News Karnataka Kannada
Monday, April 22 2024
Cricket
ಬೆಂಗಳೂರು ನಗರ

ಪಿಎಸ್ಐ ನೇಮಕಾತಿ ಅಕ್ರಮ ವಿಚಾರ: ಕಾಂಗ್ರೆಸ್ ಮುಖಂಡರ ಪತ್ರಿಕಾಗೋಷ್ಠಿ

Kpcc
Photo Credit :

ಹೆಚ್.ಎಂ ರೇವಣ್ಣ:

ಪಿಎಸ್ಐ ನೇಮಕಾತಿ ಅಕ್ರಮದಲ್ಲಿ ಭಾಗಿಯಾಗಿರುವವರ ವಿಚಾರಣೆ ಜತೆಗೆ ಈ ಇಲಾಖೆಯ ಅಧಿಕಾರಿಗಳ ಕೈವಾಡದ ಬಗ್ಗೆಯೂ ತನಿಖೆ ಆಗಬೇಕು ಎಂದುದು ನಮ್ಮ ಒತ್ತಾಯ. ಈ ಅಕ್ರಮದಲ್ಲಿ ಇಲಾಖೆ ಅಧಿಕಾರಿಗಳ ಹೊಣೆ ಇಲ್ಲವೇ ಎಂಬುದು ನಮ್ಮ ಪ್ರಶ್ನೆ.

ಎಡಿಜಿಪಿ ಅಧಿಕಾರಿ ವರ್ಗಾವಣೆ ದೊಡ್ಡ ವಿಚಾರವಲ್ಲ. ಇವುಗಳನ್ನು ನೋಡಿದರೆ ಈ ಅಕ್ರಮದಲ್ಲಿ ಮೇಲಿಂದ ಕೆಳಗಿನವರೆಗೆ ಎಲ್ಲರ ಕೈವಾಡ ಇರುವುದು ತಿಳಿಯುತ್ತದೆ. ಇಲ್ಲಿ ತಪ್ಪು ಮಾಡಿದವರಿಗೆ ಶಿಕ್ಷೆ ಆಗಿ, ತಪ್ಪು ಮಾಡದವರಿಗೆ ಅನ್ಯಾಯ ಆಗುವುದನ್ನು ನೋಡಬೇಕು.

ಸಿಐಡಿ ಅವರು ಮಾಗಡಿ ತಾಲೂಕಿನ ಅಭ್ಯರ್ಥಿ ದರ್ಶನ್ ಗೌಡ ಎಂಬಾತನಿಗೆ ವಿಚಾರಣೆಗೆಗೆ ನೊಟೀಸ್ ಜಾರಿ ಮಾಡಿ, ಆತನನ್ನು ಬಿಡುಗಡೆ ಮಾಡಲಾಗಿದೆ. ಈ ಸಂದರ್ಭದಲ್ಲಿ ಆತ ಮುಖ್ಯ ಆರೋಪಿಯಾಗಿದ್ದು, ಈ ಸರ್ಕಾರದಲ್ಲಿ ಹೆಚ್ಚಿನ ತಾಕತ್ತು ಇರುವ ವ್ಯಕ್ತಿ ಎಂದರೆ ಆ ಸಚಿವರೇ ಎಂದು ನಮ್ಮ ತಾಲೂಕಿನವರೆಲ್ಲ ಭಾವಿಸಿದ್ದು, ಅವರು ಈ ವಿಚಾರದಲ್ಲಿ ತಮ್ಮ ತಾಕತ್ತು ಪ್ರದರ್ಶಿಸಲಿ.

ಬಂಧಿತನಾಗಿದ್ದ ಅಭ್ಯರ್ಥಿ ಬಿಡುಗಡೆ ಮಾಡಿಸಿದವರು ಯಾರು? ಈ ಗ್ರಾಮ ಹಾಗೂ ಅಕ್ಕಪಕ್ಕದ ಗ್ರಾಮದಲ್ಲಿ ಸತೀಶ್ ಎಂಬುವವರಿಗೆ ಹಣ ನೀಡಿರುವ ಬಗ್ಗೆ ಮಾತನಾಡಿದ್ದು, ಈತ ಸಚಿವರೊಬ್ಬರ ಸಹೋದರನಾಗಿದ್ದಾರೆ.

ರಾಜ್ಯದಲ್ಲಿ ಗಂಡಸ್ತನದ ಸವಾಲು ಹಾಕಿದವರು, ಸಹಾಯಕ ಪ್ರಾಧ್ಯಾಪಕ ಹುದ್ದೆ ನೇಮಕಾತಿ ಅಕ್ರಮದಲ್ಲಿ ಈಗ ಕೆಲವರು ಬಂಧನವಾಗಿದ್ದಾರೆ. 17 ಸಾವಿರದ ಲ್ಯಾಪ್ ಟಾಪ್ ಅನ್ನು 28 ಸಾವಿರಕ್ಕೆ ಖರೀದಿ ಮಾಡಿದ್ದ ಶಿಕ್ಷಣ ಸಚಿವರಾಗಿದ್ದಾರೆ.

ಈ ಪ್ರಕರಣದಲ್ಲಿ ಉನ್ನತ ಮಟ್ಟದ ತನಿಖೆ ಆಗದಿದ್ದರೆ ಈ ಪ್ರಕರಣವನ್ನು ಮುಚ್ಚಿ ಹಾಕುತ್ತಾರೆ.

ವಿ.ಎಸ್ ಉಗ್ರಪ್ಪ:

ನ ಭೂತೋ ನ ಭವಿಷ್ಯತಿ ಎನ್ನುವ ಹಾಗೆ, ದೇಶದ ಇತಿಹಾಸದಲ್ಲಿ ಇಂದೆಂದೂ ಕಾಣದಂತೆ ಭ್ರಷ್ಟಾಚಾರ ನಡೆಯುತ್ತಿದೆ. ಪ್ರಧಾನ ಮಂತ್ರಿಗಳು ನಾ ಖಾವೂಂಗಾ, ನಾ ಖಾನೇದೂಂಗಾ ಎಂದು ಹೇಳುತ್ತಾರೆ. ಮೋದಿ ಎಲ್ಲಿದ್ದೀಯಪ್ಪಾ?

ಇಂದು ನಿಮ್ಮದೇ ಪಕ್ಷದ ಯತ್ನಾಳ್ ಅಅವರು ಸ್ಪಷ್ಟವಾಗಿ ಹೇಳಿದ್ದು, ಪಿಎಸ್ಐ ಮಾತ್ರವಲ್ಲ, ಕೆಪಿಎಸ್ ಸಿ ಹಾಗೂ ಇತರೆ ಇಲಾಖೆ ನೇಮಕಾತಿಯಲ್ಲಿ ಭ್ರಷ್ಟಾಚಾರ ನಡೆದಿದೆ ಎಂದು ಸಾರ್ವಜನಿಕವಾಗಿ ಹೇಳಿದ್ದಾರೆ. ಪ್ರಧಾನಮಂತ್ರಿಗಳು ಈ ವಿಚಾರದಲ್ಲಿ ನಿದ್ರೆ ಮಾಡುತ್ತಿದ್ದಾರೋ? ಎಚ್ಛೆತ್ತು ಕ್ರಮ ಕೈಗೊಳ್ಳಲು ಹೊರಟಿದ್ದಾರೋ?

ಇನ್ನು 40% ಕಮಿಷನ್ ವಿಚಾರವಾಗಿ ಕೆಂಪಣ್ಣ ಅವರು ಪ್ರಧಾನಿಗಳಿಗೆ ಪತ್ರ ಬರೆದು ಒಂದು ವರ್ಷಗಳೇ ಕಳೆದಿದ್ದು, ಸಂತೋಷ್ ಪಾಟೀಲ್ ಕೂಡ ಪತ್ರ ಬರೆದು ಆತ್ಮಹತ್ಯೆ ಮಾಡಿಕೊಂಡರೂ ಪ್ರಧಾನಿಗಳು ಎಚ್ಛೆತ್ತುಕೊಂಡಿಲ್ಲ. ಅಲ್ಲಿಗೆ ಪ್ರಧಾನಮಂತ್ರಿಗಳ ಕಚೇರಿಯಿಂದಲೂ ಭ್ರಷ್ಟಾಚಾರಕ್ಕೆ ಪಾಲನೆ ಪೋಷಣೆ ಆಗುತ್ತಿರುವ ಸಂಶಯವಿದೆ.

ಯತ್ನಾಳ್ ಅವರು ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ, ಕೆಪಿಎಸ್ ಸಿ ಸದಸ್ಯರಾಗಲು, 5, 10 ಕೋಟಿ ನೀಡಬೇಕು. ಈ ಬಗ್ಗೆ ಮುಖ್ಯಮಂತ್ರಿಗಳು, ಮಾಜಿ ಸಿಎಂ ಸಿದ್ದರಾಮಯ್ಯ, ಯಡಿಯೂರಪ್ಪನವರನ್ನು ಕೇಳಿ ಎಂದಿದ್ದಾರೆ.

ನಾನು ಯತ್ನಾಳ್ ಅವರಿಗೆ ಕೇಳಲು ಬಯಸುತ್ತೇನೆ. ಕೇವಲ ಪುಂಗಿ ಊದುವುದರಲ್ಲಿ ಅರ್ಥವಿಲ್ಲ. ಈ ರೀತಿ ಪುಂಗಿ ಊದುವವರು ರಾಜ್ಯದಲ್ಲಿ ಇಬ್ಬರಿದ್ದಾರೆ. ಒಂದು ಯತ್ನಾಳ್ ಹಾಗೂ ಮತ್ತೊಬ್ಬರು ಸಿ.ಟಿ. ರವಿ.

ನೀವು ಮಾಜಿ ಕೇಂದ್ರದ ಮಾಜಿ ಸಚಿವರು. ರಾಜ್ಯದಲ್ಲಿ ಮಂತ್ರಿ ಹಾಗೂ ಮುಖ್ಯಮಂತ್ರಿಯಾಗುವ ಆಸೆ ಹೊಂದಿರುವವರು. ಸಂವಿಧಾನ ಹಾಗೂ ಕಾನೂನು ಎತ್ತಿ ಹಿಡಿಯುವ ಪ್ರಮಾಣ ಮಾಡಿರುವವರು. ಐಪಿಸಿ ಸೆಕ್ಷನ್ 202 ಪ್ರಕಾರ ನಿಮಗೆ ಭ್ರಷ್ಟಾಚಾರ ಆಗಿದೆ ಎಂದು ಮಾಹಿತಿ ಇದ್ದರೆ ಪೊಲೀಸರಿಗೆ ಯಾಕೆ ಮಾಹಿತಿ ನೀಡಿಲ್ಲ, ದೂರು ನೀಡಿಲ್ಲ?

ಪೊಲೀಸ್ ಇಲಾಖೆ ಬದುಕಿದ್ದರೆ ಈ ವಿಚಾರವಾಗಿ ದೂರು ಆಧಾರದ ಮೇಲೆ ಅಥಾವ ಸ್ನಯಂಪ್ರೇರಿತ ದೂರು ದಾಖಲಿಸಿ ತನಿಖೆ ನಡೆಸಬೇಕು. ಯತ್ನಾಳ್ ಅವಭ್ರಷ್ಟಾಚಾರದ ಮಾಹಿತಿ ನೀಡದೇ ಅಪರಾಧಿಯಾಗಿದ್ದಾರೆ. ಜತೆಗೆ ಹಣ್ ಕೊಟ್ಟವರು, ತೆಗೆದುಕೊಂಡವರು ಇಬ್ಬರೂ ಅಪರಾಧಿಗಳೆ. ಹಾಗಾಗಿ ಯತ್ನಾಳ್ ಅವರ ವಿರುದ್ಧ ಪ್ರಕರಣ ದಾಖಲಿಸಿ, ವಿಚಾರಣೆ ಮಾಡಿ, ಯಾರು 10 ಕೋಟಿ ಕೊಟ್ಟು ಕೆಪಿಎಸ್ ಸಿ ಸದಸ್ಯರಾಗಿದ್ದಾರೆ ಅವರ ವಿರುದ್ಧವೂ ಭ್ರಷ್ಟಾಚಾರ ನಿಗ್ರಹ ಪ್ರಕರಣ ದಾಖಲಿಸಬೇಕು.

ಯತ್ನಾಳ್ ಅವರಿಗೆ ಬದ್ಧತೆ ಇದ್ದರೆ ಎಲ್ಲ ಮಾಹಿತಿ ಜನತೆ ಮುಂದೆ ಇಡಲಿ, ಹಿಟ್ ಅಂಡ್ ರನ್ ಅವರಿಗೆ ಶೋಭೆ ತರುವುದಿಲ್ಲ. ಮೋದಿ ಅವರು ಕೂಡ ಈ ವಿಚಾರವಾಗಿ ಗಮನಹರಿಸಬೇಕು.

ರಾಜ್ಯವ್ಯಾಪಿ ಆಗುತ್ತಿರುವ ಪಿಎಸ್ಐ ನೇಮಕಾತಿ ಅಕ್ರಮದಲ್ಲಿ ದೈಹಿಕ ಪರೀಕ್ಷೆ ಹಾಗೂ ಲಿಖಿತ ಪರೀಕ್ಷೆಯಲ್ಲಿ ಭ್ರಷ್ಟಾಚಾರ ಆಗಿದೆ ಎಂದು ಪ್ರಕರಣ ದಾಖಲಾಗಿದ್ದು, ಇದರಲ್ಲಿ ಮಧ್ಯವರಿತಿಗಳು ಹಾಗೂ ಅಭ್ಯರ್ಥಿಗಳು ಬಂಧಿತರಾಗಿದ್ದು, ಇವರನ್ನು ಪಾಲನೆ ಪೋಷಣೆ ಮಾಡಿದವರ ಮೇಲೆ ಯಾವುದೇ ಕ್ರಮ ಕೈಗೊಂಡಿಲ್ಲ. ನೇಮಕಾತಿ ಸಮಿತಿ ಅಧಿಕಾರಿಗಳ ಮೇಲೆ ಕ್ರಮ ಆಗಿಲ್ಲ, ಪರೀಕ್ಷಾ ಕೇಂದ್ರ ಶಿಫಾರಸ್ಸು ಮಾಡಿದ ಅಧಿಕಾರಿಗಳ ಮೇಲೂ ಕ್ರಮವಿಲ್ಲ. ಆ ಅಧಿಕಾರಿಗಳ ರಕ್ಷಣೆ ಮಾಡುತ್ತಿರುವವರಿಗೂ ಕ್ರಮವಿಲ್ಲ.

ನಿನ್ನೆಯಿಂದ ಮಾಧ್ಯಮದಲ್ಲಿ ಮಾಗಡಿ ತಾಲೂಕಿನಲ್ಲಿ ಆಯ್ಕೆಯಾಗಿರುವ ಅಭ್ಯರ್ಥಿ ದರ್ಶನ್ ಗೌಡ ಅವರಿಂದ 80 ಲಕ್ಷಕ್ಕೂ ಹೆಚ್ಚಿನ ಹಣ ಪಡೆಯಲಾಗಿದ್ದು, ಪ್ರಭಾವಿ ಸಚಿವರ ಸಹೋದರನ ಮೇಲೆ ಆರೋಪವಿದ್ದು, ಪ್ರಭಾವಿ ಸಚಿವರು ಕರೆ ಮಾಡಿ ಆ ಅಭ್ಯರ್ಥಿಯನ್ನು ವಿಚಾರಣೆಯಿಂದ ಬಿಡುಗಡೆಗೊಳಿಸಿದ್ದಾರೆ.

ರಾಮನಗರ ಜಿಲ್ಲೆ ಉಸ್ತುವಾರಿ ಸಚಿವರು ಅಶ್ವತ್ಥ ನಾರಾಯಣ್ ಅವರು. ಈ ವಿಚಾರದಲ್ಲಿ ಅವರು ಮೌನಿ ಬಾಬಾ ಆಗಿರುವುದೇಕೆ? ಇನ್ನು ಉನ್ನತ ಶಿಕ್ಷಣ ಇಲಾಖೆಯಲ್ಲಿ ಸಹಾಯಕ ಪ್ರಾಧ್ಯಪಕ ಹುದ್ದೆ ನೇಮಕಾತಿ ಅಕ್ರಮಕ್ಕೆ ಸಂಬಂಧಿಸಿದಂತೆ ನಾಗರಾಜ್ ಹಾಗೂ ಸೌಮ್ಯ ಅವರ ಬಂಧನವಾಗಿದ್ದು, ಆ ಪ್ರಕರಣದಲ್ಲೂ ಮೌನಿ ಬಾಬಾ ಆಗಿದ್ದೀರಿ. ನಿಮ್ಮ ವರ್ತನೆ ನೋಡಿದರೆ ನಿಮ್ಮ ಕೈವಾಡ ಇರುವ ಸಂಶಯವಾಗುತ್ತಿದೆ. ಇಲ್ಲದಿದ್ದರೆ, ಈ ವಿಚಾರದ ಬಗ್ಗೆ ಮಾತನಾಡಬೇಕಿತ್ತು.

ನೀವು ನನ್ನ ಇಲಾಖೆಯಲ್ಲಿ ಪ್ರಶ್ನೆ ಪತ್ರಿಕೆ ಸೋರಿಕೆ ಆಗಿಲ್ಲ ಎಂದು ಹೇಳಿದರೆ ಬಂಧನ ಆಗಿದ್ದು ಯಾಕೆ ಎಂಬ ಪ್ರಶ್ನೆ ಬರುತ್ತದೆ. ನಿಮ್ಮ ಜಿಲ್ಲೆ ಮಾಗಡಿ ತಾಲೂಕಿನಲ್ಲಿ ಮೂವರು ಅಭ್ಯರ್ಥಿಗಳ ಆಯ್ಕೆ ವಿಚಾರದಲ್ಲಿ ನಿಮ್ಮ ಸಹೋದರ ಭಾಗಿಯಾಗಿರುವ ವಿಚಾರವಾಗಿ ಜನ ಮಾತನಾಡುತ್ತಿರುವಾಗ ನೀವು ಮೌನವಾಗಿದ್ದು, ಮೌನಂ ಸರ್ವ ಸಮ್ಮತಂ ಎಂಬಂತಾಗಿದೆ.

ಪ್ರಕರಣ ನಡೆಯುತ್ತಿರುವ ಸಮಯದಲ್ಲಿ ಈ ಪ್ರಕರಣ ಅಶ್ವತ್ ನಾರಾಯಣ ಹಾಗೂ ಅವರ ಸಹೋದರನ ವಿರುದ್ಧ ಬೆರಳು ತೋರುತ್ತಿದೆ. ಅವರು ಇದುವರೆಗೂ ಸಾಕಷ್ಟು ಬಾರಿ ಗಂಡಸ್ಥನದ ಬಗ್ಗೆ ಮಾತನಾಡಿದ್ದು, ನಿಮಗೆ ಗಂಡಸ್ಥನ ತಾಕತ್ತು ಎಂಬುದು ಇದ್ದರೆ, ಈ ಪ್ರಕರಣವನ್ನು ಹೈಕೋರ್ಟ್ ನ್ಯಾಯಾಧೀಶರಿಂದ ತನಿಖೆ ನಡೆಸಬೇಕು. ನಿಮಗೆ ಹಾಗೂ ಗೃಹ ಸಚಿವರಿಗೆ ನಾತಿಕತೆ ಇದ್ದರೆ ಕೂಡಲೇ ನಿಮ್ಮ ಸ್ಥಾನಗಳಿಗೆ ರಾಜೀನಾಮೆ ನೀಡಬೇಕು.

1970ರ ಸಮಾರಿನಲ್ಲಿ ಎಂ.ವಿ ರಾಮರಾಯರು ಎಂಬ ಗೃಹಸಚಿವರಿದ್ದರು, ತಮ್ಮ ಇಳಾಖೆಯಲ್ಲಿ ಪಲೀಸ್ ಠಾಣೆಯಲ್ಲಿ ಮಹಿಳೆ ಮೇಲೆ ಕೈಮಾಡಿದರು ಎಂಬ ಕಾರಣಕ್ಕೆ ಅವರು ಗೃಹ ಸಚಿವ ಹಾಗೂ ಶಾಸಕ ಸ್ಥಾನಕ್ಕೆ ರಾಜೀನಾಮೆ ಕೊಟ್ಟು ಹೋಗಿದ್ದರು. ಲಾಲ್ ಬಹದ್ದೂರ್ ಶಾಸ್ತ್ರಿ ಅವರು ರೈಲ್ವೇ ಅಪಘಾತ ಆದಾಗ ತಮ್ಮ ಪಾತ್ರ ಇಲ್ಲದಿದ್ದರೂ ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಿದ್ದರು.

ರಾಜ್ಯದ ಯುವಕರ ಭವಿಷ್ಯ ಸಮಾಧಿ ಮಾಡುವ ಯತ್ನ ನಡೆಯುತ್ತಿದ್ದು, ಇದಕ್ಕೆ ಸರ್ಕಾರವೇ ನೇರ ಹೊಣೆಯಾಗಿದೆ. ಹೀಗಾಗಿ ಸಚಿವರುಗಳು ರಾಜೀನಾಮೆ ನೀಡಬೇಕು. ಇಲ್ಲದಿದ್ದರೆ ಮುಖ್ಯಮಂತ್ರಿಗಳು ಅವರನ್ನು ವಜಾಗೊಳಿಸಬೇಕು. ಮುಖ್ಯಮಂತ್ರಿಗಳು ಮಾಡದಿದ್ದರೆ ಪ್ರಧಾನಿಗಳು ಈ ವಿಚಾರವಾಗಿ ಕ್ರಮ ಕೈಗೊಳ್ಳಬೇಕು. ಆಗ ಅವರ ಮಾತಿಗೂ ಸಾರ್ಥಕತೆ ಬರುತ್ತದೆ. ಇಲ್ಲವಾದರೆ ಈ ರಾಜ್ಯದ ಯುವಕರು, ಉದ್ಯೋಗಾಕಾಂಕ್ಷಿಗಳು ಸರ್ಕಾರದ ವಿರುದ್ಧ ಸಿಡಿದೇಳುವ ದಿನಗಳು ದೂರ ಇಲ್ಲ ಎಂದು ಹೇಳಲು ಬಯಸುತ್ತೇನೆ.

ಈ ಎಲ್ಲ ವಿಚಾರ ಸುತ್ತುತ್ತಿರುವುದು ರಾಮನಗರ ಜಿಲ್ಲೆಯಲ್ಲಿ. ಪ್ರಭಾವ ಸಚಿವರು ಎಂದು ಮಾಧ್ಯಮಗಳಲ್ಲಿ ಪ್ರಕಟಿಸುತ್ತಿದ್ದರೂ ರಾಮನಗರ ಜಿಲ್ಲಾ ಮಂತ್ರಿಗಳು ಬಾಯಿ ಬಿಡುತ್ತಿಲ್ಲ ಯಾಕೆ?

ನೊಟೀಸ್ ಕೊಟ್ಟಿರುವ ದರ್ಶನ್ ಗೌಡನನ್ನು ಇದುವರೆಗೂ ಬಂಧಿಸಿಲ್ಲ ಯಾಕೆ? ಈ ಹಗರಣದಲ್ಲಿ ಅಕ್ರಮ ಮಾಡಿರುವ ಕಾರಣಕ್ಕೆ ನೊಟೀಸ್ ನೀಡಲಾಗಿದೆ ಅಲ್ಲವೇ? ಆದರೂ ಅವರ ಬಂಧನ ಯಾಕಿಲ್ಲ? ಆತ ಬಂಧನವಾದರೆ ಯಾರಿಗೆ 80 ಲಕ್ಷ ಹಣ ನೀಡಲಾಗಿದೆ ಎಂಬುದು ಬಹರಂಗವಾಗಲಿದೆ ಎಂಬುದು ಬಹಿರಂಗವಾಗುತ್ತದೆ ಎಂದು ಆತನನ್ನು ಬಂಧಿಸದೇ, ವಿಚಾರಣೆ ನಡೆಸದಂತೆ ಸಂಚು ರೂಪಿಸಲಾಗಿದೆ.

ಹಾಗಾಗಿ ಪ್ರಕರಣದ ತನಿಖೆಯನ್ನು ಹೈಕೋರ್ಟ್ ನ್ಯಾಯಾಧೀಶರಿಂದ ಅಥವಾ ಅವರ ಮೇಲ್ವಿಚಾರಣೆಯಲ್ಲಿ ನಡೆಸಬೇಕು. ಆಗ ನೇಮಕಾತಿ ಅಕ್ರಮ, ಕಮಿಷನ್ ಅಕ್ರಮಗಳು ಹೊರಗೆ ಬರಲಿದೆ. ಹೀಗಾಗಿ ಈ ತನಿಖೆ ಮಾಡಬೇಕು ಎಂದು ಆಗ್ರಹಿಸುತ್ತೇವೆ.

ಸಿದ್ದರಾಮಯ್ಯ ಅವರ ಮೇಲೆ ಟೀಕೆ ಮಾಡಿರುವ ಸಿ.ಟಿ ರವಿ ಅವರು ಕೆಂಪಣ್ಣ ಆಯೋಗದ ವರದಿ ಬಂದರೆ ಅವರ ಬಣ್ಣ ಹೊರಗೆ ಬರುತ್ತದೆ ಎಂದಿದ್ದಾರೆ. ನಾನು ಅವರಿಗೆ ಸವಾಲು ಹಾಕುತ್ತಿದ್ದೇನೆ, ನಿಮಗೆ ಧಮ್ಮು, ತಾಕತ್ತು ಎನ್ನುವುದು ಇದ್ದರೆ, ಸಿದ್ದರಾಮಯ್ಯ ಅವರ ವಿರುದ್ಧ ಯಾವುದಾದರೂ ಸಾಕ್ಷ್ಯಾಧಾರಗಳಿದ್ದರೆ ಅವರ ವಿರುದ್ಧ ಕೇಸ್ ದಾಖಲಿಸಿ ಬಂಧಿಸಿ. ಕೆಂಪಣ್ಣ ಆಯೋಗ ವರದಿ ಏನಿದೆ ಎಂಬ ವರದಿ ಬಗ್ಗೆ ನಿಮಗೆ ಅರಿವಿದೆಯಾ? ಸಿದ್ದರಾಮಯ್ಯ ಅವರ ಅವಧಿಯಲ್ಲಿ ಯಾವುದೇ ಡಿನೋಟಿಫಿಕೇಶನ್ ಆಗಿಲ್ಲ ಎಂದು ಕೆಂಪಣ್ಣ ಅವರ ವರದಿಯಲ್ಲಿದೆ.

ಇಷ್ಟಾದರೂ ಸಿದ್ದರಾಮಯ್ಯ ಅವರ ಮೇಲೆ ಕೆಸರೆರೆಚುವ ಪ್ರಯತ್ನ ಸಿ.ಟಿ ರವಿ ಅವರು ಮಾಡುತ್ತಿದ್ದಾರೆ. ಅವರ ವಿರುದ್ಧ ಕೇಸ್ ದಾಖಲಿಸಿ ಇಲ್ಲದಿದ್ದರೆ ನಮ್ಮ ಶಾಸಕಾಂಗ ಪಕ್ಷದ ನಾಯಕರ ವಿರುದ್ಧ ಮಾತನಾಡಿರುವುದಕ್ಕೆ ಬೇಷರತ್ ಕ್ಷಮೆ ಕೋರಬೇಕು.

ಚಂದ್ರಮೌಳಿ

ಪಿಎಸ್ಐ ನೇಮಕಾತಿ ಅಕ್ರಮ ಪ್ರಕರಣದಲ್ಲಿ ಓರೋಪಿಗಳನ್ನು ವಿಚಾರಣೆ ಮಾಡಿದರೆ, ಮತ್ತೆ ಕೆಲವರನ್ನು ಬಿಟ್ಟು ಕಳುಹಿಸಲಾಗುತ್ತಿದೆ. ಇಂತಹ ಪ್ರಕರಣದಲ್ಲಿ ನಿಷ್ಪಕ್ಷಪಾತ ತನಿಖೆ ನಡೆಯಬೇಕು. ಇದು ಯಾವುದೋ ಸಣ್ಮ ಪರೀಕ್ಷೆಯಲ್ಲ. ಇದರಲ್ಲಿ ದೈಹಿಕ ಹಾಗೂ ಲಿಖಿತ ಪರೀಕ್ಷೆಗಳು ಅಡಗಿವೆ. ದೈಹಿಕ ಪರೀಕ್ಷೆಯಲ್ಲೇ ಅಕ್ರಮ ನಡೆದಿದೆ ಎಂದಾದರೆ, ಲಿಖಿತ ಮರುಪರೀಕಷೆ ನಡೆಸುವುದರಲ್ಲಿ ಯಾವ ಅರ್ಥವಿದೆ? 545 ಭ್ರಷ್ಟರನ್ನು ಪೊಲೀಸ್ ಠಾಣೆಯಲ್ಲಿ ಕೂರಿಸಿದರೆ ಭವಿಷ್ಯದಲ್ಲಿ ಎಂತಹ ಸ್ಥಿತಿ ನಿರ್ಮಾಣವಾಗಬಹುದು?

ರಮೇಶ್ ಜಾರಕಿಹೊಳಿ ಅವರ ಪ್ರಕರಣ, ಈಶ್ವರಪ್ಪ ಅವರ ಪ್ರಕರಣ ಏನಾಗಿದೆ ಎಂದು ಎಲ್ಲರಿಗೂ ಗೊತ್ತಾಗಿದೆ. ಈಶ್ವರಪ್ಪನವರು ಸಾರ್ವಜನಿಕ ಸಭೆಗಳಲ್ಲಿ ಇನ್ನು 15 ದಿನಗಳಲ್ಲಿ ಬಿ ರಿಪೋರ್ಟ್ ಸಲ್ಲಿಕೆಯಾಗಲಿದ್ದು, ನಾನು ಮತ್ತೆ ಮಂತ್ರಿಯಾಗುತ್ತೇನೆ ಎಂದು ಹೇಳುತ್ತಿದ್ದಾರೆ. ಹೀಗಾಗಿ ಈ ಪ್ರಕರಣದಲ್ಲಿ ನಿಷ್ಪಕ್ಷಪಾತ ತನಿಖೆಯಾಗಬೇಕು.

ಗೌರಿ ಲಂಕೇಶ್, ಕಲ್ಬುರ್ಗಿ ಅವರ ಪತ್ಯೆ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ಎಸ್ ಐಟಿ ತಂಡ ರಚನೆಗೆ ಆದೇಶ ನೀಡಿ, ತನಿಖಾ ವರದಿಯನ್ನು ನ್ಯಾಯಾಲಯಕ್ಕೆ ಸಲ್ಲಿಸುವಂತೆ ಸೂಚಿಸಿತ್ತು. ಆ ರೀತಿ ಈ ಪ್ರಕರಣಗಳಲ್ಲಿ ಮಾಡದಿದ್ದರೆ ಮತ್ತೊಂದು ಬಿ ರಿಪೋರ್ಟ್ ಸಲ್ಲಿಕೆಯಾಗಿ ಭ್ರಷ್ಟರು ಪಿಎಸ್ಐಗಳಾಗಿ ಭ್ರಷ್ಟಾಚಾರ ತಾಂಡವವಾಡಲಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12792
News Karnataka Kannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು