News Karnataka Kannada
Monday, April 15 2024
Cricket
ಬೆಂಗಳೂರು ನಗರ

ಬಡ ರೋಗಿಗಳಿಗೆ ಬೆಡ್‌ ನೀಡದ ಖಾಸಗೀ ಆಸ್ಪತ್ರೆಗಳ ಕಳ್ಳಾಟಕ್ಕೆ ಬಿಬಿಎಂಪಿ ಲಗಾಮು

Photo Credit :

 ಬಡ ರೋಗಿಗಳಿಗೆ ಬೆಡ್‌ ನೀಡದ ಖಾಸಗೀ ಆಸ್ಪತ್ರೆಗಳ ಕಳ್ಳಾಟಕ್ಕೆ ಬಿಬಿಎಂಪಿ  ಲಗಾಮು

ಬೆಂಗಳೂರು: ಹಾಸಿಗೆ ಕೊಡದೆ ಕಳ್ಳಾಟ ಆಡೋ ಖಾಸಗಿ ಆಸ್ಪತ್ರೆಗಳಿಗೆ ಬಿಬಿಎಂಪಿ ಚಕ್ರವ್ಯೂಹ ಸೃಷ್ಟಿ ಮಾಡಿದೆ. ಬೆಡ್ ಇಲ್ಲ ಅನ್ನೋ ಖಾಸಗಿ‌ ಆಸ್ಪತ್ರೆಗಳ ಮೇಲೆ ಪಾಲಿಕೆ ಹಾಗೂ ಸರ್ಕಾರ ಹದ್ದಿನ ಕಣ್ಣಿಟ್ಟಿದೆ.‌ ವಿವಿಐಪಿಗಳಿಗೆ ಮಾತ್ರ, ಬಡವರಿಗೆ ಬೆಡ್ ಇಲ್ಲ ಎನ್ನುವ ಖಾಸಗಿ ಆಸ್ಪತ್ರೆಗಳ ಕಳ್ಳಾಟಕ್ಕೆ ಇನ್ಮುಂದೆ ಬ್ರೇಕ್ ಬೀಳಲಿದೆ.
ಕೊರೋನಾ ಎರಡನೇ ಅಲೆ ಆರಂಭದಿಂದಲೇ ಖಾಸಗಿ ಆಸ್ಪತ್ರೆಗಳು ಬೆಡ್ ನೀಡದೆ ಕಳ್ಳಾಟ ಆಡಿಕೊಂಡು ಬರ್ತಿದೆ. ಸರ್ಕಾರದ ಯಾವ ಮಾತಿಗೂ ಕವಡೆ ಕಾಸಿನ ಬೆಲೆ ಕೊಡದೆ ಆನೆ ನಡೆದಿದ್ದೇ ದಾರಿ ಎಂಬಂತೆ ಬರ್ತಿಸುತ್ತಿದೆ. ಆದರೀಗ ಬೆಡ್ ಇಲ್ಲ ಅನ್ನೋ ಖಾಸಗಿ ಆಸ್ಪತ್ರೆಗಳ ಅಸಲಿಯತ್ತು ಅನಾವರಣ ಮಾಡಲು ಸರ್ಕಾರದ ಸೂಚನೆ ಮೇರೆಗೆ ಬೃಹತ್ ಮಹಾನಗರ ಪಾಲಿಕೆ ಮಹತ್ವದ ಹೆಜ್ಜೆ ಮುಂದಿಟ್ಟಿದೆ. ಹೌದು, ಬೆಂಗಳೂರಿನಲ್ಲಿರುವ ಖಾಸಗಿ ಆಸ್ಪತ್ರೆಗಳಲ್ಲಿ CHD ಅಂದ್ರೆ Citizen Help Desk ಸ್ಥಾಪಿಸಲು ಹೊರಟಿದೆ.
ಈ ನಾಗರೀಕ ಸೇವಾ ಕೇಂದ್ರದ ಮೂಲಕ ಸೋಂಕಿತರಿಗೆ ಬೇಕಾದ ಮಾಹಿತಿಯನ್ನು ಈ CHD ಸಿಬ್ಬಂದಿಗಳು ನೀಡಲಿದ್ದಾರೆ. ಸದ್ಯಕ್ಕೆ ಪ್ರಾಯೋಗಿಕವಾಗಿ ವಿಕ್ರಂ ಆಸ್ಪತ್ರೆ, ಅಪ್ಪೊಳೊ ಆಸ್ಪತ್ರೆ, ಕೊಲಂಬಿಯಾ ಏಷಿಯಾ, ರಾಮಯ್ಯ ಆಸ್ಪತ್ರೆ ಸೇರಿದಂತೆ 25 ಆಸ್ಪತ್ರೆಗಳಲ್ಲಿ ಸದ್ಯಕ್ಕೆ ಸ್ಥಾಪನೆ ಮಾಡಲು ಮುಂದಾಗಿದೆ. ಈ ಬಗ್ಗೆ ಮಾತನಾಡಿದ CHD ಮುಖ್ಯಸ್ಥ ಗಿರೀಶ್, ಖಾಸಗಿ ಆಸ್ಪತ್ರೆಗಳು ಬೆಡ್ ಇದ್ರೂ ಇಲ್ಲಾಂತ ಸುಳ್ಳು ಹೇಳ್ತಿತ್ತು. ಆದ್ರೀಗ ನಾವೇ ಖುದ್ದಾಗಿ ಆಸ್ಪತ್ರೆಗಳಿಗೆ ಭೇಟಿಯಾಗಿ ಹಾಸಿಗೆ ಎಷ್ಟು ಖಾಲಿ ಇದೆ, ಎಷ್ಟು ಭರ್ತಿಯಾಗಿದೆ ಅಂತ ಮಾಹಿತಿ ಪಡೆದು ಬಿಬಿಎಂಪಿ ವಾರ್ ರೂಂ ಗೆ ನೀಡಲಿದ್ದೇವೆ ಎಂದು ಹೇಳಿದರು.
• ನಗರದಲ್ಲಿನ ಪ್ರತಿ ಖಾಸಗಿ ಆಸ್ಪತ್ರೆಯಲ್ಲಿ CHD ಸ್ಟಾಲ್ ಹಾಕುವುದು• ಆಸ್ಪತ್ರೆಯ ಕೊರೋನಾ‌ ಸ್ಥಿತಿಗತಿ ಬಗ್ಗೆ ಮಾಹಿತಿ ಖುದ್ದಾಗಿ ಪಡೆಯುವುದು
• ಎಷ್ಟು ಹಾಸಿಗೆ ಖಾಲಿ ಇದೆ, ಭರ್ತಿಯಾಗಿದೆ ಎಂದು ದಾಖಲಾತಿ ಮಾಡುವುದು • ಪ್ರತಿ ಒಂದು ತಾಸಿಗೆ ಆಸ್ಪತ್ರೆಯಿಂದ ಮಾಹಿತಿ ಪಡೆದು ವಾರ್ ರೂಂ ಗೆ ಅಪ್ಡೇಟ್ ಮಾಡುವುದು• ಹೀಗೆ ಪಡೆದ ಮಾಹಿತಿಯನ್ನು ಬಿಬಿಎಂಪಿ ಪಾಲಿಕೆ ವಾರ್ ರೂಂ ಗೆ ರವಾನಿಸುವುದು• ಗೂಗಲ್ ಶೀಟ್ ಮೂಲಕ ಮಾಹಿತಿ ದಾಖಲಿಸಿ, ಆರೋಗ್ಯ ಇಲಾಖೆಗೆ (ಸರ್ಕಾರ) ಕೊಡುವುದು
CHDನಿಂದ ಆಗುವ ಉಪಯೋಗವೇನು.!?
• ಬೆಡ್ ಸಿಗದೆ ಸೋಂಕಿತರು ಪರದಾಡುವುದು ತಪ್ಪುತ್ತದೆ • ಸೋಂಕಿತರಿಗೆ ನಗರದ ಯಾವ ಆಸ್ಪತ್ರೆಯಲ್ಲಿ ಹಾಸಿಗೆ ಖಾಲಿ ಇದೆ ಎಂದು ಆನ್ ಸ್ಪಾಟ್ ಮಾಹಿತಿ• ICU, ICU (V), HDU ಹೀಗೆ ಯಾವ ಹಾಸಿಗೆ ಸೋಂಕಿತರಿಗೆ ಅಗತ್ಯ ಎಂದು ತಿಳಿಯುವುದು• ಆಸ್ಪತ್ರೆ ಒಳಗೆ ಚಿಕಿತ್ಸೆ ಪಡೆಯುತ್ತಿರುವ ಸೋಂಕಿತರ ಪಿನ್ ಟು ಪಿನ್‌ ಡಿಟೇಲ್ಸ್ ಸಂಬಂಧಿಕರಿಗೆ CHD ಸಿಬ್ಬಂದಿಗಳು ಕೊಡಲಿದ್ದಾರೆ• ಆಸ್ಪತ್ರೆಯೊಳಗೆ ಚಿಕಿತ್ಸೆ ಪಡೆಯುವ ಸೋಂಕಿತರಿಗೆ ಊಟ ಹಾಗೂ ಇನ್ನಿತರ ಅಗತ್ಯ ವಸ್ತುಗಳನ್ನು ತಲುಪಿಸಲು ಸಹಾಯ• ಸೋಂಕಿತರ ಆರೋಗ್ಯದ ಕುರಿತಾದ ಹೆಲ್ತ್ ರಿಪೋರ್ಟ್ ಸಂಬಂಧಿಕರಿಗೆ ಈ ಡೆಸ್ಕ್ ಮೂಲಕ‌ ಸಿಗಲಿದೆ• BU ನಂಬರ್ ಜನರೇಟ್ ಮಾಡುವುದು ಹೇಗೆ ಮತ್ತು ಮಾಡಿಕೊಡುವುದು
CHD ಟೀಂ ನಲ್ಲಿ • ಒಂದು ತಂಡದಲ್ಲಿ 9 ಜನ• 3 ಜನರಂತೆ ಶಿಫ್ಟ್ ನಲ್ಲಿ ಕೆಲಸ• 24*7 ಮಾದರಿಯಲ್ಲಿ ಸೇವೆ• ಹಿರಿಯ ತಂತ್ರಜ್ಞದರಿಂದ ಸಿಬ್ಬಂದಿಗಳಿಗೆ ತರಬೇತಿ• ಅಗಾಗ್ಗೆ ಆರೋಗ್ಯ ತಪಾಸಣೆ• ಕನಿಷ್ಠ ಇಬ್ಬರು ಮಹಿಳೆಯರನ್ನು ಒಳಗೊಂಡ ತಂಡ
ಈ ಮೂಲಕ ಖಾಸಗಿ ಆಸ್ಪತ್ರೆಗಳ ಸುತ್ರ ಚಕ್ರವ್ಯೂಹ ಸೃಷ್ಟಿಸಿ, ವಾಸ್ತವ ಚಿತ್ರಣವನ್ನು ಅರಿತು ಸಾಮಾನ್ಯರಿಗೆ ಹಾಸಿಗೆ ಒದಗಿಸಲು ಸರ್ಕಾರ ಹಾಗೂ ಪಾಲಿಕೆ ಮುಂದಾಗಿದೆ. ಈ ಮೂಲಕವಾದರೂ ಬೆಡ್ ಹಾಗೂ ಸೂಕ್ತ ಚಿಕಿತ್ಸೆ ಸಿಗದೆ ಪರದಾಡುತ್ತಿರುವ ಸೋಂಕಿತರಿಗೆ ಹಾಗೂ ಅವರ ಕುಟುಂಬಗಳಿಗೆ ಸಮರ್ಪಕ ಸೌಲಭ್ಯಗಳು ಸಿಗಲಿ ಎಂದು ಆಶಿಸೋಣ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
145

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು