News Karnataka Kannada
Tuesday, April 23 2024
Cricket
ಬೆಂಗಳೂರು ನಗರ

ಡ್ರಗ್ಸ್ ಪ್ರಕರಣ: ಆರೋಪಿ ಆದಿತ್ಯ ಆಳ್ವ ರೆಸಾರ್ಟ್ ಮೇಲೆ ದಾಳಿ, ಮ್ಯಾನೇಜರ್ ವಶಕ್ಕೆ

Photo Credit :

ಡ್ರಗ್ಸ್ ಪ್ರಕರಣ: ಆರೋಪಿ ಆದಿತ್ಯ ಆಳ್ವ ರೆಸಾರ್ಟ್ ಮೇಲೆ ದಾಳಿ, ಮ್ಯಾನೇಜರ್ ವಶಕ್ಕೆ

ಬೆಂಗಳೂರು: ರಾಜ್ಯದಲ್ಲಿ ದಿನದಿಂದ ದಿನಕ್ಕೆ ಹೊಸ ತಿರುವು ಪಡೆದುಕೊಳ್ಳುತ್ತಿರುವ ಡ್ರಗ್ಸ್ ಪ್ರಕರಣದ ಆರೋಪಿ ಆದಿತ್ಯ ಆಳ್ವಗೆ ಸಂಬಂಧಿಸಿದ ರೆಸಾರ್ಟ್ ಮೇಲೆ ಸಿಸಿಬಿ ದಾಳಿ ನೆಡೆಸಿದೆ.

ಡ್ರಗ್ಸ್ ದಂಧೆ ಪ್ರಕರಣದ ಮುಂದುವರೆದ ಭಾಗವಾಗಿ ಈ ಕಾರ್ಯಾಚರಣೆ ನಡೆದಿದ್ದು ಎನ್ನಲಾಗಿದ್ದು ಇಂದು ಬೆಳಗ್ಗೆ ಸಿಸಿಬಿ ಅಧಿಕಾರಿಗಳು , ಸಿಸಿಬಿ ಅಧಿಕಾರಿಗಳು ಹೆಬ್ಬಾಳದಲ್ಲಿರುವ ಹೌಸ್ ಆಫ್ ಲೈಫ್ ರೆಸಾರ್ಟ್ ಮೇಲೆ ದಾಳಿ ಮಾಡಿ ಶೋಧಕಾರ್ಯ ನಡೆಸಿದ್ದಾರೆ.

ಸಿಸಿಬಿ ಇನ್ಸ್ ಪೆಕ್ಟರ್ ಗಳಾದ ಹರೀಶ್, ಪುನೀತ್ ಹಾಗೂ ಅಂಜುಮಾಲಾ ನಾಯಕ್ ಅವರ ನೇತೃತ್ವದಲ್ಲಿ ಈ ದಾಳಿ ನಡೆದಿದೆ.

ಮಾಹಿತಿ ಪ್ರಕಾರ ದಾಳಿ ವೇಳೆ ರೆಸಾರ್ಟ್ ನಲ್ಲಿ ಕೆಲಸಗಾರರನ್ನು ಹೊರತುಪಡಿಸಿ ಬೇರಾರು ಇರಲಿಲ್ಲ ಎನ್ನಲಾಗಿದೆ. ವಿಚಾರಣೆ ಹಿನ್ನೆಲೆ ಆದಿತ್ಯ ಆಳ್ವನ ಮ್ಯಾನೇಜರ್ ರಾಮದಾಸ್ ಎಂಬವರನ್ನು ಸಿಸಿಬಿ ಅಧಿಕಾರಿಗಳು ವಶಕ್ಕೆ ತೆಗೆದುಕೊಂಡು ವಿಚಾರಣೆ ನೆಡೆಸುತ್ತಿದ್ದಾರೆ. ಆದಿತ್ಯ ಆಳ್ವ ಮಾಜಿ ಸಚಿನ ಜೀವರಾಜ್ ಆಳ್ವ ಅವರ ಪುತ್ರನಾಗಿದ್ದು, ಈತ ತಲೆಮರಿಸಿಕೊಂಡಿದ್ದಾನೆ.

ಡ್ರಗ್ಸ್ ದಂಧೆಯ ಎ6 ಆರೋಪಿಯಾಗಿರುವ ಈತನನ್ನು ಅಧಿಕಾರಿಗಳು ಹುಡುಕುತ್ತಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
149

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು