News Karnataka Kannada
Wednesday, April 24 2024
Cricket
ಬೆಂಗಳೂರು ನಗರ

ನಾರಾಯಣ ಹೃದಯ ಆಸ್ಪತ್ರೆಯಲ್ಲಿ ಕಂಡುಬಂದ ಬೆಂಕಿ ಅವಘಡ

Photo Credit :

ನಾರಾಯಣ ಹೃದಯ ಆಸ್ಪತ್ರೆಯಲ್ಲಿ ಕಂಡುಬಂದ ಬೆಂಕಿ ಅವಘಡ

ಬೆಂಗಳೂರು : ದೇಶಾದ್ಯಂತ ಕೊರೋನಾ ಅಬ್ಬರ ಒಂದೆಡೆ ಹೆಚ್ಚುತ್ತಿದ್ದರೆ, ಇನ್ನೊಂದೆಡೆ ಆಸ್ಪತ್ರೆಗಳಲ್ಲಿ ನಡೆಯುತ್ತಿರುವ ಅವಘಡಗಳು ಹಾಗೂ ಬೆಂಕಿ ಅನಾಹುತಗಳು ಎಲ್ಲೆಡೆ ಕೇಳಿಬರುತ್ತಿದೆ. ಹೌದು, ಬೆಂಗಳೂರಿನ ಪ್ರತಿಷ್ಠಿತ ಆಸ್ಪತ್ರೆಯಲ್ಲಿ ಮತ್ತೊಂದು ಬೆಂಕಿ ಅವಘಡ ವಾಗಿರುವ ಘಟನೆ ಕಂಡುಬಂದಿದೆ. 

 

ಆನೇಕಲ್‌ನ ಪ್ರತಿಷ್ಠಿತ ನಾರಾಯಣ ಹೃದಯಾಲಯದ ಆರೋಗ್ಯ ಸಂಕೀರ್ಣದಲ್ಲಿನ ಕಿರಣ್ ಮಜುಂದಾರ್ ಶಾ ಕ್ಯಾನ್ಸರ್‌ ಸೆಂಟರ್‌ನ 8 ನೇ ಮಹಡಿಯಲ್ಲಿ ಶನಿವಾರ ರಾತ್ರಿ ಬೆಂಕಿ ಕಾಣಿಸಿಕೊಂಡಿದೆ . ಇದರಿಂದ ವೈದ್ಯರು , ಸಿಬ್ಬಂದಿ ಹಾಗೂ ದಾಖಲಾಗಿದ್ದ ಒಳರೋಗಿಗಳು ಭಯ ಭೀತರಾಗಿದ್ದರು . ತಕ್ಷಣ ಸಿಬ್ಬಂದಿ , ರೋಗಿಗಳನ್ನು ಸುರಕ್ಷಿತ ಜಾಗಕ್ಕೆ ಸ್ಥಳಾಂತರಿಸಲಾಗಿದೆ . 

 

ರಾತ್ರಿ 8 ರ ಸಮಯದಲ್ಲಿ 8 ನೇ ಮಹಡಿಯಲ್ಲಿನ ಲ್ಯಾಬ್‌ನಲ್ಲಿ ಬೆಂಕಿಯ ಹೊಗೆ ಕಾಣಿಸಿಕೊಂಡಿದೆ . ಸಣ್ಣ ಪ್ರಮಾಣದ ಬೆಂಕಿಯಾದ ಕಾರಣ ಕಟ್ಟಡದಲ್ಲಿ ಲಭ್ಯವಿದ್ದ ಅಗ್ನಿಶಾಮಕ ಉಪಕರಣ ಬಳಸಿಕೊಂಡ ಸಿಬ್ಬಂದಿ , ತಜ್ಞರ ಸಲಹೆ ಪಡೆದು ಬೆಂಕಿಯನ್ನು ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ ಎಂದು ವರದಿಗಳು ತಿಳಿಸಿವೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
205

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು