News Karnataka Kannada
Friday, April 12 2024
Cricket
ಬೆಂಗಳೂರು ನಗರ

ಡಿಜಿ, ಕೆಜಿ ಹಳ್ಳಿ ಗಲಭೆ ಪ್ರಕರಣ: ತನಿಖೆ ಸಿಸಿಬಿಗೆ ವಹಿಸಿದ ಸರ್ಕಾರ

Photo Credit :

ಡಿಜಿ, ಕೆಜಿ ಹಳ್ಳಿ ಗಲಭೆ ಪ್ರಕರಣ: ತನಿಖೆ ಸಿಸಿಬಿಗೆ ವಹಿಸಿದ ಸರ್ಕಾರ

ಬೆಂಗಳೂರು: ಡಿಜಿ ಹಳ್ಳಿ ಮತ್ತು ಕೆಜಿ ಹಳ್ಳಿಯಲ್ಲಿ ನಡೆದಿರುವ ಗಲಭೆ ಪ್ರಕರಣದ ತನಿಖೆಯನ್ನು ಸಿಸಿಬಿಗೆ ವಹಿಸಿ ಸರ್ಕಾರ ಆದೇಶ ಜಾರಿ ಮಾಡಿದೆ.

ಈ ಬಗ್ಗೆ ಗೃಹ ಇಲಾಖೆಯು ಆದೇಶ ಜಾರಿ ಮಾಡಿದೆ.

ಆಗಸ್ಟ್ 11ರಂದು ಪುಲಕೇಶಿನಗರದ ಶಾಸಕ ಅಖಂಡ ಶ್ರೀನಿವಾಸ ಮೂರ್ತಿ ಮನೆಗೆ ಸಾವಿರಾರು ಮಂದಿ ಗಲಭೆಕೋರರು ನುಗ್ಗಿ ಮನೆಯನ್ನು ಧ್ವಂಸ ಮಾಡಿದ್ದರು ಮತ್ತು ಬೆಂಕಿ ಹಚ್ಚಿದ್ದರು.

ಇದೇ ವೇಳೆ ಗಲಭೆಕೋರರು ಡಿಜಿ ಹಳ್ಳಿ ಪೊಲೀಸ್ ಠಾಣೆಗೂ ದಾಳಿ ಮಾಡಿದ್ದರು. ಪೊಲೀಸರು ಗಲಭೆಕೋರರನ್ನು ನಿಗ್ರಹಿಸಲು ಗುಂಡು ಹಾರಿಸಿದ್ದರು. ಘಟನೆಗೆ ಸಂಬಂಧಿಸಿದಂತೆ ಈಗಾಗಲೇ 70 ಎಫ್ ಐಆರ್ ದಾಖಲಿಸಲಾಗಿದೆ.

ಗಲಭೆ ಮತ್ತು ಗಲಭೆ ಸಂಬಂಧಿ ಘಟನಾವಳಿಗಳಲ್ಲಿ ನಾಲ್ಕು ಮಂದಿ ಮೃತಪಟ್ಟಿದ್ದರು.

ಗಲಭೆಯಲ್ಲಿ ಭಾಗಿಯಾದ ಹೆಚ್ಚಿನ ಆರೋಪಿಗಳಿಗೆ ರೌಡಿ ಹಿನ್ನೆಲೆ ಇರುವ ಕಾರಣದಿಂದಾಗಿ ಪ್ರಕರಣದ ತನಿಖೆಯನ್ನು ಸಿಸಿಬಿಗೆ ವಹಿಸಲಾಗಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
187

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು