News Karnataka Kannada
Thursday, April 25 2024
Cricket
ಬೆಂಗಳೂರು ನಗರ

ಪ್ರವಾಸಿ ತಾಣ ವೀಕ್ಷಣೆಗೆ ಬೆಂಗಳೂರು ದರ್ಶಿನಿ 

Bus
Photo Credit :

ಬೆಂಗಳೂರು: ಬೆಂಗಳೂರಿನಲ್ಲಿ ಏ.24 ರಿಂದ ಮೇ 5 ರವರೆಗೆ ಆಯೋಜಿಸಿರುವ ಖೇಲೋ ಇಂಡಿಯಾ ಯುನಿವರ್ಸಿಟಿ ಗೇಮ್ಸ್ -2021 ರಾಷ್ಟ್ರೀಯ ಕ್ರೀಡಾಕೂಟಕ್ಕೆ ದೇಶದ ವಿವಿಧ ರಾಜ್ಯಗಳಿಂದ ಆಗಮಿಸುವ ಕ್ರೀಡಾಪಟುಗಳಿಗೆ ಪ್ರೇಕ್ಷಣೀಯ ಸ್ಥಳಗಳನ್ನು ವೀಕ್ಷಿಸಲು ಅನುಕೂಲವಾಗುವಂತೆ “ವಿಶೇಷ ಬೆಂಗಳೂರು ದರ್ಶಿನಿ” ಸೇವೆ ಒದಗಿಸಲಾಗಿದೆ.

ಬೆಂಗಳೂರು ದರ್ಶಿನಿ-01 ಮಾರ್ಗಸಂಖ್ಯೆಯಿಂದ ಬೆಳಿಗ್ಗೆ 9ಗಂಟೆಗೆ ಕೆಂಪೆಗೌಡ ಬಸ್ ನಿಲ್ದಾಣದಿಂದ ಹೊರಟು ಇಸ್ಕಾನ್ ದೇವಸ್ಥಾನ, ವಿಧಾನಸೌಧ, ಗವಿಗಂಗಾಧರೇಶ್ವರ ದೇವಸ್ಥಾನ, ದೊಡ್ಡ ಗಣಪತಿ ದೇವಸ್ಥಾನ, ಲಾಲ್ ಬಾಗ್, ನ್ಯಾಷನಲ್ ಗ್ಯಾಲರಿ ಆಫ್ ಮಾಡರ್ನ್ ಆರ್ಟ್, ಸರ್. ಎಂ. ವಿಶ್ವೇಶ್ವರಯ್ಯ ಮ್ಯೂಸಿಯಂ, ಕಬ್ಬನ್ ಪಾರ್ಕ್ ವೀಕ್ಷಿಸಿ ಕೆಂಪಗೌಡ ಬಸ್ ನಿಲ್ದಾಣಕ್ಕೆ ಹಿಂದಿರುಗಲಾಗುವುದು. ಇದಕ್ಕೆ ತಗಲುವ ಪ್ರಯಾಣ ದರ ಪ್ರತಿ ಆಸನಕ್ಕೆ ರೂ. 420 ಪ್ರಯಾಣ ದರ ನಿಗದಿಪಡಿಸಲಾಗಿದೆ.

ಬೆಂಗಳೂರು ದರ್ಶಿನಿ-02 ಮಾರ್ಗ ಸಂಖ್ಯೆಯಿಂದ ಬೆಳಿಗ್ಗೆ  8.40 ಗಂಟೆಗೆ ಆರ್ಟ್ ಆಫ್ ಲಿವಿಂಗ್, (ರವಿಶಂಕರ ಆಶ್ರಮ) ಕನಕಪುರ ರಸ್ತೆಯಿಂದ ಹೊರಟು ಗವಿಗಂಗಾಧರೇಶ್ವರ ದೇವಸ್ಥಾನ, ದೊಡ್ಡ ಗಣಪತಿ ದೇವಸ್ಥಾನ, ಇಸ್ಕಾನ್ ದೇವಸ್ಥಾನ, ವಿಧಾನಸೌಧ, ಲಾಲ್ ಬಾಗ್, ಸರ್.ಎಂ.ವಿಶೇಶ್ವರಯ್ಯ ಮ್ಯೂಸಿಯಂ ವೀಕ್ಷಿಸಿ  ಆರ್ಟ್ ಆಫ್ ಲಿವಿಂಗ್ ಗೆ ಹಿಂದಿರುಗಲಾಗುವುದು. ಇದಕ್ಕೆ ತಗಲುವ ಪ್ರಯಾಣ ವೆಚ್ಚ ಪ್ರತಿ ಆಸನಕ್ಕೆ ರೂ.500 ನಿಗದಿಪಡಿಸಲಾಗಿದೆ.

ಬೆಂಗಳೂರು ದರ್ಶಿನಿ-03 ಮಾರ್ಗ ಸಂಖ್ಯೆಯಿಂದ ಬೆಳಿಗ್ಗೆ 8.30 ಗಂಟೆಗೆ ಜೈನ್ ಕಾಲೇಜ್ ಕ್ಯಾಂಪಸ್, ಕನಕಪುರ ರಸ್ತೆಯಿಂದ ಹೊರಟು ಗವಿಗಂಗಾಧರೇಶ್ವರ ದೇವಸ್ಥಾನ, ದೊಡ್ಡ ಗಣಪತಿ ದೇವಸ್ಥಾನ, ವಿಧಾನಸೌಧ, ಸರ್.ಎಂ.ವಿಶೇಶ್ವರಯ್ಯ ಮ್ಯೂಸಿಯಂ ಕಬ್ಬನ್ ಪಾರ್ಕ್, ಲಾಲ್ ಬಾಗ್ ವೀಕ್ಷಿಸಿ ಜೈನ್ ಕಾಲೇಜ್ ಕ್ಯಾಂಪಸ್, ಗೆ ಹಿಂದಿರುಗಲಾಗುವುದು. ಇದಕ್ಕೆ ತಗಲುವ ಪ್ರಯಾಣ ವೆಚ್ಚ ಪ್ರತಿ ಆಸನಕ್ಕೆ ರೂ. 600 ನಿಗದಿಪಡಿಸಲಾಗಿದೆ.

ಒಂದೇ ಸ್ಥಳದಿಂದ 15ಕ್ಕಿಂತ ಹೆಚ್ಚು ಪ್ರಯಾಣಿಕರು ಆಸನಗಳನ್ನು ಕಾಯ್ದರಿಸಿದ್ದಲ್ಲಿ ಪ್ರಯಾಣಿಕರನ್ನು ಕಾಯ್ದರಿಸಿದ ಸ್ಥಳಗಳಿಂದ ಹತ್ತಿಸಿಕೊಂಡು ವೀಕ್ಷಣೆ ನಂತರ ಅದೇ ಸ್ಥಳದಲ್ಲಿ ಇಳಿಸಲು ವ್ಯವಸ್ಥೆ ಕಲ್ಪಿಸಲಾಗಿದೆ ಎಂದು ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ ತಿಳಿಸಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
177
Lava Kumar

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು