News Karnataka Kannada
Saturday, April 20 2024
Cricket
ಬೆಂಗಳೂರು ನಗರ

ಮತ್ತೆ ಯೂ ಟರ್ನ್ ಹೊಡೆದ ಸರ್ಕಾರ: ಸಾರ್ವಜನಿಕ ಗಣೇಶೋತ್ಸವಕ್ಕೆ ಅವಕಾಶ

Photo Credit :

ಮತ್ತೆ ಯೂ ಟರ್ನ್ ಹೊಡೆದ ಸರ್ಕಾರ: ಸಾರ್ವಜನಿಕ ಗಣೇಶೋತ್ಸವಕ್ಕೆ ಅವಕಾಶ

ಬೆಂಗಳೂರು: ಕೋವಿಡ್-19 ಹೆಚ್ಚಾಗುತ್ತಿದ್ದರೂ, ಜನರು ಸಾಮಾಜಿಕ ಅಂತರ ಏನೆಂಬುವುದನ್ನು ಮರೆತ್ತಿದ್ದರೂ ಸರ್ಕಾರ ಮಾತ್ರ ತಮ್ಮ ಕೆಲವು ನಿರ್ಧಾರಗಳನ್ನು ಬದಲಿಸುತ್ತಲೇ ಇದೆ.

ಈಗ ಗಣೇಶೋತ್ಸವವನ್ನು ಸಾರ್ವಜನಿಕವಾಗಿ ಆಚರಿಸಲು ಅನುಮತಿ ನೀಡಲು ನಿರ್ಧರಿಸಿದೆ. ಇದಕ್ಕಾಗಿ ಕೆಲವೊಂದು ಮಾರ್ಗಸೂಚಿಗಳನ್ನು ನಿಗದಿ ಮಾಡಿದೆ.

ಗಣೇಶೋತ್ಸವದ ವೇಳೆ ಯಾವುದೇ ರೀತಿಯ ಮೆರವಣಿಗೆ ಮಾಡಲು ಅವಕಾಶವಿಲ್ಲ. ನಾಲ್ಕು ಅಡಿ ಎತ್ತರದ ಗಣೇಶ ಮೂರ್ತಿಗಳ ಸ್ಥಾಪನೆಗೆ ಅವಕಾಶವಿದೆ. 20 ಮಂದಿ ಮಾತ್ರ ಗಣೇಶೋತ್ಸವದ ಪೆಂಡಾಲ್ ನ ಒಳಗಡೆ ಹೋಗಬಹುದಾಗಿದೆ.

ಗಣೇಶೋತ್ಸವ ಸಂದರ್ಭದಲ್ಲಿ ಯಾವುದೇ ರೀತಿಯ ಸಾಂಸ್ಕೃತಿಕ ಕಾರ್ಯಕ್ರಮ ಆಯೋಜನೆಗೆ ಅವಕಾಶ ನೀಡಿಲ್ಲ. ಒಂದು ವಾರ್ಡ್ ಅಥವಾ ಗ್ರಾಮದಲ್ಲಿ ಒಂದು ಗಣೇಶ ಮೂರ್ತಿ ಆರಾಧನೆಗೆ ಅವಕಾಶವಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
187

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು