News Karnataka Kannada
Friday, April 12 2024
Cricket
ಬೆಂಗಳೂರು ನಗರ

ಬೆಂಗಳೂರಿನಲ್ಲಿ ಪ್ರೇಕ್ಷಾಧ್ಯಾನ ಶಿಬಿರ ಆರಂಭ

Camp
Photo Credit : News Kannada

ಬೆಂಗಳೂರು; ಆಧುನಿಕ ಜೀವನ ಶೈಲಿಯ ಒತ್ತಡ, ಮಾನಸಿಕ, ದೈಹಿಕ, ಭಾವನಾತ್ಮಕ ಖಾಯಿಲೆಗಳಿಂದ ಬಳಲುತ್ತಿರುವ ಹಾಗೂ ಆರೋಗ್ಯಪೂರ್ಣ ಜೀವನಕ್ಕಾಗಿ ಪ್ರೇಕ್ಷಾ ಫೌಂಡೇಷನ್ ಬೆಂಗಳೂರಿನ ಆಚಾರ್ಯ ತುಳಸಿ ಮಹಾ ಪ್ರಜ್ಞಾ ಸೇವಾ ಕೇಂದ್ರದಲ್ಲಿ  ಪ್ರೇಕ್ಷಾಧ್ಯಾನ ಶಿಬಿರ ಆರಂಭಿಸಲಾಗಿದೆ.

ಸಮಾಜ ಸೇವಕ ಮಹೇಂದ್ರ ಮುನ್ನೋತ್ ಶಿಬಿರಕ್ಕೆ  ಚಾಲನೆ ನೀಡಿ ಮಾತನಾಡಿ, ಪ್ರೇಕ್ಷಾಧ್ಯಾನ ಕೇವಲ ಆಸನಗಳ ಕಸರತ್ತಲ್ಲ, ಇದು ನಮ್ಮ ಆಲೋಚನೆಗಳು ಮತ್ತು ಪ್ರಜ್ಞೆಯನ್ನು ಶುದ್ದೀಕರಿಸುವ ಅಭ್ಯಾಸ. ಇದರಿಂದ ನಾವು ನಮ್ಮ ಸ್ವಭಾವ, ನಡವಳಿಕೆಯನ್ನು ರೂಪಿಸಿಕೊಳ್ಳಬಹುದು. ಈ ಪ್ರಕ್ರಿಯೆ ನಮ್ಮ ಪ್ರಾಚೀನ ಗ್ರಂಥಗಳು, ಆಧುನಿಕ ವಿಜ್ಞಾನ ಅನುಭವಗಳ ಸಮ್ಮಿಲನವಾಗಿದೆ. ವ್ಯಕ್ತಿ ತನ್ನನ್ನು ತಾನು ಅರಿತುಕೊಳ್ಳುವ ಮತ್ತು ಗುರುತಿಸಿಕೊಳ್ಳಲು ಆತ್ಮಬಲ ಹೆಚ್ಚಿಸಿಕೊಳ್ಳುವ ಅಭ್ಯಾಸವಾಗಿದೆ ಎಂದು  ಹೇಳಿದರು.

ಜೈನಾಚಾರ್ಯ ಮಹಾಪ್ರಜ್ಞಾಜಿ ಅವರು  ಮಾರ್ಗದರ್ಶನ ಮಾಡಿ ಲಕ್ಷಾಂತರ ದೇಶೀಯ ಮತ್ತು ವಿದೇಶೀಯರನ್ನು ಪರಿವರ್ತನೆ ಮಾಡಿದ್ದಾರೆ. ಉತ್ತಮ ಜೀವನಶೈಲಿ ಮೂಲಕ ಬದುಕು ಕಟ್ಟಿಕೊಳ್ಳುವಂತೆ ಮಾಡಿದ್ದಾರೆ. ಇದೇ ಪ್ರಥಮ ಬಾರಿಗೆ ಬೆಂಗಳೂರು ನಗರದ ನಿವಾಸಿಗಳಿಗೆ ಮಾನಸಿಕ ಉದ್ವೇಗದಿಂದ ಮುಕ್ತಿ, ದೈಹಿಕ ಶಕ್ತಿಯ ಪರಿವರ್ತನೆ ಮತ್ತು ಭಾವನೆಗಳನ್ನು ಉನ್ನತೀಕರಣ ಮಾಡಿಕೊಳ್ಳಲು ಶಿಬಿರ ಸಹಕಾರಿಯಾಗಿದೆ ಎಂದರು.

 ಪ್ರೇಕ್ಷಾ ಫೌಂಡೇಶನ್ ಸಂಯೋಜಕಿ ವೀಣಾ ಬೆಡ್, ಗಿರಿಯಾಸ್ ನ  ಕನ್ಯಾಲಾಲ್ ಜೀ ಪ್ರೇಕ್ಷಾ ಪೌಂಡೇಶನ್ ಅಧ್ಯಕ್ಷ ಅಶೋಕ ಚಂಡಾಲ್ಯ, ಮುಖ್ಯ ತರಬೇತಿದಾರ ರಾಜೇಂದ್ರ ಮೋದಿ, ಮತ್ತಿತರರು ಹಾಜರಿದ್ದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
177
Lava Kumar

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು