News Karnataka Kannada
Tuesday, April 16 2024
Cricket
ಬೆಂಗಳೂರು ನಗರ

ತಮಟೆ ಬಡಿಯೋದು ನಿಲ್ಲಿಸಿದ್ದಕ್ಕೆ ಮಚ್ಚಿನೇಟು!

ಜಮ್ಮು ಮತ್ತು ಕಾಶ್ಮೀರದ ರಿಯಾಸಿಯಲ್ಲಿ ಕಾರೊಂದು ಕಂದಕಕ್ಕೆ ಬಿದ್ದ ಪರಿಣಾಮ ದಂಪತಿ ಹಾಗೂ ಮಗು ಸಾವನ್ನಪ್ಪಿದ್ದಾರೆ.
Photo Credit :

ಬೆಂಗಳೂರು : ತಮಟೆ ಬಡಿಯೋದನ್ನು ನಿಲ್ಲಿಸಿದ್ರು ಎಂಬ ಕಾರಣಕ್ಕೆ ಪುಂಡರ ಗುಂಪೊಂದು ದೇವಾಲಯದ ಅರ್ಚಕರು, ತಮಟೆಯವರ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿರುವ ಘಟನೆ ತಾವರಕೆರೆ ಪೊಲೀಸ್ ಠಾಣೆ ವ್ಯಾಪ್ತಿಯ ಕನ್ನಲ್ಲಿಯ ಶ್ರೀ ಶನೇಶ್ವರಸ್ವಾಮಿ ದೇವಾಲಯದ ಬಳಿ ತಡರಾತ್ರಿ ನಡೆದಿದೆ.

ಪುಂಡರ ಹಾವಳಿಗೆ ದೇವಸ್ಥಾನದ ಅರ್ಚಕ ಶಶಿಕುಮಾರ್, ಬಸವರಾಜ್ ಸೇರಿ ನಾಲ್ಕೈದು ಜನರು ಗಾಯಗೊಂಡಿದ್ದಾರೆ. ನಿನ್ನೆಯಿಂದ ಕನ್ನಲ್ಲಿಯ ಶ್ರೀ ಶನೇಶ್ವರ ಸ್ವಾಮಿ ದೇವಸ್ಥಾನದ ಜಾತ್ರೆ ಆರಂಭವಾಗಿದೆ. ರಾತ್ರಿ ವೇಳೆ ಅಲ್ಲಿಗೆ ಬಂದಿದ್ದ 8 ಯುವಕರ ಗುಂಪು ತಮಟೆ ಹೊಡೆಯುತ್ತಿದ್ದವರನ್ನು ಬೆದರಿಸಿಕೊಂಡು ಡ್ಯಾನ್ಸ್ ಆರಂಭಿಸಿದೆ.

ಈ ವೇಳೆ ತಮಟೆ ಬಡಿಯೋದು ನಿಲ್ಲಿಸಿ, ಸ್ಥಳೀಯರು ಮತ್ತು ದೇವಸ್ಥಾನದವರು ‘ಯಾರು ನೀವು ?’ ಎಂದು ಪ್ರಶ್ನಿಸಿದಾಗ ಅಲ್ಲಿಂದ ಜಾಗ ಖಾಲಿ ಮಾಡಿದ್ದ ಗ್ಯಾಂಗ್ ಮತ್ತೆ ನಡುರಾತ್ರಿ ಲಾಂಗು, ಮಚ್ಚು ಸಮೇತ ಬಂದು ಏಕಾಏಕಿ ಅರ್ಚಕರು ಮತ್ತು ದೇವಾಲಯದ ಸಿಬ್ಬಂದಿ ಮೇಲೆ ಮನಬಂದಂತೆ ಹಲ್ಲೆ ಮಾಡಿದೆ.

ಸದ್ಯ ಗಾಯಗೊಂಡವರು ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ತಾವರೆಕೆರೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12790
NewsKannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು