News Karnataka Kannada
Thursday, April 25 2024
ಬೆಂಗಳೂರು ನಗರ

‘ರೆಮ್‌ಡಿಸಿವಿರ್’ ಕದ್ದು ಮಾರಾಟ: ವಿಕ್ಟೋರಿಯಾ ಆಸ್ಪತ್ರೆ ವಾರ್ಡ್‌ಬಾಯ್ ಬಂಧನ

Photo Credit :

‘ರೆಮ್‌ಡಿಸಿವಿರ್’ ಕದ್ದು ಮಾರಾಟ: ವಿಕ್ಟೋರಿಯಾ ಆಸ್ಪತ್ರೆ ವಾರ್ಡ್‌ಬಾಯ್  ಬಂಧನ

ಬೆಂಗಳೂರು: ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಕೊರೊನಾ ಸೋಂಕಿತರಿಗೆ ಚಿಕಿತ್ಸೆ ನೀಡಲು ಪೂರೈಸಲಾದ ರೆಮ್‌ಡಿಸಿವಿರ್ ಚುಚ್ಚುಮದ್ದುಗಳನ್ನು ಕಳವು ಮಾಡಿ ಕಾಳಸಂತೆಯಲ್ಲಿ ಮಾರಾಟ ಮಾಡುತ್ತಿದ್ದ ಜಾಲವನ್ನು ಪಶ್ಚಿಮ ವಿಭಾಗ ಪೊಲೀಸರು ಪತ್ತೆ ಮಾಡಿದ್ದಾರೆ.ಕಳವು ಮಾಡಿದ್ದ ಚುಚ್ಚುಮದ್ದುಗಳನ್ನು ಕೆ.ಪಿ. ಅಗ್ರಹಾರ ಠಾಣೆ ವ್ಯಾಪ್ತಿಯಲ್ಲಿ ಮಾರಾಟ ಮಾಡಲು ಬಂದಿದ್ದ ಬಾಲಕನೊಬ್ಬನನ್ನು ಪೊಲೀಸರು ವಶಕ್ಕೆ ಪಡೆದಿದ್ದು, ಆತ ಜಾಲದ ಮಾಹಿತಿ ಬಾಯ್ಬಿಟ್ಟಿದ್ದಾನೆ.
‘ವಿಕ್ಟೋರಿಯಾ ಆಸ್ಪತ್ರೆಯಲ್ಲಿ ವಾರ್ಡ್ ಬಾಯ್ ಆಗಿ ಕೆಲಸ ಮಾಡುತ್ತಿದ್ದ ಬಾಲಕ, ಕೊರೊನಾ ಸೋಂಕಿತ ಸಂಬಂಧಿಯೊಬ್ಬರಿಗೆ ದುಬಾರಿ ಬೆಲೆಗೆ ಚುಚ್ಚುಮದ್ದು ಮಾರಲು ಬಂದಾಗ ಸಿಕ್ಕಿಬಿದ್ದಿದ್ದಾನೆ. ಆತನಿಂದ ಚುಚ್ಚುಮದ್ದಿನ 8 ಬಾಟಲಿಗಳನ್ನು ಜಪ್ತಿ ಮಾಡಲಾಗಿದೆ. ಆತನ ಜೊತೆ ಹಲವರು ಕೃತ್ಯದಲ್ಲಿ ಭಾಗಿಯಾಗಿರುವ ಅನುಮಾನವಿದ್ದು, ತನಿಖೆ ಮುಂದುವರಿದಿದೆ’ ಎಂದು ಪೊಲೀಸ್‌ ಮೂಲಗಳು ತಿಳಿಸಿವೆ.
ಆಸ್ಪತ್ರೆ ಲಿಫ್ಟ್‌ನಲ್ಲಿ ಕಳವು: ‘ವಿಕ್ಟೋರಿಯಾ ಆಸ್ಪತ್ರೆಗೆ ಬರುವ ಔಷಧಿಗಳನ್ನು ಲಿಫ್ಟ್‌ ಮೂಲಕ ಪ್ರತಿಯೊಂದು ಕೊಠಡಿಗೂ ಸರಬರಾಜು ಮಾಡಲಾಗುತ್ತದೆ. ಔಷಧಿಗಳನ್ನು ತೆಗೆದುಕೊಂಡು ಹೋಗುವ ವೇಳೆ ಸಂಬಂಧಪಟ್ಟ ಅಧಿಕಾರಿ ಹಾಗೂ ವಾರ್ಡ್‌ ಬಾಯ್ ಲಿಫ್ಟ್‌ನಲ್ಲಿ ಇರುತ್ತಾರೆ’ ಎಂದು ಮೂಲಗಳು ಹೇಳಿವೆ.‘ಔಷಧಿ ಸರಬರಾಜು ಮಾಡುವ ಕೆಲಸಕ್ಕೆ ಬಾಲಕನನ್ನು ನಿಯೋಜಿಸಲಾಗಿತ್ತು. ಮೇ 13ರಂದು ಲಿಫ್ಟ್‌ನಲ್ಲಿ ಹೋಗುವಾಗಲೇ ಆತ, ರೆಮ್‌ಡಿಸಿವಿರ್ ಚುಚ್ಚುಮದ್ದು 8 ಬಾಟಲಿ ಇದ್ದ ಬಾಕ್ಸ್‌ ಕದ್ದಿದ್ದ. ಅದನ್ನೇ ಹೊರಗಡೆ ತಂದು ಕಾಳಸಂತೆಯಲ್ಲಿ ಮಾರುತ್ತಿದ್ದ ಎಂದು ಗೊತ್ತಾಗಿದೆ.’
‘ಆಸ್ಪತ್ರೆಯಲ್ಲಿ ಸಿ.ಸಿ.ಟಿ.ವಿ ಕ್ಯಾಮೆರಾ ಇದ್ದು, ಭದ್ರತಾ ಸಿಬ್ಬಂದಿ ಸಹ ಇದ್ದಾರೆ. ಅವರೆಲ್ಲರ ಕಣ್ಣು ತಪ್ಪಿಸಿ ಚುಚ್ಚುಮದ್ದುಗಳನ್ನು ಬಾಲಕ ಹೊರಗಡೆ ತಂದಿದ್ದು ಹೇಗೆ ಎಂಬ ಪ್ರಶ್ನೆ ಎದುರಾಗಿದೆ. ಈತನ ಜೊತೆಯಲ್ಲಿ ಆಸ್ಪತ್ರೆಯ ಮತ್ತಷ್ಟು ಸಿಬ್ಬಂದಿ ಶಾಮೀಲಾಗಿರುವ ಶಂಕೆ ಇದೆ’ ಎಂದೂ ಪೊಲೀಸ್ ಮೂಲಗಳು ತಿಳಿಸಿವೆ.

ರೆಮ್‌ಡಿಸಿವಿರ್ ಚುಚ್ಚುಮದ್ದು ಅಕ್ರಮವಾಗಿ ಮಾರುತ್ತಿದ್ದ ಆರೋಪದಡಿ ಕಾವೇರಿ ಆಸ್ಪತ್ರೆಯ ಶುಶ್ರೂಷಕ ಎನ್‌. ಮನು (26) ಎಂಬಾತನನ್ನು ಬೈಯಪ್ಪನಹಳ್ಳಿ ಪೊಲೀಸರು ಬಂಧಿಸಿದ್ದಾರೆ.‘ಚಾಮರಾಜನಗರ ಜಿಲ್ಲೆಯ ಬಿಸಲವಾಡಿಯ ಮನು, ನಗರದ ಕೋನಪ್ಪನ ಅಗ್ರಹಾರದಲ್ಲಿರುವ ಕಾವೇರಿ ಆಸ್ಪತ್ರೆಯಲ್ಲಿ ಹಲವು ವರ್ಷಗಳಿಂದ ಕೆಲಸ ಮಾಡುತ್ತಿದ್ದ. ಆತನಿಂದ ಚುಚ್ಚುಮದ್ದಿನ 13 ಬಾಟಲಿ ಜಪ್ತಿ ಮಾಡಲಾಗಿದೆ’ ಎಂದು ಪೊಲೀಸರು ಹೇಳಿದರು.
‘ಬೈಯಪ್ಪನಹಳ್ಳಿ ಠಾಣೆ ವ್ಯಾಪ್ತಿಯ ಆಸ್ಪತ್ರೆಯೊಂದರ ಬಳಿ ರೆಮ್‌ಡಿಸಿವಿರ್ ಚುಚ್ಚುಮದ್ದು ಮಾರಲೆಂದು ಆರೋಪಿ ಬಂದಿದ್ದ. ಈ ಬಗ್ಗೆ ಮಾಹಿತಿ ಬರುತ್ತಿದ್ದಂತೆ ಕಾರ್ಯಾಚರಣೆ ನಡೆಸಿ ಆತನನ್ನು ಬಂಧಿಸಲಾಗಿದೆ’ ಎಂದೂ ತಿಳಿಸಿದರು.
‘ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ (ಐಸಿಯು) ಕೆಲಸ ಮಾಡುತ್ತಿದ್ದ ಆರೋಪಿ, ಅಲ್ಲಿಯ ಸೋಂಕಿತರಿಗೆ ವೈದ್ಯರ ಸಲಹೆಯಂತೆ ಚುಚ್ಚುಮದ್ದು ನೀಡುತ್ತಿದ್ದ. ಕೊರೊನಾ ಸೋಂಕಿತರಿಗೆ ರೆಮ್‌ಡಿವಿವಿರ್ ಎರಡು ಬಾಟಲಿ ಬದಲು ಒಂದೇ ಬಾಟಲಿ ಚುಚ್ಚುಮದ್ದು ಕೊಡುತ್ತಿದ್ದ. ಒಂದನ್ನು ಕದ್ದುಕೊಂಡು ಬಂದು ಹೊರಗಡೆ ಮಾರಾಟ ಮಾಡುತ್ತಿದ್ದ. ‘ಕೊರೊನಾ ಸೋಂಕಿತರು ಹಾಗೂ ಅವರ ಸಂಬಂಧಿಕರನ್ನು ಸಂಪರ್ಕಿಸುತ್ತಿದ್ದ ಆರೋಪಿ, ಒಂದು ಬಾಟಲಿಗೆ ₹20 ಸಾವಿರದಿಂದ ₹ 25 ಸಾವಿರ ಪಡೆದು ಮಾರುತ್ತಿದ್ದ‍’ ಎಂದೂ ಪೊಲೀಸರು ಹೇಳಿದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
145

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು