News Karnataka Kannada
Monday, April 15 2024
Cricket
ಬೆಂಗಳೂರು ನಗರ

ಪ್ರತಿ ಚದರ ಕಿ. ಮೀಗೆ 300 ಕೋವಿಡ್ ಪ್ರಕರಣಗಳು ಪತ್ತೆ

Photo Credit :

ಪ್ರತಿ ಚದರ ಕಿ. ಮೀಗೆ 300 ಕೋವಿಡ್ ಪ್ರಕರಣಗಳು ಪತ್ತೆ

ಬೆಂಗಳೂರು : ಬೆಂಗಳೂರಲ್ಲೀಗ ಪ್ರತಿ ಚದರ ಕಿ.ಮೀಗೆ 300 ಕೋವಿಡ್ -19 ಪ್ರಕರಣಗಳಿವೆ . ಮೇ ಎರಡನೇ ವಾರದ ಹೊತ್ತಿಗೆ ಈ ಪ್ರಮಾಣ ಇನ್ನಷ್ಟು ಹೆಚ್ಚುವ ಸಾಧ್ಯತೆಯಿದೆ ಎಂಬ ಮಾಹಿತಿ ಈಗ ಎಲ್ಲೆಡೆ ಹರಿದಾಡುತ್ತಿದೆ. 

 

ಕೋವಿಡ್ -19 ರೋಗಿಗಳ ಪ್ರಾದೇಶಿಕ ಸಾಂದ್ರತೆ ಆಧರಿಸಿ ಜೀವನ್ ರಕ್ಷಾ ಯೋಜನೆ ಸಂಗ್ರಹಿಸಿರುವ ಅಂಕಿ ಅಂಶಗಳಿಂದ ಈ ಮಾಹಿತಿ ಬಹಿರಂಗವಾಗಿದೆ . ಸಾಂಕ್ರಾಮಿಕ ಪರಿಸ್ಥಿತಿಯಲ್ಲಿ ಜನಸಾಂದ್ರತೆ ಹೆಚ್ಚಿರುವ ನಗರಗಳಲ್ಲಿ ಪಾಸಿಟಿವಿಟಿ ದರ ಹೆಚ್ಚಿದೆ . ಪ್ರಸ್ತುತ ಪರಿಸ್ಥಿತಿಯಲ್ಲಿ ರಾಜ್ಯದ ಕೋವಿಡ್ -19 ಪ್ರಕರಣಗಳಲ್ಲಿ ಬೆಂಗಳೂರು ಒಂದರಲ್ಲಿಯೇ ಸುಮಾರು ಶೇ .50 ರಷ್ಟು ಪ್ರಕರಣಗಳಿವೆ ಎಂದು ಜೀವನ್ ರಕ್ಷಾ ಯೋಜನಾಧಿಕಾರಿ ಮೈಸೂರು ಸಂಜೀವ್ ತಿಳಿಸಿದ್ದಾರೆ .

 

 ಜನಸಾಂದ್ರತೆ ಹೆಚ್ಚಿರುವ ಕಾರಣಕ್ಕೆ ಬೆಂಗಳೂರಿನಲ್ಲಿ ಪ್ರಕರಣಗಳು ಹೆಚ್ಚಾಗುತ್ತಿವೆ . ಪಾಸಿಟಿವಿಟಿ ದರ ಶೇ .20 ರಷ್ಟಿರುವುದಕ್ಕೆ ಜನಸಾಂದ್ರತೆಯೇ ಕಾರಣ ಎಂದು ರಾಜ್ಯ ಕೋವಿಡ್ -19 ಟೆಸ್ಟಿಂಗ್ ನೋಡಲ್ ಅಧಿಕಾರಿ ಡಾ.ಸಿ.ಎನ್ , ಮಂಜುನಾಥ್ ಹೇಳಿದ್ದಾರೆ .

 

 ರಾಜ್ಯಸರ್ಕಾರ ನಡೆಸಿರುವ ಆಧಾರ್ ನೋಂದಣಿ ಪ್ರಕಾರ ಬೆಂಗಳೂರು 2.196 ಚದರ ಕಿಲೋ ಮೀಟರ್ ಭೂ ಪ್ರದೇಶವಿದ್ದು , 1,06,40,064 ಜನಸಂಖ್ಯೆಯನ್ನು ಹೊಂದಿದೆ . ಶನಿವಾರ ಬೆಂಗಳೂರು ಒಂದರಲ್ಲಿಯೇ 17,342 ಹೊಸ ಕೋವಿಡ್ -19 ಪ್ರಕರಣಗಳು , 149 ಸಾವು ಪ್ರಕರಣಗಳು ವರದಿಯಾಗಿವೆ . ರಾಜ್ಯದಲ್ಲಿ ಈಗಾಗಲೇ ಸಕ್ರಿಯ ಪ್ರಕರಣಗಳ ಸಂಖ್ಯೆ 2 ಲಕ್ಷ ಗಡಿ ದಾಟಿದೆ ಎಂದು ವರದಿಗಳು ತಿಳಿಸುತ್ತವೆ. 

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
205

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು