News Karnataka Kannada
Tuesday, April 16 2024
Cricket
ಬೆಂಗಳೂರು ನಗರ

ಮೇ ತಿಂಗಳಲ್ಲಿ 18-45 ವರ್ಷದವರಿಗೆ ಉಚಿತ ಲಸಿಕೆ ಸಿಗುವುದು ಅನುಮಾನ

Photo Credit :

ಮೇ ತಿಂಗಳಲ್ಲಿ 18-45 ವರ್ಷದವರಿಗೆ ಉಚಿತ ಲಸಿಕೆ ಸಿಗುವುದು ಅನುಮಾನ

ಬೆಂಗಳೂರು: ದೇಶದಲ್ಲಿ ಕೊರೊನಾ ಸೋಂಕಿನ ಎರಡನೇ ಅಲೆ ಅತ್ಯಂತ ವೇಗವಾಗಿ ಹರಡುವ ಮೂಲಕ ಅತಿ ಕಡಿಮೆ ಸಮಯದಲ್ಲಿ ಸೋಂಕಿತರ ಸಂಖ್ಯೆ ದುಪ್ಪಟ್ಟಾಗಲು ಕಾರಣವಾಗಿದೆ. ಈ ಹಿನ್ನೆಲೆಯಲ್ಲಿ ಸೋಂಕು ತಡೆಗಟ್ಟಲು ಕೊರೊನಾ ಲಸಿಕೆಯೊಂದೇ ಪ್ರಮುಖ ಅಸ್ತ್ರ ಎಂದು ಅನೇಕ ತಜ್ಞರು ಅಭಿಪ್ರಾಯಪಟ್ಟಿದ್ದು, ಇಂದಿನಿಂದ 18 ವರ್ಷ ಮೇಲ್ಪಟ್ಟವರಿಗೆ ಕೊರೊನಾ ಲಸಿಕೆ ನೀಡುವುದಾಗಿ ಘೋಷಿಸಿತ್ತು. ಆದರೆ, ಇದೀಗ ಲಸಿಕೆಗೆ ಸಂಬಂಧಿಸಿದಂತೆ ಬಿಬಿಎಂಪಿ ಕೆಲ ಮಾಹಿತಿ ನೀಡಿದ್ದು, ಮೇ ತಿಂಗಳಲ್ಲಿ ಬಿಬಿಎಂಪಿ ವ್ಯಾಪ್ತಿಯಲ್ಲಿರುವ ಯುವ ಸುಮುದಾಯಕ್ಕೆ ಉಚಿತ ಕೊರೊನಾ ಲಸಿಕೆ ಸಿಗುವುದು ಅನುಮಾನವಾಗಿದೆ.
ಲಸಿಕೆ ವಿತರಣೆ ಬಗ್ಗೆ ತಿಳಿಸಿರುವ ಬಿಬಿಎಂಪಿ, 18ರಿಂದ 45 ವರ್ಷ ವಯಸ್ಸಿನ ಸುಮಾರು 45 ಲಕ್ಷ ಜನ ಬಿಬಿಎಂಪಿ ವ್ಯಾಪ್ತಿಯಲ್ಲಿದ್ದಾರೆ. ಜತೆಗೆ, 45 ವರ್ಷ ಮೇಲ್ಪಟ್ಟವರು 21 ಲಕ್ಷ ಜನರಿದ್ದಾರೆ. ಸದ್ಯ 66 ಲಕ್ಷ ಡೋಸ್ ಕೊರೊನಾ ಲಸಿಕೆಗೆ ಬೇಡಿಕೆ ಇಡಲಾಗಿದೆ. ಈಗ ಕೇಂದ್ರ ಸರ್ಕಾರ ಲಸಿಕೆ ಪೂರೈಸಿದರೂ 18 ರಿಂದ 45 ವರ್ಷ ವಯೋಮಾನದವರು ಖಾಸಗಿ ಆಸ್ಪತ್ರೆಗಳಲ್ಲಿ ಹಣ ನೀಡಿ ಲಸಿಕೆ ಹಾಕಿಸಿಕೊಳ್ಳಬೇಕಾಗುತ್ತದೆ. ನಂತರದಲ್ಲಿ ರಾಜ್ಯ ಸರ್ಕಾರ ನೀಡುವ ಲಸಿಕೆಯನ್ನು 18 ರಿಂದ 45 ವರ್ಷ ವಯಸ್ಸಿನವರಿಗೆ ಉಚಿತವಾಗಿ ವಿತರಿಸಲಾಗುವುದು. ಹೀಗಾಗಿ ತಕ್ಷಣಕ್ಕೆ ಮೇ ತಿಂಗಳಲ್ಲಿ ಉಚಿತ ಲಸಿಕೆ ವಿತರಣೆ ಆರಂಭಿಸುವುದು ಅನುಮಾನ ಎಂಬಂತೆ ಮಾಹಿತಿ ನೀಡಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
145

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು