News Karnataka Kannada
Friday, April 12 2024
Cricket
ಬೆಂಗಳೂರು ನಗರ

ನನ್ನ ಹೆಸರಲ್ಲಿ ಬೇರೊಬ್ಬರು ಅಧಿಕಾರ ಚಲಾಯಿಸುವುದನ್ನು ಒಪ್ಪುವುದಿಲ್ಲ: ಯೋಗೇಶ್ವರ್

Photo Credit :

ನನ್ನ ಹೆಸರಲ್ಲಿ ಬೇರೊಬ್ಬರು ಅಧಿಕಾರ ಚಲಾಯಿಸುವುದನ್ನು ಒಪ್ಪುವುದಿಲ್ಲ: ಯೋಗೇಶ್ವರ್

ಬೆಂಗಳೂರು: ‘ಸಚಿವನಾಗಿ ನನ್ನ ಹೆಸರಲ್ಲಿ ನನ್ನ ಮಗ ಅಧಿಕಾರ ಚಲಾಯಿಸುವುದನ್ನು ಒಪ್ಪುವುದಿಲ್ಲ. ನನ್ನ ಹೆಸರಲ್ಲಿ ಬೇರೊಬ್ಬರು ಅಧಿಕಾರ ಚಲಾಯಿಸುವುದನ್ನು ಒಪ್ಪಲ್ಲ. ಇದರ ಸೂಕ್ಷ್ಮ ಏನೆಂಬುದು ನಿಮಗೆ ಅರ್ಥ ಆಗುತ್ತೆ’ ಎಂದು ಪ್ರವಾಸೋದ್ಯಮ ಸಚಿವ ಸಿ.ಪಿ.ಯೋಗೇಶ್ವರ್ ಅವರು ಹೇಳಿದ್ದಾರೆ.

ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಮತ್ತು ಅವರ ಪುತ್ರ ಬಿ.ವೈ.ವಿಜಯೇಂದ್ರ ಅವರನ್ನು ಉದ್ದೇಶಿಸಿಯೇ ಈ ಮಾತನ್ನು ಆಡಿದ್ದಾರೆ ಎಂದು ವ್ಯಾಖ್ಯಾನಿಸಲಾಗಿದೆ.

ವಿಧಾನಸೌಧದಲ್ಲಿ ಸಚಿವ ಸಂಪುಟ ಸಭೆಯ ಬಳಿಕ ಸುದ್ದಿಗಾರರ ಜತೆ ಮಾತನಾಡಿದ ಅವರು, ‘ದೆಹಲಿಗೆ ಹೋಗ್ತಾನೆ ಇರ್ತೇನೆ. ಮುಂದೆಯೂ ಹೋಗ್ತೇನೆ. ನನ್ನದೇ ಆದ ಸಮಸ್ಯೆಗಳಿವೆ. ಅದಕ್ಕೆ ಪರಿಹಾರ ಕಂಡುಕೊಳ್ಳಲು ನಾಯಕರನ್ನು ಭೇಟಿ ಮಾಡಲು ಹೋಗುತ್ತೇನೆ. ಅದು ಏನೆಂದು ಮುಂದಿನ ದಿನಗಳಲ್ಲಿ ಸಂದರ್ಭ ಬಂದಾಗ ಹೇಳುತ್ತೇನೆ’ ಎಂದು ಯೋಗೇಶ್ವರ್‌ ಹೇಳಿದ್ದಾರೆ.

ನಾಯಕತ್ವ ಬದಲಾವಣೆ ಚರ್ಚೆ ಎಲ್ಲಿಂದ ಹುಟ್ಟಿತು ಗೊತ್ತಿಲ್ಲ. ಪಕ್ಷ ನನಗೆ ಎಂಎಲ್‌ಸಿ, ಸಚಿವರನ್ನಾಗಿ ಮಾಡಿದೆ. ನನ್ನ ನೋವು ನಲಿವು ತೋಡಿಕೊಳ್ಳಲು ಹೋಗಿದ್ದೆ ಎಂದರು.

ಇದು ಮೂರು ಪಕ್ಷಗಳ ಸರ್ಕಾರ. ನಮ್ಮ ಪಕ್ಷಕ್ಕೆ ಬಂದವರ ಬಗ್ಗೆ ಮಾತನಾಡುತ್ತಿಲ್ಲ. ಬೇರೆಯವರು ನನ್ನ ಹೆಸರಲ್ಲಿ ಅಧಿಕಾರ ಚಲಾಯಿಸುವುದು ಸಮಾಧಾನ ತಂದಿಲ್ಲ. ಅದರ ವಿಚಾರ ಯಡಿಯೂರಪ್ಪ ಅವರಿಗೂ ಹೇಳಿದ್ದೇನೆ ಎಂದರು.

ಶಾಸಕಾಂಗ ಪಕ್ಷದ ಸಭೆ ಕರೆಯಬೇಕಾಗಿದ್ದು ಶಾಸಕರು. ಈ ಬಗ್ಗೆ ನಾನು ಹೇಳಲು ಆಗಲ್ಲ. ಕೆಲವು ವಿಚಾರವನ್ನು ಮಾಧ್ಯಮ ಮುಂದೆ ಹಂಚಿಕೊಳ್ಳಲು ಆಗಲ್ಲ. ನಾಯಕತ್ವ ಬದಲಾವಣೆಯ ಉದ್ದೇಶ ಇಲ್ಲ, ಆಶಕ್ತಿಯೂ ನನಗಿಲ್ಲ ಎಂದು ಅವರು ಹೇಳಿದರು.

‘2023 ರಲ್ಲಿ ಮತ್ತೆ ಬಿಜೆಪಿ ಅಧಿಕಾರಕ್ಕೆ ಬರಬೇಕು. ಆ ಚುನಾವಣೆಯಲ್ಲಿ ನಾನೂ ಗೆಲ್ಲಬೇಕು. ಆ ಬಗ್ಗೆಯಷ್ಟೇ ನನ್ನ ಗಮನ. ಇಂದಿನ ಸ್ಥಿತಿಯಲ್ಲಿ ನಾವು ಗೆಲ್ಲಲು ಸಾಧ್ಯವೆ? ಹೊಂದಾಣಿಕೆ ಮಾಡಿಕೊಂಡು ಹೋದರೆ ಕಷ್ಟ ಎಂದು ಅವರು ತಿಳಿಸಿದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
205

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು