News Karnataka Kannada
Tuesday, April 23 2024
Cricket
ಬೆಂಗಳೂರು ನಗರ

ತಮಿಳುಗಿಂತಲೂ ಕನ್ನಡವೇ ಪ್ರಾಚೀನ ಭಾಷೆ: ವಿಜಯಲಕ್ಷ್ಮೀ ಬಾಳೆಕುಂದ್ರಿ

Vijayalaxmi Kundadri
Photo Credit :

ತಮಿಳು ಭಾಷೆಯೇ ಪ್ರಾಚೀನ ಎಂಬ ಭಾವನೆ ಇದೆ. ಆದರೆ, ಅದಕ್ಕಿಂತಲೂ ಕನ್ನಡವೇ ಪ್ರಾಚೀನ ಎಂಬುದಾಗಿ ಬಹುತೇಕ ಅಧ್ಯಯನಗಳು ಸಾರುತ್ತಿವೆ ಎಂದು ಸಾಹಿತಿ, ಹೃದಯರೋಗ ತಜ್ಞೆ ಡಾ. ವಿಜಯಲಕ್ಷ್ಮೀ ಬಾಳೆಕುಂದ್ರಿ ಅಭಿಪ್ರಾಯಪಟ್ಟರು.

ದಿ. ಎಂ.ಎಸ್. ವೆಂಕಟರಾಮಯ್ಯ ಸಂಸ್ಥಾಪಿತ ಸಿರಿಗನ್ನಡ ಮಹಿಳಾ ವೇದಿಕೆಯಿಂದ ಭಾನುವಾರ ಬೆಳಿಗ್ಗೆ ನಗರದ ಗಾಂಧಿ ಭವನದ ಸಭಾಂಗಣದಲ್ಲಿ ಜರುಗಿದ ರಾಜ್ಯಮಟ್ಟದ ಪ್ರಪ್ರಥಮ ಮಹಿಳಾ ಸಮಾವೇಶ ‘ಸ್ತ್ರೀ-ಸಂಭ್ರಮ-2022’ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.

ಕನ್ನಡ ಭಾಷೆಯ ಕುರಿತು ಅಭಿಮಾನ ಇರಬೇಕು. ಅದನ್ನು ಕಾಯ್ದುಕೊಂಡು ಬರುವಲ್ಲಿ ಮಹಿಳೆಯರೂ ಮುಂದು. ತಮ್ಮ ಸಂಸ್ಕೃತಿ, ಸಾಮಾಜಿಕ ಹಾಗೂ ಕೌಟುಂಬಿಕ ಚಟುವಟಿಕೆಗಳ ಮೂಲಕ ಕನ್ನಡತನವನ್ನು ಉಳಿಸಿಕೊಂಡು ಬಂದಿದ್ದಾರೆ. ತಂತ್ರಜ್ಞಾನದ ಬದಲಾವಣೆಯ ಮಧ್ಯೆಯೂ ಕನ್ನಡ ಭಾಷೆಯ ಮೇಲಿನ ಅಭಿಮಾನ ಕಾಯ್ದುಕೊಳ್ಳಬೇಕು. ಸಿರಿಗನ್ನಡ ಮಹಿಳಾ ವೇದಿಕೆಯು ಶ್ರಮಿಸುತ್ತಿರುವುದು ಸಂತಸದ ಸಂಗತಿ. ಏನೇ ಬದಲಾವಣೆಗಳಾದರೂ ಸ್ತ್ರೀಯೇ ಎಲ್ಲ ಶಕ್ತಿಯೇ ಮೂಲ ಎಂಬುದನ್ನು ಮರೆಯಬಾರದು ಎಂದು ಸಲಹೆ ನೀಡಿದರು.

ರಂಗಭೂಮಿ ಕಲಾವಿದೆ, ಕನ್ನಡ ಚಲನಚಿತ್ರ ನಟಿ ಮಾಲಾಶ್ರೀ ಮೈಸೂರು ಅವರು ಮುಖ್ಯ ಅತಿಥಿ ಸ್ಥಾನದಿಂದ ‘ರಂಗಭೂಮಿಯ ಕೆಲ ಸಂಭಾಷಣೆಗಳನ್ನು ಹೇಳುವ ಮೂಲಕ ಹೆಣ್ಣು ಸ್ವಾಭಿಮಾನದಿಂದ ಬದುಕಬೇಕು ಎಂದು ಪ್ರೋತ್ಸಾದಾಯಕ ಮಾತುಗಳನ್ನು ಆಡಿದರು.

ಬಂಡಾಯ ಸಾಹಿತಿ ಬಿ. ಟಿ. ಲಲಿತಾ ನಾಯಕ್, ವಿಶ್ವಸ್ಥ ಮಂಡಳಿಯ ಪ್ರಮುಖ ಎಂ.ಜಿ. ದೇಶಪಾಂಡೆ, ವೇದಿಕೆ ರಾಜ್ಯಾಧ್ಯಕ್ಷ ರಜನಿ ಅಶೋಕ, ಡಾ. ಅಶೋಕ ಜೀರಗ್ಯಾಳ್, ಸೌಗಂಧಿಕ ಜೋಯಿಸ್ ಸೇರಿದಂತೆ ಇತರೆ ಗಣ್ಯರು ವೇದಿಕೆ ಮೇಲಿದ್ದರು.

‘ಸಿರಿಗನ್ನಡ ವೇದಿಕೆ’ ಸಂಸ್ಥಾಪಕ ಅಧ್ಯಕ್ಷ ಎಂ.ಎಸ್. ವೆಂಕಟರಾಮಯ್ಯ, ಗಾಯಕಿ ಲತಾ ಮಂಗೇಶಕುಮಾರ, ವಾಯುಸೇನಾ ಹಿರಿಯ ಅಧಿಕಾರಿ ಬಿಪಿನ್ ರಾವತ್, ತತ್ವಪದಕಾರ ಇಬ್ರಾಹಿಂ ಸುತಾರ್ ಸೇರಿದಂತೆ ಕನ್ನಡಕ್ಕಾಗಿ ದುಡಿದ ಗಣ್ಯರನ್ನುಸಮಾರಂಭಕ್ಕೂ ಮುನ್ನ ಸ್ಮರಿಸಲಾಯಿತು. ವೇದಿಕೆ ಸಂಸ್ಥಾಪಕ ಕಾರ್ಯಾಧ್ಯಕ್ಷ ಹಾಗೂ ಕಾರ್ಯದರ್ಶಿ ಎ. ಹೇಮಗಂಗಾ, ಜಯಾ ಚಿನ್ಮಯಿ ಸೇರಿದಂತೆ ಇತರೆ ಗಣ್ಯರು ಪಾಲ್ಗೊಂಡಿದ್ದರು.

ಕೀರ್ತೀ ಜಹಾಗೀರದಾರ, ಶರಧಿ ಜಹಾಗೀರದಾರ ಹಾಗೂ ತಂಡವದರು ಪ್ರಾರ್ಥಿಸಿದರು. ಕಲಾವಿದೆ ವಾಣಿ ಬಸವರಾಜ ಹಾಗೂ ತಂಡದವರು ನಾಡಗೀತೆ ಹಾಡಿದರು. ಮಾಲಾ ಚಂದ್ರಶೇಖರ ಚೆಲುವಿನಹಳ್ಳಿ ಸ್ವಾಗತಿಸಿದರು. ಜ್ಯೋತಿ ಕುಲಕರ್ಣಿ ನಿರೂಪಿಸಿದರು ಸಿರಿಗನ್ನಡ ವೇದಿಕೆ ಸದಸ್ಯರು ಹಾಗೂ ತಂಡದ ಕಲಾವಿದರು ನೀಡಿದ ಯಕ್ಷಗಾನ ಸೇರಿದಂತೆ ಇತರೆ ಸಾಂಸ್ಕೃತಿಕ ಕಾರ್ಯಕ್ರಮಗಳು ಗಮನ ಸೆಳೆದವು. ‘ಬುಕ್ ಬ್ರಹ್ಮ’ ಯು ಟ್ಯೂಬ್ ಚಾನಲ್ ಮೂಲಕ ಈ ಸಮಾರಂಭವು ನೇರವಾಗಿ ಪ್ರಸಾರಗೊಂಡಿತು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12795
News Karnataka Kannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು