವ್ಯಾಪ್ತಿಯಲ್ಲಿ 5 ಸಾವಿರ ಪೋರ್ಟೆಬಲ್ ವೆಂಟಿಲೇಟರ್ ವ್ಯವಸ್ಥೆ ಮಾಡಲಾಗುವುದು. ಇಸ್ರೇಲ್ ನಿಂದ ಪೋರ್ಟೆಬಲ್ ಆಕ್ಸಿಜನ್ ಉಪಕರಣಗಳನ್ನು ತರಿಸಲಾಗುತ್ತದೆ ಎಂದು ಮಾಹಿತಿ ನೀಡಿದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
145

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು