News Karnataka Kannada
Monday, April 22 2024
Cricket
ಬೆಂಗಳೂರು ನಗರ

ದ್ರೋಣಾಚಾರ್ಯ ಪ್ರಶಸ್ತಿ ಸ್ವೀಕರಿಸುವ ಒಂದು ದಿನ ಮೊದಲೇ ಅಥ್ಲೆಟಿಕ್ ಕೋಚ್ ನಿಧನ

Photo Credit :

ದ್ರೋಣಾಚಾರ್ಯ ಪ್ರಶಸ್ತಿ ಸ್ವೀಕರಿಸುವ ಒಂದು ದಿನ ಮೊದಲೇ ಅಥ್ಲೆಟಿಕ್ ಕೋಚ್ ನಿಧನ

ಬೆಂಗಳೂರು: ರಾಷ್ಟ್ರಪತಿಗಳಿಂದ ಇಂದು ದ್ರೋಣಾಚಾರ್ಯ ಪ್ರಶಸ್ತಿ ಸ್ವೀಕರಿಸಬೇಕಾಗಿದ್ದ ಅಥ್ಲೆಟಿಕ್ ಕೋಚ್ ಪುರುಷೋತ್ತಮ ರೈ(79) ಅವರು ಶುಕ್ರವಾರ ರಾತ್ರಿ ನಿಧನರಾಗಿರುವರು.

ನಗರದಲ್ಲಿ ಮಲ್ಲತಹಳ್ಳಿಯಲ್ಲಿರುವ ತನ್ನ ಮನೆಯಲ್ಲಿ ಅವರು ನಿಧನರಾದರು.

ರೈ ಅವರು ಪ್ರಮುಖ ಅಥ್ಲೆಟಿಕ್ ಗಳಾಗಿರುವಂತಹ ಅಶ್ವಿನಿ ನಾಚಪ್ಪ, ರೊಸಕುಟ್ಟಿ ಮತ್ತು ಜಿಜಿ ಪ್ರಮೀಳಾ ಅವರಿಗೆ ತರಬೇತಿ ನೀಡಿದ್ದರು.

ಪುರುಷೋತ್ತಮ ರೈ ಅವರು ಮೂಲತಃ ದಕ್ಷಿಣ ಕನ್ನಡದ ಪುತ್ತೂರಿನವರು. ಭಾರತೀಯ ಸೇನೆಯಲ್ಲಿ ಕಾರ್ಯನಿರ್ವಹಿಸಿದ ಬಳಿಕ ಅವರು ತರಬೇತುದಾರರಾಗಿದ್ದರು. 1973ರಲ್ಲಿ ಅವರು ತರಬೇತುದಾರನ ತರಬೇತಿ ಪುರ್ತಿಗೊಳಿಸಿದ್ದರು. 1981ರಲ್ಲಿ ಕ್ರೀಡಾ ವಿಭಾಗಕ್ಕೆ ಸೇರ್ಪಡೆಯಾಗಿದ್ದರು ಮತ್ತು 1987ರಲ್ಲಿ ಭಾರತೀಯ ಕ್ರೀಡಾ ಪ್ರಾಧಿಕಾರದ ತರಬೇತುದಾರರಾಗಿದ್ದರು.

ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹಾಗೂ ಇತರ ಗಣ್ಯರು ರೈ ನಿಧನಕ್ಕೆ ಸಂತಾಪ ವ್ಯಕ್ತಪಡಿಸಿರುವರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
187

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು