News Karnataka Kannada
Thursday, April 18 2024
Cricket
ಬೆಂಗಳೂರು ನಗರ

ರಾಜ್ಯದಲ್ಲಿ ಒಟ್ಟು 1,370 ಬ್ಲ್ಯಾಕ್ ಫಂಗಸ್ ಪ್ರಕರಣಗಳು ಪತ್ತೆ

Photo Credit :

ರಾಜ್ಯದಲ್ಲಿ ಒಟ್ಟು 1,370 ಬ್ಲ್ಯಾಕ್ ಫಂಗಸ್ ಪ್ರಕರಣಗಳು ಪತ್ತೆ

ಬೆಂಗಳೂರು: ರಾಜ್ಯದಲ್ಲಿ ಇದುವರೆಗೆ ಒಟ್ಟು 1,370 ಜನರಲ್ಲಿ ಬ್ಲ್ಯಾಕ್ ಫಂಗಸ್ ಪತ್ತೆಯಾಗಿದ್ದು, ಕೊರೊನಾ ಎರಡನೇ ಅಲೆಯ ತೊಂದರೆಗಳ ಬಳಿಕ ಕಂಡುಬಂದ ಹೊಸದಾದ ಆರೋಗ್ಯ ಸಮಸ್ಯೆ ಇದಾಗಿದೆ. 

 

ಈವರೆಗೆ ರಾಜ್ಯದಲ್ಲಿ ಒಟ್ಟು 1,379 ಪ್ರಕರಣಗಳು ಕಂಡುಬಂದಿದೆ. ಅದರಲ್ಲಿ 27 ರೋಗಿಗಳು ಗುಣಮುಖರಾಗಿದ್ದಾರೆ. 1,292 ರೋಗಿಗಳಿಗೆ ಚಿಕಿತ್ಸೆ ಪಡೆಯುತ್ತಿದ್ದಾರೆ. ಹಾಗೇಯೇ ಈ ಫಂಗಸ್‌ಗೆ 51 ರೋಗಿಗಳು ಬಲಿಯಾಗಿದ್ದಾರೆ.

 

ಜಿಲ್ಲಾವಾರು ಬ್ಲ್ಯಾಕ್ ಫಂಗಸ್ ಪ್ರಕರಣಗಳು ಪಟ್ಟಿಯನ್ನು ಗಮನಿಸಿದರೆ, 

ಬೆಂಗಳೂರು ನಗರದಲ್ಲಿ ಅತಿ ಹೆಚ್ಚು ಬ್ಲ್ಯಾಕ್ ಫಂಗಸ್, ಅಂದರೆ 557 ಕೇಸ್​ಗಳು ಕಂಡುಬಂದಿದೆ. ಧಾರವಾಡ 156, ಕಲಬುರಗಿ 104, ಬಾಗಲಕೋಟೆ 70, ವಿಜಯಪುರ 57, ಬೆಳಗಾವಿ 47, ರಾಯಚೂರು 46, ಕೋಲಾರ 43, ಶಿವಮೊಗ್ಗದಲ್ಲಿ 38, ದಕ್ಷಿಣ ಕನ್ನಡ, ಮೈಸೂರು ಜಿಲ್ಲೆಯಲ್ಲಿ ತಲಾ 35 ಕೇಸ್, ಚಿತ್ರದುರ್ಗ 34, ದಾವಣಗೆರೆಯಲ್ಲಿ 26, ಬೆಂಗಳೂರು ಗ್ರಾಮಾಂತರ 20, ಬೀದರ್ 18, ಕೊಪ್ಪಳ 16, ಗದಗ 11, ಉಡುಪಿಯಲ್ಲಿ 10, ತುಮಕೂರು 10, ಹಾಸನ 9, ಹಾವೇರಿ 8, ಬಳ್ಳಾರಿ 6, ಮಂಡ್ಯ, ರಾಮನಗರ, ಯಾದಗಿರಿ, ಉತ್ತರ ಕನ್ನಡ ಜಿಲ್ಲೆಯಲ್ಲಿ ತಲಾ 3 ಪ್ರಕರಣ ಪತ್ತೆಯಾಗಿದೆ. ಚಿಕ್ಕಬಳ್ಳಾಪುರ, ಚಿಕ್ಕಮಗಳೂರು ಜಿಲ್ಲೆಯಲ್ಲಿ ತಲಾ 1 ಬ್ಲ್ಯಾಕ್ ಫಂಗಸ್ ಪ್ರಕರಣ ಕಂಡುಬಂದಿದೆ.

 

 

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
205

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು