News Karnataka Kannada
Wednesday, April 24 2024
Cricket
ಬೆಂಗಳೂರು ನಗರ

ರಾಮಾಯಣದಂತಹ ಮಹಾಕಾವ್ಯಗಳು ಕನ್ನಡ ಪ್ರಾಚೀನ ಸಾಹಿತ್ಯದಲ್ಲೂ ಇವೆ:ಹಂಪನಾ

Book Hampana
Photo Credit : News Kannada

ರಾಮಾಯಣದಂತಹ ಮಹಾಕಾವ್ಯದಂತಹ ಉನ್ನತ ಸಾಹಿತ್ಯವು ಕನ್ನಡ ಪ್ರಾಚೀನ ಸಾಹಿತ್ಯದಲ್ಲಿವೆ ಎಂದು ಸಾಹಿತಿ, ನಾಡೋಜ ಡಾ. ಹಂಪ ನಾಗರಾಜಯ್ಯ ಅವರು ಹೇಳಿದರು.

ಬೆಂಗಳೂರಿನ ರಿಚ್‌ಮಂಡ್ ಸರ್ಕಲ್‌ನ ವುಡ್‌ಲ್ಯಾಂಡ್ ಹೋಟೆಲಿನ ಆವರಣದಲ್ಲಿ ಭಾನುವಾರ ಸಂಜೆ ಕಾನ್ಪುರದ ಅಮನ್‌ ಪ್ರಕಾಶನದ ಅಶ್ರಯದಲ್ಲಿಆಯೋಜಿಸಿದ್ದ ಸಮಾರಂಭದಲ್ಲಿ ಸಾಹಿತಿ ಹಂಪನಾ ವಿರಚಿತ ʼಚಾರುವಸಂತʼ ಕಾವ್ಯವನ್ನು ಡಾ. ಮಾಹೇರ್ ಮನ್ಸೂರ್ ಹಾಗೂ ಡಾ. ಶಾಕೀರ ಖಾನುಂ ಅವರು ಜಂಟಿಯಾಗಿ ಹಿಂದಿ ಭಾಷೆಗೆ ಅನುವಾದಿಸಿರುವ 3ನೇ ಆವೃತ್ತಿಯ ಲೋಕಾರ್ಪಣಾ ಸಮಾರಂಭ ಉದ್ಧೇಶಿಸಿ ಅವರು ಮಾತನಾಡಿದರು.

ಕನ್ನಡ ಪ್ರಾಚೀನ ಸಾಹಿತ್ಯವು ವಿಶ್ವದರ್ಜೆಯ ಮಟ್ಟದಲ್ಲಿವೆ. ನಿರಂತರ ಪ್ರಯತ್ನಶೀಲ ಅಧ್ಯಯನದ ಅಗತ್ಯವಿದೆ. ವಿಶ್ವವ್ಯಾಪಿಯಾಗಿ ಶ್ರೇಷ್ಠ ದರ್ಜೆಯ ಪ್ರೇಮದ ವಸ್ತುಗಳಿವೆ. 19 ವರ್ಷಗಳ ನಿರಂತರ ಪ್ರಯತ್ನದ ಫಲವಾಗಿ ‘ಚಾರುವಸಂತ’ ರೂಪುಗೊಂಡಿದೆ. ಪ್ರಾಕೃತ-ಸಂಸ್ಕೃತ ಭಾಷೆಯನ್ನು ಕಲಿತು ರಚಿಸಿದ್ದೆ. ನಿರಂತರ ಅಧ್ಯಯನ ಅಗತ್ಯವಿದೆ ಎಂದರು.

‘ಗುಣಾಢ್ಯನ ಕಥೆ’ ಈ ಸಾಹಿತ್ಯವು ದೇಸೀ ಸಾಹಿತ್ಯವಾಗಿದೆ. ಗುಣಾಢ್ಯನ ಕಥೆಯೂ ಸಹ ವಿಶ್ವಶ್ರೇಷ್ಠ ಸಾಹಿತ್ಯವಾಗಿದೆ. ಈ ಕಥೆಯು ಕನ್ನಡ ಪ್ರಾಚೀನ ಸಾಹಿತ್ಯದ ಕೊಡುಗೆಯಾಗಿದೆ. ಇಂತಹ ಎಲ್ಲ ಕಥೆಗಳು ಜನಸಾಮಾನ್ಯರ ಕಥೆಗಳೇ ಆಗಿವೆ. ಕಥಾಸರಿತ್ಸಾಗರದಂತಹ ಕೃತಿ ಜಗತ್ತಿಗೆ ಪರಿಚಯವಾಗಬೇಕಿದೆ. ಹೀಗಾಗಿ, ರಾಮಾಯಣದಂತಹ ಮಹಾಕಾವ್ಯಗಳಿಗೆ ಸರಿದೂಗುವ ಹಾಗೆ ಕನ್ನಡ ಪ್ರಾಚೀನ ಸಾಹಿತ್ಯವಿದೆ. ಇಂತಹ ಸಾಹಿತ್ಯ ರಚಿಸಲು ನಿರಂತರ ಅಧ್ಯಯನ ಅಗತ್ಯವಿದೆ. ಹಿಂದಿಗೆ ಅನುವಾದ ಗೊಂಡಿರುವ ಈಗಿನ ಕೃತಿಯು 15 ಭಾಷೆಗಳಲ್ಲಿ ಅನುವಾದ ಕಂಡಿದೆ ಎಂದು ಹೇಳಿದರು.

ಪ್ರಜಾವಾಣಿ ಸಂಪಾದಕ ರವೀಂದ್ರ ಭಟ್ ಕೃತಿಯನ್ನು ಬಿಡುಗಡೆ ಮಾಡಿ, ಚಾರುವಸಂತ ಕಥೆಯು ಪ್ರಾಚೀನವಾದರೂ ವಾಸ್ತವದ ಅಂಶಗಳನ್ನು ಒಳಗೊಂಡಿದ್ದರಿಂದ ಈ ಕೃತಿಯು ಸಾರ್ವಕಾಲಿಕತೆಯನ್ನು ಪಡೆಯುತ್ತದೆ ಎಂದು ಅಭಿಪ್ರಾಯಪಟ್ಟರು.

ಸುಂದರ, ಸುಲಲಿತ ಭಾಷೆಯ ಚಾರುವಸಂತ: ಹಿರಿಯ ವಿದ್ವಾಂಸ ಪ್ರೊ. ಅಶ್ವತ್ಥ ನಾರಾಯಣ ಘಟ್ಟಮ ರಾಜು ಕೃತಿಯ ಕುರಿತು ಮಾತನಾಡಿ ‘ಚಾರುವಸಂತ ಕಾವ್ಯವು ದೇಸೀ ಕಾವ್ಯವೆಂದು ಹಂಪನಾ ಹೇಳಿದ್ದಾರೆ. ಆದರೆ, ದೇಸೀ ಸೊಗಡಿದ್ದೂ, ವಿಶ್ವವ್ಯಾಪಿಯಾಗಿದೆ. ಸಾಹಿತ್ಯಾಸಕ್ತ ಯುವಕರು ಸಹ ಈ ಕಾವ್ಯವನ್ನು ಆಸಕ್ತಿಯಿಂದ ಓದಲು ಪ್ರೇರಣೆ ನೀಡುವಂತಿದೆ. ಇಲ್ಲಿಯ ಭಾಷೆಯು ಸುಂದರ, ಸಲಲಿತವಾಗಿದೆ. ಕವಿಯು ಯಾವಾಗಲೂ ಸುಂದರ ಜೀವನ ದರ್ಶನದ ಬಗ್ಗೆ ಮಾತನಾಡುತ್ತಾನೆ. ಇಂತಹ ಸುಂದರ ಪರಿಕಲ್ಪನೆ ಚಾರುವಸಂತದಲ್ಲಿ ವ್ಯಕ್ತವಾಗಿದೆ.. ಆದರೆ, ಪ್ರಾಚೀನ ಕಾವ್ಯದಿಂದ ಯುವಕರು ದೂರ ಸರಿಯುತ್ತಿದ್ದಾರೆ. ಇದು ವಿಷಾದದ ಸಂಗತಿ ಎಂದರು.

ಕೃತಿಯ ಅನುವಾದಕಿ ಡಾ. ಶಾಕೀರ ಖಾನುಂ ಮಾತನಾಡಿ ‘ಕಬೀರದಾಸನ ಸಾಹಿತ್ಯದಲ್ಲಿ ಹೆಣ್ಣಿನ ಸ್ವಾತಂತ್ಯ್ರ ಕುರಿತು ಹೆಚ್ಚಿನ ಪ್ರಸ್ತಾಪವಿಲ್ಲ. ಆದರೆ, ಶಿಶುನಾಳ ಷರೀಫನ ತತ್ವಪದಗಳಲ್ಲಿ ಹೆಣ್ಣಿನ ಸ್ವಾತಂತ್ಯ್ರದ ಹೊಳವುಗಳಿವೆ. ಅದು ಮಹಾಕಾವ್ಯಕ್ಕೆ ಸಾಕ್ಷಿ ನುಡಿಯುತ್ತದೆ ಎಂದು ಅಭಿಪ್ರಾಯಪಟ್ಟರು.

ಅವಧಿ ಸಂಪಾದಕ ಜಿ.ಎನ್. ಮೋಹನ್ ಅಧ್ಯಕ್ಷತೆವಹಿಸಿದ್ದರು. ವಿಜಯವಾಣಿ ಸಂಪಾದಕ ಚನ್ನೇಗೌಡ , ದೂರದರ್ಶನ ಅಧಿಕಾರಿ ಎಚ್.ಎನ್. ಆರತಿ, ಚಾರುವಸಂತ ಹಿಂದಿ ಭಾಷೆಯ ಕೃತಿಯ ಅನುವಾದಕರಾದ ಡಾ. ಡಾ. ಮಾಹೇರ್ ಮನ್ಸೂರ್ ಹಾಗೂ ಡಾ. ಶಾಕೀರ ಖಾನುಂ, ಅಮನ್ ಪ್ರಕಾಶನದ ರಿಷಬ್ ಬಾಜಪೈ, ಕಾರ್ಯಕ್ರಮ ಸಂಯೋಜಕಿ ಡಾ. ಲಲಿತಾಂಬ, ಪ್ರೆಸ್ ಫೋಟೋಗ್ರಾಫರ್ ಕೆ.ಎಸ್. ಗಣೇಶ್ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದರು. ನಾಡೋಜ ಡಾ. ಕಮಲಾ ಹಂಪನಾ ಸೇರಿದಂತೆ ಗಣ್ಯ ಸಾಹಿತಿಗಳು ಪಾಲ್ಗೊಂಡಿದ್ದರು. ಈ ಸಮಾರಂಭವು ಬುಕ್ ಬ್ರಹ್ಮದ ಯುಟ್ಯೂಬ್ ಚಾನಲ್ ಮೂಲಕ ನೇರವಾಗಿ ಪ್ರಸಾರಗೊಂಡಿತು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12795
News Karnataka Kannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು