News Karnataka Kannada
Tuesday, April 23 2024
Cricket
ಬೆಂಗಳೂರು ನಗರ

ಭಯೋತ್ಪಾದಕರು ಬಾಲ ಬಿಚ್ಚಿದರೆ ಬುಲ್ಡೋಜರ್ ಹರಿಸಲಾಗುತ್ತದೆ; ಸಿ.ಟಿ.ರವಿ

Bengaluru: Siddaramaiah can't compete on the issue of lies, says CT Ravi
Photo Credit :

ಬೆಂಗಳೂರು : ಹಿಂದೆ ಭಯೋತ್ಪಾದಕರಿಗೆ ಬಿರಿಯಾನಿ ತಿನ್ನಿಸುವ ಕಾಲ ಇತ್ತು. ಈಗ ಬಾಲ ಬಿಚ್ಚಿದರೆ ಬುಲ್ಡೋಜರ್ ಹರಿಸಲಾಗುತ್ತದೆ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಮತ್ತೊಮ್ಮೆ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

ದೇವನಹಳ್ಳಿಯಲ್ಲಿ ನಡೆದ ಬಿಜೆಪಿ ಸಮಾವೇಶದಲ್ಲಿ ಮಾತನಾಡಿದ ಅವರು, ಕಾಶ್ಮೀರದ ಭಯೋತ್ಪಾದಕರಿಗೆ ಬಿರಿಯಾನಿ ಕೊಡುತ್ತಿದ್ದರು. ಮೋದಿ ಸರ್ಕಾರ ಬಂದ ಮೇಲೆ ಇದ್ಯಾವುದು ನಡೆಯುವುದಿಲ್ಲ. ನಮಗೆ ಸುತ್ತಿ ಬಳಸಿ ಮಾತನಾಡಲು ಆಗಲ್ಲ. ಏಕ್ ಮಾರ್ ದೋ ತುಕ್ಡಾ..? ನೇರವಾಗಿ ಮಾತನಾಡಬೇಕು ಎಂದು ಹೇಳಿದರು.

ಸಿದ್ದರಾಮಯ್ಯಗೆ ಕುಂಕುಮ ಇಟ್ಟವರು ಕಂಡರೆ ಭಯ ಆಗುತ್ತದೆಯಂತೆ. ಹಾಗಾದರೆ ಬಾಂಬ್ ಹಾಕಿದವರು ಯಾರು..? ಕುಂಕುಮ ಇಟ್ಟವರು, ಬಾಂಬ್ ಹಾಕಿದ್ರಾ? ಆದರೂ ಕೆಲವರಿಗೆ ಮೋದಿ ಕೊಟ್ಟಿರಿವ ಗ್ಯಾಸ್ ಬೇಕು. ಅಕ್ಕಿ ಬೇಕು ಎಂದು ವ್ಯಂಗ್ಯವಾಡಿದರು.

ರೈತರ ಖಾತೆಗೆ ಹಣ ಸಂದಾಯ ಆಗುತ್ತಿರುವುದು ಬಿಜೆಪಿ ಸರ್ಕಾರ ಬಂದ ಮೇಲೆ. 48 ಕೋಟಿ ಜನರಿಗೆ ಜನಧನ್ ಖಾತೆಗೆ ಹಣ ಹಾಕಿದ್ದು ಮೋದಿ ಸರ್ಕಾರ ಎಂದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12790
NewsKannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು