News Karnataka Kannada
Friday, April 19 2024
Cricket
ಬೆಂಗಳೂರು ನಗರ

ಮತ್ತೆ ಗುಣಮಟ್ಟವಲ್ಲದ ಔಷಧಿಗಳ ನಿಷೇಧ

Medicine
Photo Credit :

ಬೆಂಗಳೂರು: ಕರ್ನಾಟಕ ಔಷಧ ಪರೀಕ್ಷಾ ಪ್ರಯೋಗಾಲಯದ ಸರ್ಕಾರಿ ವಿಶ್ಲೇಷಕರು ಗುಣಮಟ್ಟವಲ್ಲದ ಹಲವು ಔಷಧಿಗಳನ್ನು ನಿಷೇಧಿಸಿದ್ದಾರೆ.

ಇದೀಗ ನಿಷೇಧವಾಗಿರುವ ಔಷಧಿಗಳು ಯಾವುವು ಎಂಬುದನ್ನು ನೋಡುವುದಾದರೆ  ಕೆಪ್ಸೀಮೆಟ್ (ಸಿಟಾಗ್ಲಿಪ್ಟಿನ್  ಅಂಡ್ ಮೆಟಫಾರ್ಮಿನ್ ಹೈಡ್ರೋಕ್ಲೋರೈಡ್ ಟ್ಯಾಬ್ಲೆಟ್ಸ್), ಪೆನ್ಲಿಪ್ – ಡಿಎಸ್ಆರ್ ಕ್ಯಾಪ್ಸೂಲ್ಸ್ (ಪ್ಯಾಂಟೋಫ್ರಜೋಲ್ ಸೋಡಿಯಂ ಗ್ಯಾಸ್ಟ್ರೋ – ರಿಸಿಸ್ಟೆಂಟ್ ಅಂಡ್ ಡೋಮ್ಫೆರಿಡನ್ ಫ್ರೋಲಾಂಗಡ್ – ರೀಲಿಸ್ ಕ್ಯಾಪ್ಸೂಲ್ಸ್ ಐಪಿ), ರೋಸುವಾಸ್ಪಾಟಿನ್, ಆಸ್ಪಿರಿನ್ ಅಂಡ್ ಕ್ಲೋಪಿಡೋಗ್ರೆಲ್ ಟ್ಯಾಬ್ಲೆಟ್ಸ್ (ರೋಜುಲಾ ಗೋಲ್ಡ್ 10), ಸೆಫೋಕಾಡ್-200 (ಸೆಫೋಡ್ಯಾಕ್ಸಿಮ್ ಪ್ರೋಕ್ಸಿಟಿಲ್ ಡಿಸ್ಫ್ರೆಸಿಬಲ್ ಟ್ಯಾಬ್ಲೆಟ್ಸ್ 200 ಎಂಜಿ), ಲೀಕಾಲ್ -500 ಟ್ಯಾಬ್ಲೆಟ್ಸ್ (ಕ್ಯಾಲ್ಸಿಯಂ ವಿಥ್ ವಿಟಮಿನ್ ಡಿ3 ಟ್ಯಾಬ್ಲೆಟ್ಸ್), ಐಟೋಪ್ಸಿ 100 (ಇಟ್ರಾಕೊನಜೋಲ್ ಕ್ಯಾಪ್ಸೂಲ್ಸ್ 100 ಎಂಜಿ), ಆಪ್ಲಿಟ್ – ಓಜಡ್ (ಓಪ್ಲಾಕ್ಸಸಿನ್ ಟ್ಯಾಬ್ಲೆಟ್ಸ್ ಐಪಿ) ಗಳಾಗಿವೆ.

ಇಷ್ಟೇ ಅಲ್ಲದೆ, ಟೆಕೈರಾ ಎಎಂ (ಟೆಲ್ಮಿಸರ್ಟನ್ ಅಂಡ್ ಆಮ್ಲೋಡಿಫೈನ್ ಟ್ಯಾಬ್ಲೆಟ್ಸ್ ಐಪಿ), ಪ್ಯಾರಮೋಲ್ (650) (ಪ್ಯಾರಸೆಟಮೋಲ್ ಟ್ಯಾಬ್ಲೆಟ್ಸ್ ಐಪಿ), ಸೆನ್ಸಿಫರ್ – ಎಕ್ಸ್ಟಿ (ಫೆರೋಸ್ ಆಸ್ಕೋರ್ಬೇಟ್, ಪೋಲಿಕ್ ಆಸಿಡ್  ಅಂಡ್ ಜಿಂಕ್ ಸಲ್ಫೆಟ್ ಸಾಫ್ಟ್ ಜೆಲಾಟಿನ್ ಕ್ಯಾಪ್ಸೂಲ್ಸ್), ನಿಫೆಟ್ಯಾಗ್ 20 ಎಂಜಿ (ನಿಫೆಡಿಪೈನ್ ಸಸ್ಟೈನಡ್ ರಿಲಿಸ್ ಟ್ಯಾಬ್ಲೆಟ್ಸ್ ಐಪಿ), ಕ್ಲೋರ್ಪಿನರಾಮಿನ್ ಮಲೇಟ್ ಇನ್ಜೆಕ್ಷನ್ ಐ.ಪಿ. (ಸಿಪಿಎಂ), ಪ್ಯಾಂಟೋಫ್ರಜೋಲ್ ಟ್ಯಾಬ್ಲೆಟ್ಸ್ ಐಪಿ (ಪ್ರಾಣ್ 40), ನಿಗ್ಟೆಲ್ -ಹೆಚ್ ಟ್ಯಾಬ್ಲೆಟ್ಸ್, (ಟೆಲ್ಮಿಸರ್ಟನ್ ಅಂಡ್ ಹೈಡ್ರೋಕ್ಲೋರೋಥೈಸಡ್ ಟ್ಯಾಬ್ಲೆಟ್ಸ್ ಐಪಿ) ಮೊದಲಾದ ಔಷಧಿಗಳು, ಕಾಂತಿವರ್ಧಕಗಳನ್ನು ಔಷಧ ವ್ಯಾಪಾರಿಗಳು, ಸಗಟು ಔಷಧ ಮಾರಾಟಗಾರರು, ವೈದ್ಯರು, ಆಸ್ಪತ್ರೆ ಮತ್ತು ನರ್ಸಿಂಗ್ ಹೋಂನವರು ದಾಸ್ತಾನು ಮಾಡುವುದಾಗಲೀ, ಮಾರಾಟ ಮಾಡುವುದಾಗಲೀ ಅಥವಾ ಉಪಯೋಗಿಸುವುದಾಗಲೀ ಮಾಡಬಾರದಂತೆ ಸೂಚಿಸಲಾಗಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
177
Lava Kumar

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು