News Karnataka Kannada
Monday, April 22 2024
Cricket
ಬೆಂಗಳೂರು ನಗರ

ಭಾರತದ ಭಾಷೆಗಳಲ್ಲಿ ಕನ್ನಡ ಅತಿ ಕಳಪೆ ಭಾಷೆ ಎನ್ನುತ್ತಿದೆ ಗೂಗಲ್!!!

Photo Credit :

ಭಾರತದ ಭಾಷೆಗಳಲ್ಲಿ ಕನ್ನಡ ಅತಿ ಕಳಪೆ ಭಾಷೆ ಎನ್ನುತ್ತಿದೆ ಗೂಗಲ್!!!

ಗೂಗಲ್ ನಲ್ಲಿ ಏನೇ ಹುಡುಕಿದರು ಅದು ಸರಿಯಾಗಿಯೇ ತೋರಿಸುತ್ತದೆ ಎನ್ನುವ ವಿಚಾರ ಇಲ್ಲಿ ಸುಳ್ಳಾಗಿದೆ. ಏಕೆಂದರೆ ಭಾರತದ ಭಾಷೆಗಳಲ್ಲಿ ಅತ್ಯಂತ ಕಳಪೆ ಭಾಷೆ ಯಾವುದು ( which is the ugliest language in india) ಎಂದು ಹಾಕಿದರೆ ಅದು ಕನ್ನಡ ಎಂದು ತೋರಿಸುತ್ತದೆ. ಈ ವಿಚಾರ ಇದೀಗ ಎಲ್ಲೆಡೆ ವೈರಲ್ ಆಗಿದ್ದು. 

 

ಇದು ಪ್ರತಿಯೊಬ್ಬ ಕನ್ನಡಿಗನ ಸ್ವಾಭಿಮಾನದ ಪ್ರಶ್ನೆಯಾಗಿದ್ದು, 40 ಕೋಟಿಗೂ ಹೆಚ್ಚು ಮಂದಿಯ ಮಾತೃಭಾಷೆಯಾಗಿರುವ ಕನ್ನಡವನ್ನು ಈ ರೀತಿಯಾಗಿ ಅವಮಾನಿಸಿರುವುದು ಕನ್ನಡಿಗರ ಆಕ್ರೋಶಕ್ಕೆ ಕಾರಣವಾಗಿದೆ. ಇದೀಗ ಕೆಟ್ಟ ಭಾಷೆ ವಿಚಾರ ಗೂಗಲ್ ಸರ್ಚ್ ಪೇಜ್‌ನಲ್ಲಿ ಟ್ರೆಂಡ್ ಕೂಡ ಆಗಿದೆ. ಅಷ್ಟೇ ಅಲ್ಲದೆ, ಇದರ ವಿರುದ್ಧ ಎಲ್ಲರೂ ಪ್ರತಿಕ್ರಿಯಿಸಬೇಕು ಹಾಗೂ ಇದನ್ನು ತಪ್ಪು ಎಂದು ಪ್ರತಿಪಾದಿಸಬೇಕು ಎನ್ನುವ ಒಂದು ವಾಟ್ಸಪ್ ಸ್ಟೇಟಸ್ ಎಲ್ಲೆಡೆ ಹರಿದಾಡುತ್ತಿದ್ದು, ಅಂತೆಯೇ ಸಾವಿರಾರು ಕನ್ನಡಿಗರು ಗೂಗಲ್ ಪೇಜ್‌ನಲ್ಲಿ ಪ್ರದರ್ಶಿತವಾಗಿದ್ದ ತಪ್ಪು ಮಾಹಿತಿ ನೀಡುತ್ತಿದ್ದ debtconsolidationsquad.com ವೆಬ್ ಪುಟವನ್ನು ರಿಪೋರ್ಟ್ ಮಾಡಿದ್ದು , ಕೆಲವೇ ಸಮಯದಲ್ಲಿ ಜನರ ಆಕ್ರೋಶಕ್ಕೆ ಮಣಿದ ಗೂಗಲ್ ವಿವಾದಾಸ್ಪದ ಪುಟವನ್ನು ತೆಗೆದುಹಾಕಿದೆ . 

 

ಇನ್ನು ಭಾರತದಲ್ಲಿ ಪ್ರಸ್ತುತ 21 ಭಾಷೆಗಳನ್ನು ಮುಖ್ಯವಾಗಿ ಅನೇಕ ಮಂದಿ ಬಳಸುತ್ತಿದ್ದು, ಅದರಲ್ಲಿ ಅತಿ ಹೆಚ್ಚು ಜನರು ಬೆಳೆಸುತ್ತಿರುವ ಭಾಷೆಗಳಲ್ಲಿ ಕನ್ನಡ 8 ನೇ ಸ್ಥಾನವನ್ನು ಪಡೆದಿದೆ. ಇಷ್ಟಾಗಿಯೂ, ಕನ್ನಡವನ್ನು ಈ ರೀತಿಯಾಗಿ ಅವಮಾನಿಸಿರುವುದು ಸಹಿಸಲಾಗದ ಸಂಗತಿಯಾಗಿದೆ. ಇನ್ನು ಈ ನಡುವೆ ಗೂಗಲ್ ಗೆ ಈ ವಿಷಯದ ವಿರುದ್ಧವಾಗಿ ನೋಟಿಸ್ ನೀಡುವುದಾಗಿ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಟಿ ಎಂ ನಾಗಾಭರಣ ಹೇಳಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
205

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು