News Karnataka Kannada
Tuesday, April 23 2024
Cricket
ಬೆಂಗಳೂರು ನಗರ

ರಾಜ್ಯಸರ್ಕಾರ ಕೋವಿಡ್ ಪರೀಕ್ಷೆ ಕಡಿಮೆ ಮಾಡುವ ಮೂರನೇ ಅಲೆಯನ್ನು ಆಹ್ವಾನಿಸುತ್ತಿದೆ; ತಜ್ಞರಿಂದ ಎಚ್ಚರಿಕೆ

Photo Credit :

ರಾಜ್ಯಸರ್ಕಾರ ಕೋವಿಡ್ ಪರೀಕ್ಷೆ ಕಡಿಮೆ ಮಾಡುವ ಮೂರನೇ ಅಲೆಯನ್ನು ಆಹ್ವಾನಿಸುತ್ತಿದೆ; ತಜ್ಞರಿಂದ ಎಚ್ಚರಿಕೆ

ಬೆಂಗಳೂರು: ಕರ್ನಾಟಕದಲ್ಲಿ ಒಂದು ತಿಂಗಳ ಹಿಂದೆ ಪ್ರತಿದಿನ 1.9 ಲಕ್ಷ ಕೋವಿಡ್ ಪರೀಕ್ಷೆಗಳನ್ನು ನಡೆಸಲಾಗುತ್ತಿತ್ತು. ಈಗ ಅದನ್ನು ಕೇವಲ 93,000ಕ್ಕೆ ಇಳಿಸುವ ಮೂಲಕ ರಾಜ್ಯದಲ್ಲಿ ಮತ್ತೊಂದು ಕೊರೋನಾ ಅಲೆಯನ್ನುಆಹ್ವಾನಿಸಲಾಗುತ್ತಿದೆ ಎಂದು ರಾಜ್ಯ ಕೋವಿಡ್-19 ತಾಂತ್ರಿಕ ಸಲಹಾ ಸಮಿತಿ(ಟಿಎಸಿ)ಯ ಸದಸ್ಯರೊಬ್ಬರು ಎಚ್ಚರಿಸಿದ್ದಾರೆ.

ರಾಜ್ಯದಲ್ಲಿ ಸೋಮವಾರ 97,236 ಕೋವಿಡ್ ಪರೀಕ್ಷೆಗಳನ್ನು ನಡೆಸಿದ್ದು, ಅದರಲ್ಲಿ 38,603 ಮಂದಿಗೆ ಪಾಸಿಟಿವ್ ಬಂದಿದೆ. ಮಂಗಳವಾರ 93,247 ಪರೀಕ್ಷೆಗಳನ್ನು ನಡೆಸಲಾಗಿದ್ದು, 30,309 ಜನರಿಗೆ ಪಾಸಿಟಿವ್ ಬಂದಿದೆ.

ಇದು ಕಳೆದ ಏಪ್ರಿಲ್ 28 ರಂದು 1.72 ಲಕ್ಷ ಮತ್ತು ಏಪ್ರಿಲ್ 24 ರಂದು ನಡೆಸಿದ 1.9 ಲಕ್ಷ ಕೋವಿಡ್ ಪರೀಕ್ಷೆಗಳಿಗೆ ತದ್ವಿರುದ್ಧವಾಗಿದೆ ಎಂದಿದ್ದಾರೆ.

ಇನ್ನೂ ಕೋವಿಡ್ ಪರೀಕ್ಷೆ ಮಾಡಿಸಿಕೊಳ್ಳದವರು ಸೋಂಕನ್ನು ಮತ್ತಷ್ಟು ಹರಡಬಹುದು ಎಂದು ಟಿಎಸಿ ಸದಸ್ಯ ಮತ್ತು ಭಾರತದ ಸಾರ್ವಜನಿಕ ಆರೋಗ್ಯ ಪ್ರತಿಷ್ಠಾನದ ಸಾಂಕ್ರಾಮಿಕ ರೋಗಶಾಸ್ತ್ರ ಪ್ರಾಧ್ಯಾಪಕ ಡಾ.ಗಿರಿಧರ ಆರ್ ಬಾಬು ಹೇಳಿದ್ದಾರೆ.

ಒಂದು ರೀತಿಯಲ್ಲಿ ನಾವು ಮೂರನೇ ಅಲೆಯನ್ನು ಆಹ್ವಾನಿಸುತ್ತಿದ್ದೇವೆ. ಏಕೆಂದರೆ ಜನರು ಸೋಂಕನ್ನು ಹರಡುತ್ತಿದ್ದಾರೆ ಮತ್ತು ಅದು ವೇಗವಾಗಿ ಹರಡುತ್ತದೆ. ನಂತರ ಅದು ಹೆಚ್ಚು ಸೋಂಕಿಗೆ ಕಾರಣವಾಗುತ್ತದೆ ಮತ್ತು ನಾವು ಈ ಸಮಸ್ಯೆಯನ್ನು ಪರಿಹರಿಸಲು ಸಾಧ್ಯವಿಲ್ಲ. ಇದಕ್ಕೆ ಇರುವ ಏಕೈಕ ಪರಿಹಾರವೆಂದರೆ ವ್ಯಾಪಕವಾಗಿ ಪರೀಕ್ಷಿಸುವುದು ಎಂದು ಬಾಬು ತಿಳಿಸಿದ್ದಾರೆ.

ಪರೀಕ್ಷೆಗಳನ್ನು ಕಡಿಮೆ ಮಾಡುವುದು ಸರ್ಕಾರದ ವೆಚ್ಚ ಕಡಿತ ಕ್ರಮವೇ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಕಳೆದುಹೋದ ಜೀವಗಳನ್ನು ಟೆಸ್ಟ್ ಕಿಟ್ ಬೆಲೆಗೆ ಹೋಲಿಸಲು ಸಾಧ್ಯವಿಲ್ಲ ಎಂದಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
205

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು