News Karnataka Kannada
Saturday, April 13 2024
Cricket
ಬೆಂಗಳೂರು ನಗರ

ಲಕ್ಷಣ ರಹಿತ ಕೊರೊನಾ ಸೋಂಕಿತರು ಆಯುಷ್ 64 ಬಳಸಬಹುದು

Photo Credit :

ಲಕ್ಷಣ ರಹಿತ ಕೊರೊನಾ ಸೋಂಕಿತರು ಆಯುಷ್ 64 ಬಳಸಬಹುದು

ನವದೆಹಲಿ, :ಸೌಮ್ಯ ಪ್ರಮಾಣದ ಲಕ್ಷಣ ಹೊಂದಿರುವವರು ಅಥವಾ, ಲಕ್ಷಣ ರಹಿತ ಕೊರೊನಾ ಸೋಂಕಿತರು ಆಯುಷ್ 64 ಔಷಧ ಬಳಸಬಹುದು ಎಂದು ಆಯುಷ್ ಇಲಾಖೆ ಹೇಳಿದೆ.ಆಯುಷ್-64 ಗುಣಮಟ್ಟದ ಆರೈಕೆಗೆ ಸಂಬಂಧಿಸಿದ್ದು, ಮಹತ್ವದ ಸುಧಾರಣೆ ಹಾಗೂ ಆಸ್ಪತ್ರೆಗೆ ದಾಖಲಾಗುವ ಅವಧಿ ಕಡಿಮೆಯಾಗುವುದು ಕಂಡುಬಂದಿದೆ ಎಂದು ಆಯುಷ್ ಸಚಿವಾಲಯ-ಸಿಎಸ್ ಐಆರ್ ಸಹಭಾಗಿತ್ವದ ಗೌರವಾನಿತ್ವ ಮುಖ್ಯ ಕ್ಲಿನಿಕಲ್ ಸಂಯೋಜಕ ಚೋಪ್ರಾ ತಿಳಿಸಿದ್ದಾರೆ.
ಆಯುಷ್-64 ಔಷಧ, ಆತಂಕ, ಒತ್ತಡ, ಆಯಾಸ, ಹಸಿವು, ನಿದ್ರೆ ಮತ್ತಿರ ಸಾಮಾನ್ಯ ಆರೋಗ್ಯದ ಮೇಲೂ ಅನೇಕ ರೀತಿಯ ತೀವ್ರಗತಿಯ ಪ್ರಯೋಜನಕಾರಿ ಪರಿಣಾಮ ಬೀರಲಿದೆ ಎಂದು ಅವರು ಹೇಳಿದ್ದಾರೆ. ಸೌಮ್ಯ,ಸಾಧಾರಣ ಸ್ವರೂಪದ ಕೋವಿಡ್-19 ಪ್ರಕರಣಗಳ ನಿರ್ವಹಣೆಯಲ್ಲಿ ಆಯುಷ್ -64 ಔಷಧವನ್ನು ಸೇರಿಸುವಂತೆ ರಾಜ್ಯಗಳ ನಿಯಂತ್ರಕರು, ಪ್ರಾಧಿಕಾರಿಗಳಿಗೆ ತಿಳಿಸುವಂತೆ ಆಯುಷ್- ಸಿಎಸ್ ಐಆರ್ ಜಂಟಿ ನಿರ್ವಹಣಾ ಸಮಿತಿ, ಸಚಿವಾಲಯಕ್ಕೆ ಶಿಫಾರಸು ಮಾಡಿದೆ.1980ರಲ್ಲಿ ಮಲೇರಿಯಾ ನಿಯಂತ್ರಣಕ್ಕಾಗಿ ಅಭಿವೃದ್ಧಿಪಡಿಸಿದ್ದ ಆಯುಷ್-64 ಔಷಧವನ್ನು ಲಕ್ಷಣ ರಹಿತ, ಸೌಮ್ಯ ಹಾಗೂ ಸಾಧಾರಣ ಕೋವಿಡ್-19 ಸೋಂಕಿನ ಪ್ರಕರಣಗಳಲ್ಲಿ ಚಿಕಿತ್ಸೆಗಾಗಿ ಬಳಸಬಹುದೆಂದು ಆಯುಷ್ ಸಚಿವಾಲಯ ಗುರುವಾರ ಹೇಳಿದೆ.
ಆಯುಷ್-64 ಅಧ್ಯಯನದಿಂದ ಬರುವ ಫಲಿತಾಂಶವನ್ನು ಸಮಿತಿ ಎಚ್ಚರಿಕೆಯಿಂದ ಪರಿಶೀಲಿಸಿದ್ದು, ಲಕ್ಷಣ ರಹಿತ, ಸೌಮ್ಯ ಹಾಗೂ ಸಾಧಾರಣ ಕೋವಿಡ್-19 ಪ್ರಕರಣಗಳಲ್ಲಿ ಈ ಔಷಧವನ್ನು ಬಳಸಬಹುದೆಂದು ಶಿಫಾರಸು ಮಾಡಲಾಗಿದೆ ಎಂದು ಐಸಿಎಂಆರ್ ಮಾಜಿ ಡೈರೆಕ್ಟರ್ ಜನರಲ್ ವಿ ಎಂ ಕಟೋಚ್ ಹೇಳಿದ್ದಾರೆ.ಈ ನಿಟ್ಟಿನಲ್ಲಿ ಮೂರು ಸೆಂಟರ್ ಗಳಲ್ಲಿ ಔಷಧದ ಪ್ರಯೋಗವನ್ನು ನಡೆಸಲಾಗಿದೆ ಎಂದು ಪುಣೆಯ ಸಾಂಕ್ರಾಮಿಕ ರೋಗಗಳ ಸೆಂಟರ್ ನಿರ್ದೇಶಕ ಅರವಿಂದ್ ಚೋಪ್ರಾ ವರ್ಚುಯಲ್ ಪ್ರೆಸ್ ಕಾನ್ಫರೆನ್ಸ್ ನಲ್ಲಿ ತಿಳಿಸಿದರು.
ಆಯುಷ್-64 ಔಷಧವನ್ನು ವೈಜ್ಞಾನಿಕವಾಗಿ ಅಭಿವೃದ್ಧಿಪಡಿಸಲಾಗಿದ್ದು, ಸುರಕ್ಷಿತ ಮತ್ತು ಪರಿಣಾಮಕಾರಿ ಆಯುರ್ವೇದ ಪದ್ಧತಿಯಾಗಿದೆ ಎಂದಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
145

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು