News Karnataka Kannada
Monday, April 22 2024
Cricket
ಬೆಂಗಳೂರು ನಗರ

ರಾಜ್ಯದಲ್ಲಿ ಆಗಸ್ಟ್ ವರೆಗೆ ಲಸಿಕೆ ಅಭಾವ: ಡಿಸಿಎಂ ಸುಳಿವು

Photo Credit :

ರಾಜ್ಯದಲ್ಲಿ ಆಗಸ್ಟ್ ವರೆಗೆ ಲಸಿಕೆ ಅಭಾವ: ಡಿಸಿಎಂ ಸುಳಿವು

ಬೆಂಗಳೂರು: ರಾಜ್ಯದಲ್ಲಿ ಕೊರೋನಾ ಅಟ್ಟಹಾಸದ ಆತಂಕ ಹೆಚ್ಚಾಗುತ್ತಲೇ ಇದ್ದು ಲಸಿಕೆ ಪ್ರಕ್ರಿಯೆ ಚುರುಕುಗೊಳಿಸುವತ್ತ ಸರ್ಕಾರ ಯತ್ನಿಸುತ್ತಿದೆ. ಆದರೆ ಆಗಸ್ಟ್‌ವರೆಗೂ ಲಸಿಕೆ ಅಭಾವ ಸಾಧ್ಯತೆ ಬಗ್ಗೆ ಡಿಸಿಎಂ ಅಶ್ವತ್ಥ್ ನಾರಾಯಣ್ ಸುಳಿವು ನೀಡಿದ್ದಾರೆ.

ಬೆಂಗಳೂರಿನಲ್ಲಿಂದು ಮಾತನಾಡಿದ ಡಿಸಿಎಂ ಅಶ್ವತ್ಥ್ ನಾರಾಯನ್ ಲಸಿಕೆ ಅಭಿಯಾನ ಸರಿಯಾಗಿ ನಡೆಯಲು ಇನ್ನು ಎರಡು ತಿಂಗಳು ಬೇಕು. ರಾಜ್ಯದ ಬೇಡಿಕೆಗೆ ಅನುಗುಣವಾಗಿ ಲಸಿಕೆ ಸಿಗಲು 2 ತಿಂಗಳ ಸಮಯದ ಅಗತ್ಯವಿದೆ ಎಂದು ಹೇಳಿದರು.

ಡಿಸಿಎಂ ಅಶ್ವತ್ಥ್ ನಾರಾಯಣ್ ಆಗಸ್ಟ್ ವರೆಗೂ ಲಸಿಕೆ ಪೂರೈಕೆ ಕಷ್ಟ ಎಂಬ ಸಂದೇಶ ನೀಡಿದ್ದಾರೆ. ಆಗಸ್ಟ್ ಗೆ ನಮ್ಮಲ್ಲಿ ಹೆಚ್ಚು ಲಸಿಕೆ ಪ್ರೊಡಕ್ಷನ್ ಆಗುತ್ತವೆ. ಈಗ ಭಾರತ್ ಬಯೋಟೆಕ್, ಸೀರಂ, ಸ್ಪುಟ್ನಿಕ್ ಲಸಿಕೆ ಉತ್ಪಾದನೆ ಆಗುತ್ತಿದೆ.ಲಸಿಕೆ ಉತ್ಪಾದನೆಯ ವಿಸ್ತರಣೆಯನ್ನು ಆಯಾ ಕಂಪನಿಗಳು ಹೆಚ್ಚಳ ಮಾಡುತ್ತಿವೆ. ಇವೆಲ್ಲವೂ ಸರಿ ಹೋಗೋದಕ್ಕೆ ಕೆಲ ತಿಂಗಳುಗಳ ಸಮಯ ಬೇಕು ಎಂದರು.

ಆದ್ಯತಾ ವಲಯಕ್ಕೆ 18 ವರ್ಷ ಮೇಲ್ಪಟ್ಟವರಿಗೂ ರಾಜ್ಯದಲ್ಲಿ ಲಸಿಕೆ ನೀಡಲಾಗುತ್ತಿದೆ. ಈ ತಿಂಗಳ ಕೊನೆಯವರೆಗೂ ಇವರಿಗೆ ಆದ್ಯತೆ ಮೇಲೆ ಲಸಿಕೆ ಕೊಡುತ್ತೇವೆ. ನಾವು ಒಂದು ದಿನವೂ ಲಸಿಕೆ‌ ಕೊಡುವುದು ನಿಲ್ಲಿಸಿಲ್ಲ. ಜನ ಸಾಮಾನ್ಯರಿಗೆ ಲಸಿಕೆ ಕೊಡುವ ಕೆಲಸ ಆಗುತ್ತಿಲ್ಲ. ಸರ್ಕಾರದ ಗುರಿ ಇರುವುದು ಈ ವರ್ಷದ ಕೊನೆಯ ಒಲಗೆ ಎಲ್ಲರಿಗೂ ಲಸಿಕೆ ನೀಡಬೇಕೆನ್ನುವುದಾಗಿದೆ ಎಂದರು.

ವರ್ಷಾಂತ್ಯದೊಳಗೆ ಎಲ್ಲಾ ನಾಗರೀಕರಿಗೂ ಒಂದು ಡೋಸ್ ಆದರು ಲಸಿಕೆ ನೀಡುವ ಗುರಿ ಇದೆ. ಈ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಡಿಸಿಎಂ ಅಸ್ವತ್ಥ್ ನಾರಾಯಣ್ ಹೇಳಿದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
205

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು