News Karnataka Kannada
Tuesday, April 23 2024
Cricket
ಬೆಂಗಳೂರು ನಗರ

ಬೆಂಗಳೂರು: ಕೋವಿಡ್ ತೀವ್ರತೆ ಪತ್ತೆಗೆ 45 ವಾರ್ಡ್‌ಗಳಲ್ಲಿ ಕೊಳಚೆ ನೀರು ಪರೀಕ್ಷೆ

Photo Credit :

ಬೆಂಗಳೂರು: ಕೋವಿಡ್ ತೀವ್ರತೆ ಪತ್ತೆಗೆ 45 ವಾರ್ಡ್‌ಗಳಲ್ಲಿ ಕೊಳಚೆ ನೀರು ಪರೀಕ್ಷೆ

ಬೆಂಗಳೂರು, : ನಗರದಲ್ಲಿರುವ ಕೊರೊನಾ ತೀವ್ರತೆ ಪತ್ತೆಗೆ 45 ವಾರ್ಡ್‌ಗಳಲ್ಲಿ ಕೊಳಚೆ ನೀರು ಪರೀಕ್ಷೆ ಮಾಡಲಾಗುತ್ತಿದೆ.ಬೆಂಗಳೂರಿನಲ್ಲಿ ಕೋವಿಡ್ ಎರಡನೇ ಅಲೆ ನಡುವೆ ಸೋಂಕು ಹರಡದಿರಲು ತೀವ್ರ ನಿಗಾವಹಿಸಿರುವ ರಾಜ್ಯ ಸರ್ಕಾರ, ಇದೀಗ ಒಳಚರಂಡಿ, ಕೊಳಚೆನೀರಿನ ಪರೀಕ್ಷೆಗೂ ಮುಂದಾಗಿದೆ.
ಈ ಬಗ್ಗೆ ಮಾಹಿತಿ ನೀಡಿರುವ ಸರ್ಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ರಾಕೇಶ್ ಸಿಂಗ್ ಅವರು, ಮುಂದಿನ ದಿನಗಳಲ್ಲಿ ಯಾವ ಪ್ರದೇಶದಲ್ಲಿ ಕೋವಿಡ್‌ ಪ್ರಕರಣಗಳು ಹೆಚ್ಚಾಗಲಿದೆ ಎಂಬುದನ್ನು ತಿಳಿಯಲು ಆ ಪ್ರದೇಶದ ಕೊಳಚೆ ನೀರನ್ನು ಪರೀಕ್ಷಿಸಲು ನಿರ್ಧರಿಸಲಾಗಿದೆ. ಪ್ರಾರಂಭಿಕ ಹಂತದಲ್ಲಿ ಬಿಬಿಎಂಪಿಯ 45 ವಾರ್ಡ್‌ಗಳಲ್ಲಿ ಈ ಕಾರ್ಯವನ್ನು ಕೈಗೆತ್ತಿಕೊಳ್ಳಲಾಗುತ್ತಿದೆ ಎಂದು ಹೇಳಿದ್ದಾರೆ. ಜಲ ಚಳವಳಿಗಾರ ಮತ್ತು ನಗರ ಯೋಜಕ ವಿಶ್ವನಾಥ್ ಎಸ್ ಅವರು ಮಾತನಾಡಿ ನೀಡಿ, ನೀರನ್ನು ಕೃಷಿಗೆ ಸಹ ಬಳಸುವುದರಿಂದ ತ್ಯಾಜ್ಯ ನೀರಿನ ಅಧ್ಯಯನ ಬಹಳ ಮುಖ್ಯವಾಗಿದೆ ಆದ್ದರಿಂದ, ಈ ಅಧ್ಯಯನವು ಉತ್ತಮ ಆರೋಗ್ಯ ಯೋಜನೆಗೆ ಮಾತ್ರವೇ ಅಲ್ಲದೆ, ಆರ್ಥಿಕ ಬೆಳವಣಿಗೆ ಮತ್ತು ಆಹಾರ ವಲಯಕ್ಕೂ ಸಹಕಾರಿ ಎಂದಿದ್ದಾರೆ.
ತ್ಯಾಜ್ಯ ನೀರು ಪರೀಕ್ಷೆಯನ್ನು ಅತಿ ಕಡಿಮೆ ವೆಚ್ಚದಲ್ಲಿ ಕೈಗೊಳ್ಳಬಹುದಾಗಿದೆ. ಕೋವಿಡ್‌ ಪ್ರಭಾವದ ಮುನ್ನೆಚ್ಚರಿಕೆಯು ಪ್ರಾರಂಭದಲ್ಲಿಯೇ ಸಿಕ್ಕರೆ ಅದಕ್ಕೆ ತಕ್ಕ ಕ್ರಮಗಳನ್ನು ಕೈಗೊಳ್ಳುವುದು ಸುಲಭವಾಗುತ್ತದೆ. ಇದಕ್ಕೆ ನೀತಿಗಳನ್ನು ರೂಪಿಸಲೂ ಅನುಕೂಲವಾಗುತ್ತದೆ. ಪಿಸಿಎಂಎಚ್‌ ರಿಸ್ಟೋರ್‌ ಹೆಲ್ತ್‌ ಅಂಡ್‌ ವೆಲ್‌ನೆಸ್‌, ಅಮೆರಿಕದ ಅಂತರರಾಷ್ಟ್ರೀಯ ಅಭಿವೃದ್ಧಿ ಸಂಸ್ಥೆ (ಯುಎಸ್‌ಎಐಡಿ) ಹಾಗೂ ಸ್ಕಾಲ್ ಫೌಂಡೇಷನ್‌ ಸಹಯೋಗದಲ್ಲಿ ಈ ಕಾರ್ಯವನ್ನು ಕೈಗೆತ್ತಿಕೊಳ್ಳಲಾಗುತ್ತಿದೆ ಎಂದಿದ್ದಾರೆ.
ಬೆಂಗಳೂರಿನ ಶೇ.75 ಜನಸಂಖ್ಯೆಯನ್ನು ಈ ಯೋಜನೆ ಒಳಗೊಳ್ಳಲಿದೆ. 45 ವಾರ್ಡ್‌ಗಳ ಸುಮಾರು 90 ಸ್ಥಳಗಳಲ್ಲಿನ ಕೊಳಚೆ ನೀರನ್ನು ಸಂಗ್ರಹಿಸಿ ಪರೀಕ್ಷೆಗೆ ಒಳಪಡಿಸಲಾಗುತ್ತದೆ. ಈ ಮಾದರಿ ಕಾರ್ಯ ದೇಶದಲ್ಲಿಯೇ ಮೊದಲು ಎಂದು ತಿಳಿಸಿದ್ದಾರೆ. ಈ ನೀರಿನ ಪರೀಕ್ಷೆಯಿಂದ ಕೋವಿಡ್‌ನ ಪ್ರಭಾವ ಎಷ್ಟಿದೆ ಎಂಬುದನ್ನು ತಿಳಿಯಬಹುದು. ಅಲ್ಲದೆ, ಪ್ರಕರಣಗಳು ಹೆಚ್ಚಾಗುವ ಸಾಧ್ಯತೆ ಇರುವ ಪ್ರದೇಶವನ್ನು ಕೋವಿಡ್ ಕ್ಲಸ್ಟರ್‌ಗಳನ್ನಾಗಿ ರೂಪಿಸಬಹುದು. ಇಡೀ ನಗರಕ್ಕೆ ಲಾಕ್‌ಡೌನ್‌ ಘೋಷಿಸುವ ಬದಲು ಸಣ್ಣ ಸಣ್ಣ ಕಂಟೈನ್‌ಮೆಂಟ್‌ ವಲಯಗಳನ್ನಾಗಿಯೂ ಮಾಡಬಹುದಾಗಿದೆ ಎಂದು ಮಾಹಿತಿ ನೀಡಿದ್ದಾರೆ

 

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
145

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು