News Karnataka Kannada
Tuesday, April 23 2024
Cricket
ಬೆಂಗಳೂರು ನಗರ

ಬೆಂಗಳೂರಿನಲ್ಲಿ ಆಫ್ಟರ್ ಪಾರ್ಟಿ ಮೇಲೆ ಸಿಸಿಬಿ ದಾಳಿ; ಯುವಕರು, ಯುವತಿಯರು ವಶಕ್ಕೆ

Pub Attack
Photo Credit :

ಬೆಂಗಳೂರು: ಬೆಂಗಳೂರಿನಲ್ಲಿ ಆಫ್ಟರ್ ಪಾರ್ಟಿ ಮೇಲೆ ಸಿಸಿಬಿ ಪೊಲೀಸರು ದಾಳಿ ನಡೆಸಿದ್ದಾರೆ. ಮಾರತಹಳ್ಳಿ ಔಟರ್ ರಿಂಗ್ ರಸ್ತೆಯ ಹೋಟೆಲ್ ಮೇಲೆ ದಾಳಿ ನಡೆಸಲಾಗಿದೆ.

ಐಷಾರಾಮಿ ಹೋಟೆಲ್ ನಲ್ಲಿ ಭರ್ಜರಿ ಪಾರ್ಟಿ ನಡೆಯುತ್ತಿತ್ತು.ಬೆಳಗಿನ ಜಾವ 3.30 ರವರೆಗೂ ಪಾರ್ಟಿ ನಡೆಯುತ್ತಿದ್ದು, ದಕ್ಷಿಣ ಆಫ್ರಿಕಾ ಮೂಲದ ವ್ಯಕ್ತಿಯೊಬ್ಬ ಇದನ್ನು ಆಯೋಜಿಸಿದ್ದ.

ದಾಳಿಯ ವೇಳೆ 64 ಯುವಕರು ಮತ್ತು 24 ಯುವತಿಯರು ಪತ್ತೆಯಾಗಿದ್ದಾರೆ. ಪಾರ್ಟಿಯಲ್ಲಿ ಉತ್ತರ ಭಾರತದ ಮೂಲದ ಯುವತಿಯರೇ ಹೆಚ್ಚಾಗಿದ್ದರು.

ಡ್ರಗ್ಸ್ ಸೇವಿಸಿ ಪಾರ್ಟಿ ಮಾಡಿರುವ ಅನುಮಾನದ ಹಿನ್ನೆಲೆಯಲ್ಲಿ ಮೆಡಿಕಲ್ ಚೆಕಪ್ ಮಾಡಿಸಲು ಸಿಸಿಬಿ ಪೊಲೀಸರು ಮುಂದಾಗಿದ್ದಾರೆ.

ಹೆಚ್‌ಎಎಲ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ. ದಾಳಿಯವೇಳೆ ಸಿಸಿಬಿ ಅಧಿಕಾರಿಗಳೊಂದಿಗೆ ಆರೋಪಿಗಳು ವಾಗ್ವಾದ ನಡೆಸಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12795
News Karnataka Kannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು