News Karnataka Kannada
Monday, April 15 2024
Cricket
ಬೆಂಗಳೂರು ನಗರ

ಪಶ್ಚಿಮಘಟ್ಟದ ನೆಡುತೋಪು ಕಾಮಗಾರಿಯಲ್ಲಿ ಯಂತ್ರ ಬಳಸದಂತೆ ಸೂಚನೆ

Photo Credit :

ಪಶ್ಚಿಮಘಟ್ಟದ ನೆಡುತೋಪು ಕಾಮಗಾರಿಯಲ್ಲಿ ಯಂತ್ರ ಬಳಸದಂತೆ ಸೂಚನೆ

ಬೆಂಗಳೂರು: ಗೇರು ನಿಗಮವು ಪಶ್ಚಿಮ ಘಟ್ಟದಲ್ಲಿ ಯಂತ್ರ ಬಳಸಬೇಡಿ ಎಂದು ಕಟ್ಟು ನಿಟ್ಟಾದ ನಿಷೇಧ ಮಾಡಬೇಕು ಎಂದು ರಾಜ್ಯ ಅರಣ್ಯ ಇಲಾಖೆಯ ಮುಖ್ಯಸ್ಥರಿಗೆ (ಪಿ.ಸಿ.ಸಿಎಫ್ ಇವರಿಗೆ) ಜೀವವೈವಿಧ್ಯ ಮಂಡಳಿ ಅಧ್ಯಕ್ಷ ಅನಂತ ಹೆಗಡೆ ಅಶೀಸರ ಸೂಚನೆ ನೀಡಿದ್ದಾರೆ.

ಗೇರು ಅಭಿವೃದ್ಧಿ ನಿಗಮದವರು ಪಶ್ಚಿಮ ಘಟ್ಟ ಪ್ರದೇಶದಲ್ಲಿ ಗೇರು ನೆಡುತೋಪು ನಿರ್ಮಿಸಲು 20 ವರ್ಷ ಹಿಂದೇ ಅರಣ್ಯ ಇಲಾಖೆ ಸಾವಿರಾರು ಎಕರೆ ನೀಡಿದೆ. ಉ.ಕ, ದ.ಕ, ಉಡುಪಿ, ಶಿವಮೊಗ್ಗ ಜಿಲ್ಲೆಗಳ ಕರಾವಳಿ ಮತ್ತು ಮಲೆನಾಡಿನ ಇಳಿಜಾರು, ಗುಡ್ಡ, ನದಿ ಕಣಿವೆಗಳ ಪ್ರದೇಶದಲ್ಲಿ ಇರುವ ನೆಡುತೋಪುಗಳಲ್ಲಿ ಗೇರುಗಿಡಗಳ ಜೊತೆ ಅಪಾರ ಜೀವ ಸಸ್ಯ ಸಂಕುಲವಿದೆ. ಈ ಪ್ರದೇಶದಲ್ಲಿ ದಟ್ಟ ಕಾಡಿನ ಪ್ರದೇಶವಿದೆ. ವಿನಾಶದ ಅಂಚಿನ ವೃಕ್ಷ ವೈವಿಧ್ಯವಿದೆ. ಜಲಮೂಲಗಳಿವೆ. ಔಷಧೀ ಸಸ್ಯಗಳ ಆಗರವಾಗಿದೆ.

ಗೇರು ಅಭಿವೃದ್ಧಿ ನಿಗಮದವರು ಗೇರು ನೆಡುತೋಪುಗಳ ನಿರ್ವಹಣೆಗಾಗಿ ಇದೀಗ ಜೆಸಿಬಿ, ಇಟಾಚಿ ಯಂತ್ರಗಳನ್ನು ಉಪಯೋಗಿಸಿ ಈ ಸ್ಥಳಗಳಲ್ಲಿ ಇರುವ ಅಪಾರ ಜೀವ ಸಸ್ಯ ಸಂಕುಲ ನಾಶ ಮಾಡುತ್ತಿದ್ದಾರೆ. ಗೇರು ನಿಗಮ ಪಶ್ಚಿಮ ಘಟ್ಟ ಪ್ರದೇಶದಲ್ಲಿ ಯಂತ್ರ ಉಪಯೋಗಿಸದೇ ನಿರ್ವಹಣೆ ನಡೆಸಬೇಕು ಎಂದು ಕರ್ನಾಟಕ ಜೀವವೈವಿಧ್ಯ ಮಂಡಳಿ ಅಧ್ಯಕ್ಷ ಅನಂತ ಹೆಗಡೆ ಅಶೀಸರ ರಾಜ್ಯ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

ಹೊನ್ನಾವರ ತಾಲೂಕಿನ ಕರಿಕಾನ ಪರಮೇಶ್ವರೀ ಬೆಟ್ಟ, ಶರಾವತಿ ನದೀ ಪಕ್ಕದ ಖರ್ವಾ ಇಳಿಜಾರು ಬೆಟ್ಟ, ಸಿದ್ದಾಪುರದ ಅಘನಾಶಿನಿ ಕಣಿವೆಯ ಪ್ರದೇಶ, ಹೊಸನಗರ ತಾಲೂಕಿನ ಹನಿಯ ಗ್ರಾಮದ ಕಡಿದಾದ ಗುಡ್ಡ, ಕುಂದಾಪುರ ತಾಲೂಕಿನ ವಾರಾಹಿ, ಕೊಲ್ಲೂರು ಸಮೀಪದ ಎತ್ತರದ ಬೆಟ್ಟಗಳಲ್ಲಿ, ತೀರ್ಥಹಳ್ಳಿ, ತುಂಗಾ ಕಣಿವೆಯಲ್ಲಿ ಇಂಥ ನೆಡುತೋಪುಗಳಿವೆ. ಯಂತ್ರಗಳ ಮೂಲಕ ನೆಡುತೋಪು ಸ್ವಚ್ಛಗೊಳಿಸುವ ಕಾರ್ಯ ಅಪಾಯಕಾರಿ, ಭೂಕುಸಿತಕ್ಕೆ ಕಾರಣವಾಗಬಹುದು ಎಂದು ಜೀವವೈವಿಧ್ಯ ಮಂಡಳಿ ಅಧ್ಯಕ್ಷರು ಅಭಿಪ್ರಾಯ ಪಟ್ಟಿದ್ದಾರೆ.

ತೀರ್ಥಹಳ್ಳಿ ತಾಲೂಕಿನ ಭಾರತೀಪುರ ಬಳಿಯ ಎಡಗುಡ್ಡೆ ಪ್ರದೇಶದ ಸುಮಾರು 380 ಎಕರೆ ಪ್ರದೇಶ ತುಂಗಾ ಕಣಿವೆಯ ಭಾಗವಾಗಿದೆ. ಇಲ್ಲಿ 25 ವರ್ಷ ಹಿಂದೆ ಗೇರು ನಿಗಮದವರು ಗಿಡ ನೆಟ್ಟಿದ್ದರು. ಆದರೆ ಈಗ ಗೇರು ಗಿಡ ಕಾಣಿಸದಂತೆ ದಟ್ಟ ಸ್ವಾಭಾವಿಕ ಕಾಡು ತುಂಬಿದೆ. ಇಲ್ಲಿ ಯಂತ್ರಗಳ ಕಾರ್ಯಾಚರಣೆ ಮಾಡಿದಾಗ (2020 ಜುಲೈ ಮೊದಲವಾರ) ಸುತ್ತಲಿನ ಹಳ್ಳಿಗರು ಕಾಮಗಾರಿ ತಡೆದರು. ಜೀವವೈವಿಧ್ಯ ಮಂಡಳಿಗೆ ದೂರು ನೀಡಿದರು. ಅರಣ್ಯ ಇಲಾಖೆ ಅಧಿಕಾರಿಗಳ ಜೊತೆ ಜೀವವೈವಿಧ್ಯ ಮಂಡಳಿ ಅಧ್ಯಕ್ಷರು ಸ್ಥಳಕ್ಕೆ ಭೇಟಿ ನೀಡಿದರು. ಇಲ್ಲಿರುವ 135 ಜಾತಿಯ ಸಸ್ಯ ವರ್ಗಗಳನ್ನು ಕಿಸಾನ್ ಸಂಘದ ಕಾರ್ಯಕರ್ತರು ಪಟ್ಟಿ ಮಾಡಿ ಕೊಟ್ಟಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
177
Lava Kumar

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು